ಮುಂಬರಲಿರುವ ಹೋಂಡಾ ಬೈಕ್‌ಗಳಿಗೆ DL ಬೇಡ್ವಂತೆ: 10ಕ್ಕೂ ಹೆಚ್ಚು EV ಬಿಡುಗಡೆಗೆ ಸಿದ್ಧತೆ!

ಜಪಾನ್ ಮೂಲದ ಪ್ರಮುಖ ವಾಹನ ತಯಾರಕ ಕಂಪನಿ ಹೋಂಡಾ, ಎಲೆಕ್ಟ್ರಿಕ್ ವಾಹನ (ಇವಿ) ವಿಭಾಗವನ್ನು ಬಲಪಡಿಸಲು ಮುಂದಾಗಿದ್ದು, ಅದಕ್ಕೆ ತಕ್ಕಂತೆ ವಿವಿಧ ಬೈಕ್ ಹಾಗೂ ಸ್ಕೂಟರ್ ಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ. ಜಾಗತಿಕವಾಗಿ 2050ರ ವೇಳೆಗೆ ಶೂನ್ಯ ಹೊರಸೂಸುವಿಕೆಯ (carbon neutral) ಭಾಗವಾಗಿರಲು ಪ್ರಯತ್ನಿಸುತ್ತಿದೆ.

ಹೋಂಡಾ ಕಂಪನಿ ಕೆಲವು ಎಲೆಕ್ಟ್ರಿಕ್ ಬೈಕ್‌ಗಳನ್ನು ಅನಾವರಣ ಮಾಡಿದೆ. ಅವುಗಳೆಂದರೆ, ಕಬ್ ಇ (Cub e), ಡಾಕ್ಸ್ ಇ (Dax e), ಜೂಮರ್ ಇ (Zoomer e). ಬಹುತೇಕ ಪೆಟ್ರೋಲ್ ಚಾಲಿತ ಬೈಕ್‌ಗಳನ್ನು ಆಧರಿಸಿದ್ದು, ಮೊದಲಿಗೆ ಚೀನಾದ ಗ್ರಾಹಕರಿಗೆ ಲಭ್ಯವಾಗಲಿದೆ. ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕೆಗೆ ಯಾವ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಕಂಪನಿಯು ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ವೆಚ್ಚವನ್ನು ಉಳಿತಾಯ ಮಾಡಲು ಹಾಗೂ ಬೇಗ ಮಾರುಕಟ್ಟೆಗೆ ವಾಹನಗಳನ್ನು ಲಾಂಚ್ ಮಾಡಲು ಪೆಟ್ರೋಲ್ ಚಾಲಿತ ಬೈಕ್‌ಗಳಿಗೆ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳನ್ನು ಅಳವಡಿಕೆ ಮಾಡಲಾಗುತ್ತಿದೆ.

ಮುಂಬರಲಿರುವ ಹೋಂಡಾ ಬೈಕ್‌ಗಳಿಗೆ DL ಬೇಡ್ವಂತೆ: 10ಕ್ಕೂ ಹೆಚ್ಚು EV ಬಿಡುಗಡೆಗೆ ಸಿದ್ಧತೆ!

ಹೋಂಡಾ ಕಂಪನಿಯ ಹೊಸ ಎಲೆಕ್ಟ್ರಿಕ್ ಬೈಕ್‌ಗಳು ನೋಡಲು ಆಕರ್ಷಕವಾಗಿ ಕಾಣುತ್ತಿದ್ದು, ಯುವ ಜನರು ಹೆಚ್ಚು ಇಷ್ಟಪಡಬಹುದು ಎಂದು ಹೇಳಲಾಗುತ್ತಿದೆ. ವಿನ್ಯಾಸ ಕೂಡ ಎಲ್ಲರನ್ನು ಸೆಳೆಯಲಿದ್ದು, ಸಣ್ಣ ರಸ್ತೆಗಳಲ್ಲಿ ಸುಲಭವಾಗಿ ಚಲಿಸಲು ಸಾಧ್ಯವಾಗುವಂತೆ ಈ ದ್ವಿಚಕ್ರ ವಾಹನಗಳನ್ನು ರೆಡಿ ಮಾಡಲಾಗಿದೆ. ಅಲ್ಲದೆ, ಮುಂಬರುವ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಹೋಂಡಾದ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಬೈಕ್‌ಗಳಿಗೆ ಯಾವುದೇ ಪರವಾನಗಿ (ಡಿಎಲ್) ಅಗತ್ಯವಿಲ್ಲ. ಏಕೆಂದರೆ, ಇವು 15 mph (24 kmph) ಟಾಪ್ ಸ್ವೀಡ್ ಹೊಂದಿದ್ದು, ರೇಂಜ್ ಕೂಡ ಕಡಿಮೆಯಿರಲಿದೆ.

ಕಬ್ ಇ, ಡಾಕ್ಸ್ ಇ, ಜೂಮರ್ ಎಲೆಕ್ಟ್ರಿಕ್ ಬೈಕ್‌ಗಳ ಮತ್ತೊಂದು ವಿಶೇಷತೆ ಎಂದರೆ, ಇವು ಪೆಡಲ್‌ಗಳನ್ನು ಹೊಂದಿವೆ. ಬ್ಯಾಟರಿ ಖಾಲಿ ಹಾಗೂ ಇತರೆ ಸಂದರ್ಭದಲ್ಲಿ ಈ ಬೈಕ್‌ಗಳನ್ನು ಬೈಸಿಕಲ್ ರೀತಿಯು ಬಳಕೆ ಮಾಡಬಹುದು. ಇವುಗಳ ತೂಕವು ಕಡಿಮೆ ಇರಲಿದ್ದು, ಓಡಿಸಲು ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ. ಇದು ಕೈನೆಟಿಕ್ ಲೂನಾಗೆ ಹೋಲುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗುವ ಸಾಧ್ಯತೆಯಿದ್ದು, ಬೆಲೆಯು ಕೈಗೆಟುಕುವ ರೀತಿ ಇರುವುದರಿಂದ ಹೆಚ್ಚಿನ ಗ್ರಾಹಕರು ಖರೀದಿಸಲು ಮನಸ್ಸು ಮಾಡಬಹುದು.

