ಬಹುನಿರೀಕ್ಷಿತ 'ಹೀರೋ Xoom 110 ಸಿಸಿ' ಟೀಸರ್: ಜ.30ಕ್ಕೆ ಸ್ಕೂಟರ್ ಬಿಡುಗಡೆ.. ಹೋಂಡಾ ಡಿಯೋಗೆ ಪ್ರತಿಸ್ಪರ್ಧಿ!

ಭಾರತದ ಮಾರುಕಟ್ಟೆಯಲ್ಲಿ ಹೀರೋ ಮೋಟೋಕಾರ್ಪ್ ತಯಾರಿಸುವ ದ್ವಿಚಕ್ರ ವಾಹನಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅವುಗಳ ಕೈಗೆಟುಕುವ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳನ್ನು ಗ್ರಾಹಕರು ಲೈಕ್ ಮಾಡುತ್ತಾರೆ. ಅದರಂತೆ ಕಂಪನಿಯು ಖರೀದಿದಾರರ ಅಭಿರುಚಿಗೆ ತಕ್ಕಂತೆ ವಿವಿಧ ಬೈಕ್ ಹಾಗೂ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುತ್ತದೆ.

ಇದೀಗ ಹೀರೋ ಮೋಟೋಕಾರ್ಪ್ ಜನವರಿ 30ರಂದು ಹೊಸ Xoom 110 ಸ್ಕೂಟರ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ಸಿದ್ಧವಾಗುತ್ತಿದೆ. ಅದರ ಭಾಗವಾಗಿ ಮೊದಲಿಗೆ ಅಧಿಕೃತ ಟೀಸರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನಗಳಲ್ಲಿ ಹೀರೋ ಅತ್ಯಧಿಕ ಪಾಲನ್ನು ಹೊಂದಿದೆ. ಇದರ ಯಶಸ್ಸಿಗೆ ಕಾರಣ, ಮೋಟಾರ್‌ಸೈಕಲ್ ಗಳಾಗಿವೆ. ಆದರೆ, ಸ್ಕೂಟರ್‌ ವಿಚಾರಕ್ಕೆ ಬಂದಾಗ ಕೊಂಚ ಹಿಂದುಳಿದಿದ್ದು, ಹೋಂಡಾ ಪ್ರಮುಖ ಬ್ರಾಂಡ್ ಆಗಿದೆ.

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರ ಬಿಡುಗಡೆ: ಉತ್ಪಾದನಾ ಘಟಕ ಉದ್ಘಾಟನೆ

ನೂತನ ಹೀರೋ Xoom ಸ್ಕೂಟರ್ ಸ್ಪೋರ್ಟಿಯರ್ ಲುಕ್ ಹೊಂದಿದ್ದು, ಹೋಂಡಾದ ಡಿಯೋ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಲಿದೆ. ಈ ಹೀರೋ Xoom ಸ್ಕೂಟರ್, ಮುಂಭಾಗದ ಫಾಸಿಯಾದಲ್ಲಿ LED ಹೆಡ್‌ಲೈಟ್ ಹೊಂದಿದ್ದು, 'X' ವಿಭಿನ್ನ ಆಕಾರದಲ್ಲಿ LED ಟೈಲ್ ಲೈಟ್ ಅನ್ನು ಪಡೆದಿದೆ. ಜೊತೆಗೆ ಯುಎಸ್‌ಬಿ ಫೋನ್ ಚಾರ್ಜರ್ ಹೊಂದಿದೆ. ಇಷ್ಟೇಅಲ್ಲದೆ, ಇತರೆ ಹೀರೋ ಸ್ಕೂಟರ್‌ಗಳಂತೆ ಅದರ ಇನ್ಸ್ರುಮೆಂಟಲ್ ಕನ್ಸೋಲ್‌ನ ಕೆಳಗೆ ಸ್ಟೋರೇಜ್ ಮಾಡುವ ಸ್ಥಳವನ್ನು ಹೊಂದಿದೆ.

ಹ್ಯಾಂಡಲ್ ನ ಎರಡು ತುದಿಗಳಲ್ಲಿ ಟರ್ನ್ ಇಂಡಿಕೇಟರ್ಸ್ ಪಡೆದಿದ್ದು, ಇದು ಸ್ವಿಚ್ ಗೇರ್‌ನಲ್ಲಿ i3S ಸ್ವಿಚ್ ಬಟನ್ ಅನ್ನು ಹೊಂದಿರಲಿದೆ. ಟ್ರಿಪ್ ಮೀಟರ್‌, ಓಡೋಮೀಟರ್, ಕ್ಲಾಕ್, ಫ್ಯುಯೆಲ್ ಲೆವೆಲ್ ಇಂಡಿಕೇಟರ್, ಬ್ಲೂಟೂತ್ ಜೊತೆಗೆ ನೋಟಿಫಿಕೇಶನ್, ಟರ್ನ್-ಬೈ-ಟರ್ನ್ ನ್ಯಾವಿಗೇಶನ್‌, ನೂತನ ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಆದರೆ, ಪ್ರತಿಸ್ಪರ್ಧಿ ಹೋಂಡಾ ಡಿಯೊ ಹೊಂದಿರುವ ರೀತಿ ಹೊರಭಾಗದ ಫ್ಯುಯೆಲ್ ಫಿಲ್ಲರ್ ಕ್ಯಾಪ್ ಅನ್ನು ಪಡೆದಿರುವುದಿಲ್ಲ.

