ದೇಶದಲ್ಲಿ ಅಬ್ಬರಿಸಲು ಮತ್ತೆ ಬರುತ್ತಿದೆ LML: ಅದು EV ಸ್ಕೂಟರ್‌ನೊಂದಿಗೆ.. ಎಲ್ಲ ದಾಖಲೆ ಪುಡಿಪುಡಿ?

ಭಾರತದಲ್ಲಿ ಹಲವು ವರ್ಷಗಳ ಹಿಂದೆ, ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದ್ಧ ಲೋಹಿಯಾ ಮೆಷಿನರಿ ಲಿಮಿಟೆಡ್ (LML) ಮತ್ತೆ ದೇಶೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಎಲೆಕ್ಟ್ರಿಕ್ ಸ್ಕೂಟರ್‌ವೊಂದನ್ನು ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ.

LML ಕಂಪನಿಯು ಇತ್ತೀಚೆಗೆ ಮುಕ್ತಾಯಗೊಂಡ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ತನ್ನ ಬಹುನೀರಿಕ್ಷಿತ ಎಲೆಕ್ಟ್ರಿಕ್ ಸ್ಕೂಟರ್‌ ಎಲ್ಎಂಎಲ್ ಸ್ಟಾರ್ (LML Star) ಅನ್ನು ಅನಾವರಣ ಮಾಡಿತ್ತು. ಇದೀಗ ಆ ಸ್ಕೂಟರ್‌ ಭಾರತದ ಮಾರುಕಟ್ಟೆಯಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಕುರಿತಂತೆ ಮಾಹಿತಿ ಲಭ್ಯವಾಗಿದೆ. ಬಹುತೇಕ ಜೂನ್ ತಿಂಗಳಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‌ ಬುಕಿಂಗ್ ಆರಂಭವಾಗಲಿದ್ದು, ಸೆಪ್ಟೆಂಬರ್ 2023ರ ಹೊತ್ತಿಗೆ ಲಾಂಚ್ ಮಾಡಲಾಗುವುದು ಎಂದು ಎಲ್ಎಂಎಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಜೆನೆಂದರ್ ಆನಂದ್ ತಿಳಿಸಿದ್ದಾರೆ.

ಅಬ್ಬರಿಸಲು ಮತ್ತೆ ಬರುತ್ತಿದೆ LML: ಅದು EV ಸ್ಕೂಟರ್‌ನೊಂದಿಗೆ...

ಮುಂಬರಲಿರುವ ಎಲ್ಎಂಎಲ್ ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್‌ ಬ್ಯಾಟರಿ ಮತ್ತು ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 4 kWh Li-ion ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ ಹೊಂದಿದ್ದು, 6.8 PS ಗರಿಷ್ಠ ಪವರ್ ಹಾಗೂ 38 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಇದರಲ್ಲಿ ಉಪಯೋಗ ಮಾಡಿರುವ ಬ್ಯಾಟರಿ ಪ್ಯಾಕ್, ಸಂಪೂರ್ಣ ಚಾರ್ಜ್ ನಲ್ಲಿ 120 km ರೇಂಜ್ ನೀಡಲಿದ್ದು, 85 kmph ಟಾಪ್ ಸ್ವೀಡ್ ಹೊಂದಿದೆ.

ಬಹುನೀರಿಕ್ಷಿತ ಎಲ್ಎಂಎಲ್ ಸ್ಟಾರ್ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಸಾಕಷ್ಟು ಹೊಸ ಬಗೆಯ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು. ಇದು 7 - ಇಂಚಿನ TFT ಡಿಸ್ಪ್ಲೇ, ಬ್ಲೂ ಟೂತ್ ಕನೆಕ್ಟಿವಿಟಿ, ಆಂಬಿಯೆಂಟ್ ಲೈಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ರಿವರ್ಸ್ ಮೋಡ್, ರೈಡ್ ಮೋಡ್‌ ಹಾಗೂ ಕೀಲೆಸ್ ಎಂಟ್ರಿ ಸೇರಿದಂತೆ ಅತ್ಯಾಧುನಿಕ ಫೀಚರ್ಸ್ ಹೊಂದಿದ್ದು, ಇವು ಈ ಸ್ಕೂಟರ್ ಖರೀದಿಸಲು ಗ್ರಾಹಕರನ್ನು ಪ್ರೇರಿಪಿಸಬಹುದು ಎಂದು ಹೇಳಬಹುದು.

