ಜ.26ಕ್ಕೆ 150 km ರೇಂಜ್ ನೀಡುವ ಸೆಲ್ಫ್ ಬ್ಯಾಲೆನ್ಸಿಂಗ್ BeiGo x4 ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ವಾಹನಗಳಿಗೆ (EV) ಬಹುಬೇಡಿಕೆ ಸೃಷ್ಟಿಯಾಗಿದೆ. ಗ್ರಾಹಕರು, ಇವುಗಳ ಖರೀದಿಗೆ ಆಸಕ್ತಿ ತೋರಿಸುತ್ತಿದ್ದಾರೆ. ಬೆಂಗಳೂರು ಮೂಲದ ಇವಿ ಸ್ಟಾರ್ಟ್ಅಪ್ ಇಗೋವಿಸೆ (iGowise) ಮೊಬಿಲಿಟಿ ಬೇಯಿಗೋ ಎಕ್ಸ್ 4 (BeiGo x4) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಜನವರಿ 26 ಗಣರಾಜ್ಯೋತ್ಸವದ ದಿನ ಅನಾವರಣ ಮಾಡಲಿದೆ.

ಬೇಯಿಗೋ ಎಕ್ಸ್ 4ನ್ನು ಕಂಪನಿಯು ಸ್ಕೂಟರ್ ವಿಭಾಗದ ಎಸ್‌ಯುವಿ ಎಂದು ಕರೆದುಕೊಂಡಿದ್ದು, ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ತಿಳಿಸಿದೆ. ಇದರಲ್ಲಿ ಉಪಯೋಗ ಮಾಡಲಾಗಿರುವ ಅಗ್ನಿ ನಿರೋಧಕ (fire-resistant) ಬ್ಯಾಟರಿ LifePO4, ಸಂಪೂರ್ಣ ಚಾರ್ಜ್ ನಲ್ಲಿ ಬರೋಬ್ಬರಿ 150 ಕಿಲೋಮೀಟರ್ ರೇಂಜ್ ನೀಡುವ ಸಾಮರ್ಥ್ಯ ಪಡೆದಿದೆ. ಈ ಸ್ಕೂಟರ್ 60 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಜೊತೆಗೆ ಪಿಲಿಯನ್ ಫುಟ್‌ರೆಸ್ಟ್, ಉತ್ತಮವಾದ ಫ್ಲಾಟ್ ಫ್ಲೋರ್ ಲೆಗ್‌ರೂಮ್ ಮತ್ತು ಟ್ರಿಪಲ್ ಡಿಸ್ಕ್ ಆಂಟಿ ಸ್ಕಿಡ್ ಬ್ರೇಕಿಂಗ್ ಸಿಸ್ಟಮ್ ಅನ್ನು ಪಡೆದಿದೆ.

ಜ.26ಕ್ಕೆ 150 km ರೇಂಜ್ ನೀಡುವ ಸೆಲ್ಫ್ ಬ್ಯಾಲೆನ್ಸಿಂಗ್ BeiGo x4 ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ನೂತನ ಬೇಯಿಗೋ ಎಕ್ಸ್ 4 ಸ್ಕೂಟರ್ ನಲ್ಲಿ ಟ್ವಿನ್ ವೀಲ್ ಇಂಟಿಗ್ರೇಟೆಡ್ ಪವರ್ ಟ್ರೇನ್ ಉಪಯೋಗ ಮಾಡಲಾಗಿದೆ. ಜೊತೆಗೆ ಸೆಲ್ಫ್ ಬ್ಯಾಲೆನ್ಸಿಂಗ್ ಆಗಿರುವುದರಿಂದ ಸಂಚಾರ ದಟ್ಟಣೆಯ ರಸ್ತೆಗಳು, ಇಳಿಜಾರು ರಸ್ತೆ ಹಾಗೂ ಕೆಲವೊಮ್ಮೆ ಹಿಮ್ಮುಖವಾಗಿ ಸುಲಭವಾಗಿ ಚಲಿಸಬಹುದು. ಈ ಸ್ಕೂಟರ್ ಬಗ್ಗೆ ಮಾತನಾಡಿರುವ ಡಿಸೈನ್ ವಿಭಾಗದ ಮುಖ್ಯಸ್ಥ ಸುರೇಶ್ ಸಲ್ಲಾ, 'ನಮ್ಮ ಸಂಸ್ಥೆಯ ಎಂಜಿನಿಯರ್ ತಂಡವು ದುಬಾರಿ ವೆಚ್ಚದ ದೊಡ್ಡಮಟ್ಟದ ತಂತ್ರಜ್ಞಾನವನ್ನು ಬಳಕೆ ಮಾಡದೆ, ಅತ್ಯುತ್ತಮ ಕಾರ್ಯಕ್ಷಮತೆ ನೀಡುವುದಂತೆ ಬೇಯಿಗೋ ಎಕ್ಸ್ 4ನ್ನು ತಯಾರಿಸಿದೆ' ಎಂದು ಹೇಳಿದ್ದಾರೆ.