ಹೀರೋ Xoom 110 ಸಿಸಿ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಪ್ಲೆಷರ್+ ಮತ್ತು ಮೆಸ್ಟ್ರೋ ಎಡ್ಜ್ 110 ಸ್ಕೂಟರ್ ರೀತಿಯೇ 110.9ಸಿಸಿ ಎಂಜಿನ್‌ ಹೊಂದಿದ್ದು, 8 bhp ಗರಿಷ್ಠ ಪವರ್ ಮತ್ತು 8.7 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸಸ್ಪೆನ್ಷನ್ ವಿಚಾರಕ್ಕೆ ಬಂದರೆ, ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಹೊಂದಿದ್ದು, ಅಲಾಯ್ ವೀಲ್ಸ್ ಮತ್ತು ಫ್ರಂಟ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿರಲಿದೆ. ಎಂಟ್ರಿ ಲೆವೆಲ್ ರೂಪಾಂತರದಲ್ಲಿ ಸ್ಟೀಲ್ ವೀಲ್ಸ್ ಮತ್ತು ಫ್ರಂಟ್ ಡ್ರಮ್ ಬ್ರೇಕ್ ಗಳನ್ನು ಹೊಂದಿರಲಿದೆ.

ಈ ಹೊಸ ಸ್ಕೂಟರ್ ಖಂಡಿತವಾಗಿಯೂ ಹೀರೋನ 110ಸಿಸಿ ಸ್ಕೂಟರ್‌ಗಳಂತೆ ದುಬಾರಿಯಾಗಲಿರಲಿದ್ದು, ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ 'ಮೆಸ್ಟ್ರೋ ಎಡ್ಜ್ 110ಕ್ಕಿಂತಲ್ಲೂ ಹೆಚ್ಚಿನ ದರವನ್ನು ಹೊಂದಿರಬಹುದು. ಸ್ಪೋರ್ಟಿ ಡಿಸೈನ್ ಹಾಗೂ 110 ಸಿಸಿ ಎಂಜಿನ್‌ ಹೊಂದಿದೆ. ಸದ್ಯಕ್ಕೆ ಈ ನೂತನ ಸ್ಕೂಟರ್ ಬೆಲೆಯನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಈ ಬಗ್ಗೆ ಜನವರಿ 30ರಂದು ಮಾಹಿತಿ ಸಿಗಲಿದೆ. ಹೋಂಡಾ ಕಂಪನಿ ನಾಳೆ (ಮಂಗಳವಾರ) ಭಾರತದಲ್ಲಿ ಹೊಸ ಆಕ್ಟಿವಾ ಸ್ಮಾರ್ಟ್ ರೂಪಾಂತರವನ್ನು ಬಿಡುಗಡೆ ಮಾಡಲಿದೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಹೀರೋ ಮೆಸ್ಟ್ರೋ ಎಡ್ಜ್ 110, ರೂ.70,899 ಆರಂಭಿಕ ಬೆಲೆಯನ್ನು ಹೊಂದಿದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.76,151 ಇದೆ. ಈ ಸ್ಕೂಟರ್ 2 ರೂಪಾಂತರಗಳು ಮತ್ತು 7 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. 110.9ಸಿಸಿ BS6 ಎಂಜಿನ್‌ ಹೊಂದಿದ್ದು, 8.04 bhp ಪವರ್ ಮತ್ತು 8.7 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಫ್ರಂಟ್ ಮತ್ತು ರೇರ್ ಎರಡೂ ಡ್ರಮ್ ಬ್ರೇಕ್‌ಗಳನ್ನು ಪಡೆದಿದ್ದು, 112 ಕೆಜಿ ತೂಕ ಹಾಗೂ 5 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.

ಮೆಸ್ಟ್ರೋ ಎಡ್ಜ್ 110 ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಎಂಜಿನ್ ಇಮೊಬಿಲೈಸರ್, ಎಲ್‌ಇಡಿ ಟೈಲ್ಯಾಂಪ್ ಮತ್ತು ಲಿಂಕ್ಡ್ ಬ್ರೇಕಿಂಗ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇಷ್ಟೇಅಲ್ಲದೆ, ಇಂಟಿಗ್ರೇಟೆಡ್ ಡಿಜಿಟಲ್ ಡಿಸ್ಪ್ಲೇಯೊಂದಿಗೆ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಫ್ರಂಟ್ ಲಗೇಜ್ ಹುಕ್, 22-ಲೀಟರ್ ಅಂಡರ್-ಸೀಟ್ ಸ್ಟೋರೇಜ್ ಕಂಪಾರ್ಟ್‌ಮೆಂಟ್ ಅನ್ನು ಹೊಂದಿದ್ದು, ಇದು ಹೋಂಡಾ ಆಕ್ಟಿವಾ 6G, ಸುಜುಕಿ ಆಕ್ಸೆಸ್ 125 ಮತ್ತು TVS ಜುಪಿಟರ್ ಗೆ ಪ್ರತಿಸ್ಪರ್ಧಿಯಾಗಿದೆ ಎಂದು ಹೇಳಬಹುದು.

Most Read Articles

Kannada
English summary
Hero xoom 110cc scooter launch 30th jan details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X