ಎಲ್ಎಂಎಲ್ ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್‌ ಡಿಸೈನ್:
ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಇತರೆ ಸ್ಕೂಟರ್‌ಗಳಂತೆ ಎಲ್ಎಂಎಲ್ ಸ್ಟಾರ್ ಕೂಡ ಆಕರ್ಷಕ ವಿಸ್ಯಾಸವನ್ನು ಹೊಂದಿದ್ದು, ಯುವ ಖರೀದಿದಾರರನ್ನು ಆಕರ್ಷಿಸಲಿದೆ. ಇದು ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್, ಎಲ್ಇಡಿ DRLs ಹಾಗೂ ಎಲ್ಇಡಿ ಟೈಲ್ ಲ್ಯಾಂಪ್‌ ಅನ್ನು ಪಡೆದಿದೆ. ಜೊತೆಗೆ 12 - ಇಂಚಿನ ಅಲಾಯ್ ವೀಲ್ಸ್, 90/90-12 ಅಳತೆಯ ಟೈಯರ್ಸ್ ಹೊಂದಿದ್ದು, ಬರೋಬ್ಬರಿ 115 ಕೆಜಿ ತೂಕವಿದೆ.

ಎಲ್ಎಂಎಲ್ ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್‌, ಸಸ್ಪೆನ್ಸನ್ ಬಗ್ಗೆ ಹೇಳುವುದಾದರೆ, ಇದು ಫ್ರಂಟ್, ಟೆಲಿಸ್ಕೋಪಿಕ್ ಫೋರ್ಕ್ಸ್, ರೇರ್ ಮೊನೊ-ಶಾಕ್ ಅಬ್ಸಾರ್ಬರ್ ಸೆಟಪ್ ಹೊಂದಿದೆ. ಬ್ರೇಕಿಂಗ್ ವಿಚಾರಕ್ಕೆ ಬಂದರೆ, ಫ್ರಂಟ್ ಡಿಸ್ಕ್ ಬ್ರೇಕ್ ಹಾಗೂ ರೇರ್ ಡ್ರಮ್ ಬ್ರೇಕ್ ಅನ್ನು ಹೊಂದಿದೆ. ಬೆಲೆ ಬಗ್ಗೆ ಮಾತನಾಡುವುದಾದರೆ, ಭಾರತದ ಮಾರುಕಟ್ಟೆಯಲ್ಲಿ ರೂ.1.50 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಖರೀದಿಗೆ ದೊರೆಯಬಹುದು. ಬಿಡುಗಡೆಗೊಂಡ ಬಳಿಕ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌, ಟಿವಿಎಸ್ ಐಕ್ಯೂಬ್ ಹಾಗೂ ಹೀರೋ ವಿದಾ V1 ಸ್ಕೂಟರ್‌ಗಳಿಗೆ ಭಾರೀ ಪೈಪೋಟಿ ನೀಡಲಿದೆಯಂತೆ.

ಇಷ್ಟೇ ಅಲ್ಲದೆ, ತನ್ನ ದ್ವಿಚಕ್ರ ವಾಹನಗಳ ಮಾದರಿಯನ್ನು ತಯಾರಿಸಲು ಎಲ್ಎಂಎಲ್, ನೂತನ ಇವಿ ಉತ್ಪಾದನಾ ಘಟಕಕ್ಕಾಗಿ ಸುಮಾರು 500 ಕೋಟಿ ರೂ. ಬಂಡವಾಳ ಹೂಡಿದೆ ಎಂದು ವರದಿಯಾಗಿದೆ. ಕಂಪನಿಯು ಶೀಘ್ರದಲ್ಲೇ ದೇಶಾದ್ಯಂತ 100 - ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದು, ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್‌ ನಂತರ ಭಾರತದ ಮಾರುಕಟ್ಟೆಯಲ್ಲಿ ಮೂನ್‌ಶಾಟ್ ಮತ್ತು ಓರಿಯನ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಗಳನ್ನು ಲಾಂಚ್ ಮಾಡಲಿದೆ.

ಈಗಾಗಲೇ ಮುಂಬರಲಿರುವ ಎಲ್ಎಂಎಲ್ ಸ್ಟಾರ್ ಸ್ಕೂಟರ್ ಬಗ್ಗೆ ಗ್ರಾಹಕರಿಗೆ ಸಾಕಷ್ಟು ನೀರಿಕ್ಷೆಗಳು ಹೆಚ್ಚಿವೆ ಎಂದು ಹೇಳಬಹುದು. ಮೇಲೆ ತಿಳಿಸಲಾದ ಬೆಲೆಗೆ ಮಾರುಕಟ್ಟೆಗೆ ಬರಲಿದೆಯೇ.. ಇಲ್ಲವೇ ಅದಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ ಎಂಬುದರ ಬಗ್ಗೆ ಕಂಪನಿಯು ಕೆಲವೇ ದಿನಗಳಲ್ಲಿ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಲಿದೆ. ಇದು ಬಹುತೇಕ ಗ್ರಾಹಕರ ಕೈಗೆಟುಕುವ ದರದಲ್ಲಿ ಖರೀದಿಗೆ ಸಿಗುವ ಸಾಧ್ಯತೆಯಿದ್ದು, ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೇಲೆ ಹೆಚ್ಚಿನ ಯುವ ಖರೀದಿದಾರರನ್ನು ಸೆಳೆಯಬಹುದು.

Most Read Articles

Kannada
English summary
Lml star electric scooter to launch in september 2023 details kannada
Story first published: Wednesday, February 1, 2023, 14:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X