ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?

ಭಾರತದ ಮಾರುಕಟ್ಟೆಯಲ್ಲಿ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಮೊಟೊಕಾರ್ಪ್, ರೆಡಿ ಮಾಡುವ ಸ್ಪ್ಲೆಂಡರ್ ಪ್ಲಸ್ ಬೈಕ್‌ಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಅದರ ಅತ್ಯುತ್ತಮ ಮೈಲೇಜ್ ಪ್ರತಿಯೊಬ್ಬ ಗ್ರಾಹಕರನ್ನು ಸೆಳೆಯುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದೀಗ ಸ್ಕೂಟರ್ ವಿಭಾಗದಲ್ಲಿ ತನ್ನದೇ ಛಾಪನ್ನು ಮೂಡಿಸಲು ಹೀರೋ ಮುಂದಾಗಿದೆ.

ಹೀರೋ ಮೊಟೊಕಾರ್ಪ್ ದೇಶೀಯ ಖರೀದಿದಾರರ ಬೇಡಿಕೆಗೆ ಅನುಗುಣವಾಗಿ ಹೊಚ್ಚ ಹೊಸ ಸ್ಕೂಟರ್ ಅನ್ನು ಕೆಲವೇ ದಿನಗಳಲ್ಲಿ ಲಾಂಚ್ ಮಾಡಲಿದೆ. ಈ ಸ್ಕೂಟರ್‌ಗೆ 'ಮೆಸ್ಟ್ರೋ Xoom' ಎಂಬ ಹೆಸರಿಂದ ಕರೆಯಲಾಗಿದ್ದು, ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. ಅದರಲ್ಲಿ ಪ್ರಮುಖವಾಗಿ 12 ಇಂಚಿನ ವೀಲ್ಸ್ ಜೊತೆಗೆ 110 ಸಿಸಿ ಸಾಮರ್ಥ್ಯದ ಎಂಜಿನ್. ಇದರ ಕಾರ್ಯಕ್ಷಮತೆ ಗ್ರಾಹಕರಿಗೆ ಇಷ್ಟವಾಗಲಿದ್ದು, ಸ್ಪ್ಲೆಂಡರ್ ಪ್ಲಸ್ ಅಂತೇ ಇದನ್ನು ಖರೀದಿ ಮಾಡಬಹುದು ಎಂಬ ನಿರೀಕ್ಷೆಯನ್ನು ಕಂಪನಿ ಹೊಂದಿದೆಯಂತೆ.

ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?

ಕೆಲದಿನಗಳ ಹಿಂದಷ್ಟೇ ಹೀರೋ, ನೂತನ ಸ್ಕೂಟರ್‌ನ ಟೀಸರ್ ಅನ್ನು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿತ್ತು. ಅದದಲ್ಲಿ ಈ ಸ್ಕೂಟರ್‌ ಹೊರ ಭಾಗದಲ್ಲಿ ಸಾಕಷ್ಟು ಬದಲಾವಣೆ ಹೊಂದಿರುವುದು ಸ್ಪಷ್ಟವಾಗಿ ನೋಡಬಹುದಾಗಿತ್ತು. ಫ್ರಂಟ್ ಅತ್ಯಾಕರ್ಷಕ ಎಲ್ಇಡಿ ಹೆಡ್‌ಲೈಟ್‌, ಎಕ್ಸ್ - ಆಕಾರದ ಎಲ್ಇಡಿ ಟೈಲ್ ಲೈಟ್ ಅನ್ನು ಹೊಂದಿದೆ. ಇಷ್ಟೇಅಲ್ಲದೆ, ಬ್ಲೂಟೂತ್ ಸಂಪರ್ಕದೊಂದಿಗೆ ಫುಲ್ ಡಿಜಿಟಲ್ ಡ್ಯಾಶ್‌ಬೋರ್ಡ್ ಅನ್ನು ಪಡೆದಿದೆ ಎಂದು ಹೇಳಲಾಗಿದೆ.

ಈ ಹೊಸ ಸ್ಕೂಟರ್ ಎಂಜಿನ್ ಕಾರ್ಯಕ್ಷಮತೆಯ ಬಗ್ಗೆ ಹೀರೋ ಕಂಪನಿಯು ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ಇದು ಉತ್ತಮ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಮೂಲಗಳ ಪ್ರಕಾರ, ಹೀರೋದ ಮೆಸ್ಟ್ರೋ ಎಡ್ಜ್ ಮತ್ತು ಪ್ಲೆಷರ್ + XTEC ಹೊಂದಿರುವ 110 ಸಿಸಿ ಸಿಂಗಲ್ ಸಿಲಿಂಡರ್ ಪವರ್‌ಟ್ರೇನ್ ಹೊಂದಿರಲಿದ್ದು, 8 bhp ಗರಿಷ್ಠ ಪವರ್ 8.7 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯದನ್ನು ಪಡೆದಿರಲಿದೆ. ಅಲ್ಲದೆ, ಫ್ಯುಯೆಲ್ ಉಳಿಸಲು ಸ್ಟಾರ್ಟ್/ಸ್ಟಾಪ್ ಬಟನ್ ಅನ್ನು ಹೊಂದಿರಬಹುದು.

