ನಾಳೆಯಿಂದ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್‌ ಬುಕಿಂಗ್ ಆರಂಭ: ಅದು ಉಚಿತ

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು (ಇವಿ) ದಿನದಿಂದ ದಿನಕ್ಕೆ ಭಾರೀ ಜನಪ್ರಿಯತೆಯನ್ನು ಗಳಿಸುತ್ತಿವೆ. ಅವುಗಳ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳು ನೋಡುಗರನ್ನು ಸೆಳೆಯುತ್ತಿದ್ದು, ಖರೀದಿಸಲು ಲೈಕ್ ಮಾಡುತ್ತಿದ್ದಾರೆ. ಪೆಟ್ರೋಲ್ ದರ ದುಬಾರಿಯಾಗಿದ್ದು, ಇಂತಹ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್‌ಗಳು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್ 'ಜಾಯ್ ಇ - ಬೈಕ್' ತಯಾರಕ ಕಂಪನಿ 'ವಾರ್ಡ್ ವಿಝಾರ್ಡ್' ನಾಳೆಯಿಂದ (ಜನವರಿ 22) ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಆನ್‌ಲೈನ್ ಆರ್ಡರ್ ಪ್ರಾರಂಭಿಸುವುದಾಗಿ ಘೋಷಿಸಿದೆ. ಬುಕಿಂಗ್‌ಗಳು ಆನ್‌ಲೈನ್‌ ಮತ್ತು ಕಂಪನಿಯ ಡೀಲರ್‌ಶಿಪ್‌ಗಳಲ್ಲಿ ಆರಂಭವಾಗಲಿದೆ. ಹೊಸ ಸ್ಕೂಟರ್‌ನ ವಿತರಣೆಗಳು ಈ ವರ್ಷದ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಕಂಪನಿಯು ಮಾಹಿತಿ ನೀಡಿದೆ. ಅತ್ಯಾಕರ್ಷಕವಾಗಿ ಕಾಣುವ ಈ ಸ್ಕೂಟರ್‌ನ್ನು ಖರೀದಿಸಲು ಬಹುತೇಕರು ಮನಸ್ಸು ಮಾಡಬಹುದು.

ನಾಳೆಯಿಂದ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್‌ ಬುಕಿಂಗ್ ಆರಂಭ: ಅದು ಉಚಿತ

ಕಂಪನಿಯು ಈ ಹೊಸ ಮಿಹೋಸ್ ಸ್ಕೂಟರ್ ಅನ್ನು ಇತ್ತೀಚೆಗೆ ಮುಕ್ತಾಯಗೊಂಡ ಆಟೋ ಎಕ್ಸ್‌ಪೋದಲ್ಲಿ ರೂ.1.49 ಲಕ್ಷ ಬೆಲೆಯಲ್ಲಿ ಬಿಡುಗಡೆ ಮಾಡಲಾಯಿತು (ಎಕ್ಸ್ ಶೋರೂಂ ಭಾರತ). ಈ ಬೆಲೆಯಲ್ಲಿ ಮೊದಲ 500 ಗ್ರಾಹಕರಿಗೆ ಮಾತ್ರ ಸ್ಕೂಟರ್ ಲಭ್ಯವಾಗಲಿದೆ. ಆದರೆ, ಗ್ರಾಹಕರ ಪ್ರತಿಕ್ರಿಯೆಯನ್ನು ಆಧರಿಸಿ, ಅದನ್ನು ಮತ್ತಷ್ಟು ಜನರಿಗೆ ವಿಸ್ತರಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್, ನಾಲ್ಕು ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಮೆಟಾಲಿಕ್ ಬ್ಲೂ, ಸಾಲಿಡ್ ಬ್ಲ್ಯಾಕ್ ಗ್ಲೋಸಿ, ಸಾಲಿಡ್ ಯೆಲ್ಲೋ ಗ್ಲೋಸಿ ಮತ್ತು ಪರ್ಲ್ ವೈಟ್.

ಈ ಬಗ್ಗೆ ವಾರ್ಡ್‌ವಿಜಾರ್ಡ್ ಇನ್ನೋವೇಶನ್ಸ್ ಮತ್ತು ಮೊಬಿಲಿಟಿ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಯತಿನ್ ಗುಪ್ತ ಪ್ರತಿಕ್ರಿಯೆ ನೀಡಿದ್ದು, 'ಗ್ರಾಹಕರ ಸಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ಮಿಹೋಸ್ ಸ್ಕೂಟರ್ ನ ಆನ್‌ಲೈನ್ ಬುಕಿಂಗ್ ಅನ್ನು ಉಚಿತವಾಗಿ ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ಅಲ್ಲದೆ, ಆಫ್‌ಲೈನ್ ಮೂಲಕವು ನಮ್ಮ ಖರೀದಿದಾರರು ಬುಕಿಂಗ್ ಮಾಡಬಹುದು. ಈ ಸ್ಕೂಟರ್ ಅತ್ಯುನ್ನತ ತಂತ್ರಜ್ಞಾನ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದ್ದು, ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸುವ ವಿಶ್ವಾಸವಿದೆ' ಎಂದು ಹೇಳಿದ್ದಾರೆ.

ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ 2.5 kWh ಪವರ್ ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಲಿದ್ದು, ಒಂದೇ ಚಾರ್ಜ್‌ನಲ್ಲಿ 100 ಕಿ.ಮೀ ರೇಂಜ್ ನೀಡಲಿದ್ದು, ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲು 4 ಗಂಟೆ ಬೇಕು. ಇದರ ಮೋಟಾರ್ 1.5 kW ಗರಿಷ್ಠ ಪವರ್ ಮತ್ತು 95 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್, ಕೇವಲ 7 ಸೆಕೆಂಡುಗಳಲ್ಲಿ 0 - 40 km/h ವೇಗವನ್ನು ಪಡೆಯಲಿದ್ದು, 70 km/h ಟಾಪ್ ಸ್ವೀಡ್ ಹೊಂದಿದೆ.

ಈ ಸ್ಕೂಟರ್, ರೆಟ್ರೊ ವಿನ್ಯಾಸ ಪಡೆದಿದ್ದು, ಹಿಂದಿನ ಕಾಲದ ಸ್ಕೂಟರ್‌ ಮಾದರಿಯಂತೆ ಕಾಣುತ್ತದೆ. ಮಿಹೋಸ್ ಸ್ಕೂಟರ್ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ, ಬ್ಲೂಟೂತ್ ಮೂಲಕ ಸ್ಕೂಟರ್‌ಗೆ ಸಂಪರ್ಕಿಸುವ ಜಾಯ್ ಇ-ಕನೆಕ್ಟ್ ಅಪ್ಲಿಕೇಶನ್ ಪಡೆದಿದ್ದು, ಸ್ಕೂಟರ್‌ನ ಚಾರ್ಜ್ ಸೇರಿದಂತೆ ಇತರೆ ಅಂಕಿ ಅಂಶಗಳನ್ನು GPS ಮೂಲಕ ದೂರದಿಂದಲೇ ಟ್ರ್ಯಾಕ್ ಮಾಡಬಹುದು. ಮಿಹೋಸ್ ಜಿಯೋಫೆನ್ಸಿಂಗ್, ಆಂಟಿ ಥೆಫ್ಟ್ ಮತ್ತು ಕೀಲೆಸ್ ವೈಶಿಷ್ಟ್ಯ, ಪಾರ್ಕಿಂಗ್‌ಗಾಗಿ ರಿವರ್ಸ್ ಮೋಡ್ ಅನ್ನು ಹೊಂದಿದೆ.

ನೂತನ ಮಿಹೋಸ್ ಸ್ಕೂಟರ್ ವೇಗವಾಗಿ ಚಾರ್ಜ್ ಆಗಲಿದ್ದು, ಹ್ಯಾಂಡಲ್ ನ ಎರಡು ತುದಿಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಪಡೆದಿದೆ. ಇದು ಹೈಡ್ರಾಲಿಕ್ ಕಾಂಬಿ - ಬ್ರೇಕಿಂಗ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಿಸುತ್ತವೆ. ಮಿಹೋಸ್, 1,864 ಎಂಎಂ ಉದ್ದ, 700 ಎಂಎಂ ಅಗಲ ಮತ್ತು 1,178 ಎಂಎಂ ಎತ್ತರವಾಗಿದ್ದು, 1,360 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಪಡೆದಿದ್ದು, 175 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇವೆಲ್ಲವೂ ಈ ಸ್ಕೂಟರ್ ಖರೀದಿಸುವಂತೆ ಗ್ರಾಹಕರನ್ನು ಸೆಳೆಯಲಿವೆ.

ಇಷ್ಟೇಅಲ್ಲದೆ, ಮಿಹೋಸ್ ಸ್ಕೂಟರ್ ರೀತಿಯೇ ಹಲವು ಎಲೆಕ್ಟ್ರಿಕ್ ಸ್ಕೂಟರ್ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿವೆ. ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಟಿವಿಎಸ್ ತಯಾರಿಸುವ ಐಕ್ಯೂಬ್ ಎಲೆಕ್ಟ್ರಿಕ್ ಆರಂಭಿಕ ಬೆಲೆ ರೂ.99,130 ಇದೆ. ಓಲಾ S1 ಎಲೆಕ್ಟ್ರಿಕ್ ಸ್ಕೂಟರ್ 1,04,999 ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ಎಥರ್ 450X, ಬೆಲೆ 1,35,452 ರೂಪಾಯಿಯಲ್ಲಿ ಗ್ರಾಹಕರು ಕೊಂಡುಕೊಳ್ಳಬಹುದು. ಬಜಾಜ್ ಚೇತಕ್ ಭಾರತೀಯ ಮಾರುಕಟ್ಟೆಯಲ್ಲಿ 1,51,958 ರೂ.ಬೆಲೆಯಲ್ಲಿ ಖರೀದಿಗೆ ಸಿಗಲಿದೆ.

Most Read Articles

Kannada
English summary
Mihos electric scooter bookings start from january 22
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X