ಇಷ್ಟೇಅಲ್ಲದೆ, 'ಎಂಜಿನಿಯರಿಂಗ್ ತಂಡದ ಸದಸ್ಯರು, ಈ ಸ್ಕೂಟರ್ ಅನ್ನು ಅತ್ಯಾಧುನಿಕ ವೈಶಿಷ್ಟ್ಯ, ಆಕರ್ಷಕವಾಗಿ ಕಾಣುವಂತೆ ವಿನ್ಯಾಸ ಮಾಡಿದ್ದು, ಸುಧಾರಿತ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಬಳಕೆ ಮಾಡಿಕೊಂಡು, ಭಾರತದಂತಹ ರಸ್ತೆಗಳಲ್ಲಿ ಈ ಸ್ಕೂಟರ್ ಓಡಿಸಲು ಚಾಲಕರಿಗೆ ಅನುಕೂಲಕಾರವಾಗುವ ರೀತಿಯಲ್ಲಿ ತಯಾರಿಸಿದ್ದಾರೆ' ಎಂದು ಸುರೇಶ್ ಸಲ್ಲಾ ಹೇಳಿದ್ದಾರೆ. ಇದು ಖರೀದಿಗೆ ದೊರೆತ ಮೇಲೆ ಗ್ರಾಹಕರು ಖಂಡಿತ ಇಷ್ಟಪಡುತ್ತಾರೆ ಎಂಬುದು ಕಂಪನಿಯ ನಂಬಿಕೆಯಾಗಿದೆ ಎಂದು ಹೇಳಿದರೇ ತಪ್ಪಾಗುವುದಿಲ್ಲ.

ಬೇಯಿಗೋ ಎಕ್ಸ್ 4 ಬೆಲೆ ವಿವರ:
ಈ ಸ್ಕೂಟರ್ ಯಾವಾಗ ಮಾರುಕಟ್ಟೆಗೆ ಬರಲಿದೆ. ಬೆಲೆ ಎಷ್ಟಿರಲಿದೆ ಎಂಬುದರ ಕುರಿತಂತೆ ಇಗೋವಿಸೆ ಕಂಪನಿಯು ಈವರೆಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ಖರೀದಿದಾರರ ಕೈಗೆಟುಕುವ ದರದಲ್ಲಿ ದೊರೆಯಲಿದೆ ಎಂದು ಅಂದಾಜಿಸಲಾಗಿದ್ದು, 1.1 ಲಕ್ಷ ಆರಂಭಿಕ ಬೆಲೆಯಲ್ಲಿ ಸಿಗಲಿದೆ. ಜೊತೆಗೆ ಹೊಚ್ಚ ಹೊಸ ಸ್ಕೂಟರ್ ಖರೀದಿಸುವಂತೆ ಗ್ರಾಹಕರಿಗೆ ಪ್ರೇರೇಪಿಸಲು ಕಂಪನಿಯು ಅತ್ಯಾಕರ್ಷಕ ಕೊಡುಗೆಯನ್ನು ನೀಡಲಿದೆ. ಅದು ಐದು ವರ್ಷ/ 1,00,000 ಕಿಮೀ. ವಾರಂಟಿಯನ್ನು ಕೊಡಲಿದೆ.

ಇಗೋವಿಸೆ ಕಂಪನಿ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ತನ್ನ ಅತ್ಯಾಧುನಿಕ ಉತ್ಪಾದನಾ ಘಟಕವನ್ನು ಹೊಂದಿದ್ದು, ಅಲ್ಲಿ ವಾರ್ಷಿಕ 30,000 ಯುನಿಟ್ ಸ್ಕೂಟರ್ ತಯಾರಿಸಬಹುದು. ಅಲ್ಲದೆ, ಅಧಿಕೃತ ಮಾಹಿತಿ ಪ್ರಕಾರ, ಕಂಪನಿಯು ಆಟೋಮೇಷನ್ ಟೂಲ್ಸ್ ಸೇರಿದಂತೆ ಇತರೆ ಉದ್ಯಮ ವಲಯಗಳಲ್ಲೂ ಹೂಡಿಕೆ ಮಾಡಲು ಮುಂದಾಗಿದೆ. ಸದ್ಯ ನಮ್ಮದೇ ರಾಜ್ಯದ ಕಂಪನಿಯಾಗಿರುವ ಇಗೋವಿಸೆ ರೆಡಿ ಮಾಡಿರುವ ಈ ನೂತನ ಬೇಯಿಗೋ ಎಕ್ಸ್ 4 ಎಲ್ಲ ರೀತಿಯಿಂದಲ್ಲೂ ಅತ್ಯಾಧುನಿಕ ವೈಶಿಷ್ಟ್ಯ ಹೊಂದಿದ್ದು, ಖರೀದಿಗೆ ಸಿಕ್ಕ ಮೇಲೆ ಪ್ರತಿಯೊಬ್ಬರನ್ನು ಆಕರ್ಷಿಸಲಿದೆ ಎಂದು ಹೇಳಬಹುದು.

ಸದ್ಯ ಭಾರತದ ಮಾರುಕಟ್ಟೆಯಲ್ಲಿ ಹಲವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಖರೀದಿಗೆ ಲಭ್ಯವಿವೆ. ಅವುಗಳಲ್ಲಿ ಓಲಾ, ಎಥರ್ ಹಾಗೂ ಟಿವಿಎಸ್ ಕಂಪನಿಗಳು ಮುಂದಿವೆ. ಎಥರ್ 450X ಸ್ಕೂಟರ್‌ ಬೆಲೆ ರೂ.1,60,205 ಇದ್ದು, ಎಥರ್ 450 ಪ್ಲಸ್ ಬೆಲೆ ರೂ.1,37,195 ಇದೆ. ಎಲ್ಲರ ಅಚ್ಚುಮೆಚ್ಚಿನ ಓಲಾ S1 Pro ಎಲೆಕ್ಟ್ರಿಕ್ ಸ್ಕೂಟರ್ 1.40 ಲಕ್ಷ ರೂ. ಓಲಾ ಎಸ್1 ಸ್ಕೂಟರ್ 1 ಲಕ್ಷ ರೂ. ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಇನ್ನು, ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಟಿವಿಎಸ್ ತಯಾರಿಸುವ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕ ಬೆಲೆ ರೂ.1,12,231 ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Igowise beigo x4 self balancing e scooter unveil january 26 details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X