ಹೀರೋ ಮೊಟೊಕಾರ್ಪ್ ಭಾರತದ ಮಾರುಕಟ್ಟೆಯಲ್ಲಿ ಎರಡು ಪ್ರಮುಖ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿದೆ. ಅವುಗಳಿಗೆ ಖರೀದಿದಾರರಿಂದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ಲೆಷರ್ ಪ್ಲಸ್ ಆರಂಭಿಕ ಬೆಲೆ ರೂ.68,368 ಇದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.77,268 (ಎಕ್ಸ್ ಶೋರೂಂ, ದೆಹಲಿ) ಇದೆ. ಇನ್ನು, ಮೆಸ್ಟ್ರೋ ಎಡ್ಜ್‌ ರೂ.69,816 ಪ್ರಾರಂಭಿಕ ಬೆಲೆ ಹಾಗೂ ಟಾಪ್ ಎಂಡ್ ಮಾದರಿಗೆ ರೂ.74,910 ದರವನ್ನು ಹೊಂದಿದೆ. ಆದರೆ, ಈವರೆಗೆ ಕೆಲವೇ ದಿನಗಳಲ್ಲಿ ಲಾಂಚ್ ಆಗಲಿರುವ 'ಮೆಸ್ಟ್ರೋ Xoom' ಬೆಲೆಯನ್ನು ಕಂಪನಿಯು ಬಹಿರಂಗಪಡಿಸಿಲ್ಲ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಪ್ಲೆಷರ್ ಪ್ಲಸ್ Xtec, 2 ರೂಪಾಂತರ ಹಾಗೂ 4 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. 110.9 ಸಿಸಿ BS6 ಎಂಜಿನ್‌ ಹೊಂದಿದ್ದು, 8 bhp ಗರಿಷ್ಠ ಪವರ್ 8.7 Nm ಪೀಕ್ ಟಾರ್ಕ್ ಅನ್ನು ಉತ್ಪದಿಸುವ ಸಾಮರ್ಥ್ಯ ಹೊಂದಿದ್ದು, ಫ್ರಂಟ್ ಹಾಗೂ ರೇರ್ ಡ್ರಮ್ ಬ್ರೇಕ್‌ ಆಯ್ಕೆಯನ್ನು ಹೊಂದಿದೆ. 4.8 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಪಡೆದಿದ್ದು, 50 kmpl ಮೈಲೇಜ್ ನೀಡಲಿದೆ. ಬರೋಬ್ಬರಿ 104 ಕೆಜಿ ತೂಕವನ್ನು ಹೊಂದಿದೆ.

ಹೀರೋ ಮೆಸ್ಟ್ರೋ ಎಡ್ಜ್‌ 125, 4 ರೂಪಾಂತರ ಮತ್ತು 6 ಬಣ್ಣಗಳಲ್ಲಿ ಗ್ರಾಹಕರಿಗೆ ದೊರೆಯಲಿದ್ದು, 124.6 ಸಿಸಿ BS6 ಎಂಜಿನ್‌ ಹೊಂದಿದ್ದು, ಇದು 9 bhp ಪವರ್ ಹಾಗೂ 10.4 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, ಫ್ರಂಟ್ ಡಿಸ್ಕ್ ಮತ್ತು ರೇರ್ ಡ್ರಮ್ ಬ್ರೇಕ್ ಅನ್ನು ಹೊಂದಿದೆ. ಈ ಸ್ಕೂಟರ್ 112 ಕೆಜಿ ತೂಕವಿದ್ದು, 5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದ್ದು, 45 kmpl ಮೈಲೇಜ್ ನೀಡಲಿದೆ.

ಮುಂಬರಲಿರುವ ಹೀರೋ ಮೆಸ್ಟ್ರೋ Xoom ಕೂಡ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಬರಲಿದ್ದು, ಇದರ ಮೇಲೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿದೆ. ಇದು ಆಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಟಿವಿಎಸ್ ಜುಪಿಟರ್ ಮತ್ತು ಹೋಂಡಾ ಆಕ್ಟಿವಾ 6G ಹೆಚ್ ಟೆಕ್‌ನಂತಹ ಸ್ಕೂಟರ್‌ಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ, ಹೆಚ್ಚಿನ ಖರೀದಿದಾರರನ್ನು ಸೆಳೆಯುವ ಸಾಧ್ಯತೆ ಇರುವುದರಿಂದ ದೇಶದ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಯಾಗುವ ಸಾದ್ಯತೆಯಿದೆ ಎಂದು ಹೇಳಬಹುದು.

Most Read Articles

Kannada
English summary
Hero maestro xoom scooter launch india soon details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X