ಮುಂಬರಲಿರುವ ಹೋಂಡಾ ಬೈಕ್‌ಗಳಿಗೆ DL ಬೇಡ್ವಂತೆ: 10ಕ್ಕೂ ಹೆಚ್ಚು EV ಬಿಡುಗಡೆಗೆ ಸಿದ್ಧತೆ!

ಹೋಂಡಾ ಕಂಪನಿಯು ಜಾಗತಿಕ ಮಾರುಕಟ್ಟೆಯಲ್ಲಿ 2025ರೊಳಗೆ 10 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಲು ಯೋಜಿಸುತ್ತಿದೆ. 2027 ರೊಳಗೆ 10 ಲಕ್ಷ ಯುನಿಟ್ ಮಾರಾಟ ಗುರಿಯನ್ನು ತಲುಪಲು ಚಿಂತನೆ ನಡೆಸಿದ್ದು, ಈ ದಶಕದ (2030ರೊಳಗೆ) ಅಂತ್ಯಕ್ಕೆ 35 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟದಲಿದೆಯಂತೆ. ಆದರೆ, ಕಂಪನಿಯ ಮಾರಾಟ ವಿಭಾಗದಲ್ಲಿ ಬಹುತೇಕ ICE ಚಾಲಿತ ವಾಹನಗಳೇ ಇರಲಿದ್ದು, ಅದರಲ್ಲಿ 15% ಎಲೆಕ್ಟ್ರಿಕ್ ವಾಹನಗಳ ಪಾಲನ್ನು ಹೊಂದಲು ಕಂಪನಿ ಬಯಸಿದೆ.

ಹೋಂಡಾ ಕಂಪನಿ ಈ ಎಲೆಕ್ಟ್ರಿಕ್ ಬೈಕ್‌ಗಳನ್ನು ಭಾರತದ ದೊಡ್ಡ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಇವುಗಳನ್ನು ಲಾಂಚ್ ಮಾಡಿ, ಕಠಿಣ ಸನ್ನಿವೇಶವನ್ನು ಎದುರಿಸಲು ಕಂಪನಿ ತಯಾರಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನವಾಗಿ ಬಹುನಿರೀಕ್ಷಿತ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2024ರಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಬಗ್ಗೆ ಸ್ವತಃ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಎಂಡಿ, ಸಿಇಒ ಅಟ್ಸುಶಿ ಒಗಾಟಾ ಅವರೇ ದೃಢಪಡಿಸಿದ್ದಾರೆ.

ಮುಂಬರಲಿರುವ ಹೋಂಡಾ ಬೈಕ್‌ಗಳಿಗೆ DL ಬೇಡ್ವಂತೆ: 10ಕ್ಕೂ ಹೆಚ್ಚು EV ಬಿಡುಗಡೆಗೆ ಸಿದ್ಧತೆ!

ಮುಂಬರಲಿರುವ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸ, ವೈಶಿಷ್ಟ್ಯ ಹಾಗೂ ಬೆಲೆ ಕುರಿತಂತೆ ಕಂಪನಿಯು ಏನನ್ನು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ, ಈ ಸ್ಕೂಟರ್ 50 kmph ಟಾಪ್ ಸ್ವೀಡ್ ಹೊಂದಿದ್ದು, ಈಗಿರುವ ಸ್ಕೂಟರ್ ಗಳಿಗೆ ಹೋಲಿಸಿದರೆ ಇದು ತುಂಬಾ ಕಡಿಮೆ. ಅಲ್ಲದೆ, ರೇಂಜ್ ಕೂಡ ಹೇಳಿಕೊಳ್ಳುವ ಆಗಿರುವುದಿಲ್ಲ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಯಾವುದೇ ವಿಚಾರಗಳು ಸ್ಪಷ್ಟವಾಗುವುದು ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಂದ ಮೇಲೆಯೇ.. ಅಲ್ಲಿಯವರೆಗೆ ಕಾಯುವುದು ಅನಿವಾರ್ಯವಾಗಿದೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಹೋಂಡಾ ದೇಶೀಯ ಮಾರುಕಟ್ಟೆಯಲ್ಲಿ ಆಕ್ಟಿವಾ 6G ಸ್ಮಾರ್ಟ್ ಕೀ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ರೂ. 80,537 ಆರಂಭಿಕ ಬೆಲೆಯನ್ನು ಹೊಂದಿದೆ. ಇದರ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 109.51 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 7.7 bhp ಪವರ್ ಮತ್ತು 8.9 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸ್ಮಾರ್ಟ್ ಅನ್ ಲಾಕ್ ಹಾಗೂ ಸ್ಮಾರ್ಟ್ ಸೇಫ್ ನಂತಹ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Most Read Articles

Kannada
English summary
New honda electric bikes for entry level debuts details kannada
Story first published: Monday, February 6, 2023, 12:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X