1 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ 'ಹಾಪ್ ಲಿಯೋ ಇ-ಸ್ಕೂಟರ್' ಬಿಡುಗಡೆ: 120 ಕಿಮೀ ರೇಂಜ್ ಕೊಡುತ್ತೆ!

ಭಾರತದಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ವಾಹನಗಳು (EV) ಭಾರೀ ಪ್ರಮಾಣದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಇವಿಗಳ ಕಾರ್ಯಕ್ಷಮತೆ ಹಾಗೂ ಕೈಗೆಟುಕುವ ಬೆಲೆ ಗ್ರಾಹಕರಿಗೆ ಇಷ್ಟವಾಗುತ್ತಿದ್ದು, ಖರೀದಿ ಮಾಡುತ್ತಿದ್ದಾರೆ. ಹಲವು ದ್ವಿಚಕ್ರ ವಾಹನ ತಯಾರಕ ಕಂಪನಿಗಳು, ಇವಿ ಬೈಕ್ ಮತ್ತು ಸ್ಕೂಟರ್ ತಯಾರಿಕೆಯತ್ತ ಮುಖ ಮಾಡಿವೆ.

ಇದೀಗ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ 'ಹಾಪ್ ಎಲೆಕ್ಟ್ರಿಕ್' ನೂತನ ಹಾಪ್ ಲಿಯೋ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವುದಾಗಿ ಘೋಷಣೆ ಮಾಡಿದೆ. ಕಂಪನಿಯು ಸ್ಕೂಟರ್‌ನ ನಿಖರವಾದ ಬೆಲೆಯನ್ನು ಇದುವರೆಗೆ ಬಹಿರಂಗಪಡಿಸಿಲ್ಲ. ಆದರೆ, ಈ ಹೊಸ 'ಹಾಪ್ ಲಿಯೋ' ಸ್ಕೂಟರ್‌ನ ಬೆಲೆ ಕೈಗೆಟುಕಲಿದ್ದು, 1 ಲಕ್ಷಕ್ಕಿಂತ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ. ಆಸಕ್ತ ಗ್ರಾಹಕರು ತಮ್ಮ ಸಮೀಪದ ಡೀಲರ್‌ಶಿಪ್ ಅಥವಾ ಕಂಪನಿಯ ವೆಬ್‌ಸೈಟ್‌ನಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಮಾಡಿ, ಖರೀದಿ ಮಾಡಬಹುದಾಗಿದೆ.

ಅಗ್ಗದ ಬೆಲೆಯ ಹಾಪ್ ಲಿಯೋ ಇ-ಸ್ಕೂಟರ್ ಶೀಘ್ರ ಬಿಡುಗಡೆ: 120 ಕಿಮೀ ರೇಂಜ್ ಕೊಡುತ್ತೆ!

ನೂತನ ಹಾಪ್ ಲಿಯೋ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಈ ಸ್ಕೂಟರ್ ಸಂಪೂರ್ಣ ಚಾರ್ಜ್‌ನಲ್ಲಿ ಬರೋಬ್ಬರಿ 120 ಕಿ.ಮೀ ರೇಂಜ್ ನೀಡಲಿದೆ ಎಂದು ಹೇಳಲಾಗಿದೆ. ಇದು 2200 W ಗರಿಷ್ಠ ಪವರ್ ಮತ್ತು 90 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. BLDC ಹಬ್ ಮೋಟಾರ್ ಪಡೆದಿದ್ದು, ಜೊತೆಗೆ ಸಿನುಸೊಯಿಡಲ್ FOC ವೇಕ್ಟ್ರಾರ್ ಕಂಟ್ರೋಲ್ ಅನ್ನು ಹೊಂದಿದೆ. ಇದರ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಖರೀದಿದಾರರು ಖಂಡಿತ ಲೈಕ್ ಮಾಡಬಹುದು.

ಹೊಸ ಹಾಪ್ ಲಿಯೋ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಮಾತನಾಡುವುದಾದರೆ, ಇದು 850 W ಚಾರ್ಜರ್‌ನೊಂದಿಗೆ 2.1 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಈ ಸ್ಕೂಟರ್ ಅನ್ನು 2.5 ಗಂಟೆಗಳಲ್ಲಿ ಶೇಕಡ 0 - 80% ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ. ಅಲ್ಲದೆ, ನೂತನ ಲಿಯೋ ಎಲೆಕ್ಟ್ರಿಕ್ ಸ್ಕೂಟರ್ ಮೂರು ರೈಡ್ ಮೋಡ್‌ಗಳನ್ನು ಹೊಂದಿದೆ. ಅವುಗಳೆಂದರೆ, ಇಕೋ, ಪವರ್ ಮತ್ತು ಸ್ಪೋರ್ಟ್. ಜೊತೆಗೆ ಇದು ರಿವರ್ಸ್ ಮೋಡ್ ಅನ್ನು ಪಡೆದಿದೆ.

ಫ್ರಂಟ್ ಸಸ್ಪೆನ್ಷನ್ ಅಪ್ರೈಟ್ ಟೆಲಿಸ್ಕೋಪಿಕ್ ಫೋರ್ಕ್ ಆಗಿದ್ದರೆ, ರೇರ್ ಸಸ್ಪೆನ್ಷನ್ ಹೈಡ್ರಾಲಿಕ್ ಸ್ಪ್ರಿಂಗ್-ಲೋಡೆಡ್ ಶಾಕ್ ಅಬ್ಸಾರ್ಬರ್ ಆಗಿದೆ. ಈ ಸ್ಕೂಟರ್ ಫ್ರಂಟ್ & ರೇರ್ ಕಾಂಬಿ-ಬ್ರೇಕ್ ಸಿಸ್ಟಮ್‌ ಅನ್ನು ಹೊಂದಿದೆ. ವೀಲ್ಸ್ ಸೈಜ್ ಫ್ರಂಟ್ ಮತ್ತು ರೇರ್ 10 ಇಂಚು ಇದ್ದು, ಟೈರ್ ಗಾತ್ರದ ಬಗ್ಗೆ ಹೇಳುವುದಾದರೆ, ಫ್ರಂಟ್ ಮತ್ತು ರೇರ್ 90/90-r10 ಇದೆ. ಈ ಎಲೆಕ್ಟ್ರಿಕ್ ಸ್ಕೂಟರ್ 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದಿದ್ದು, ಲೋಡಿಂಗ್ ಸಾಮರ್ಥ್ಯ 160 ಕೆ.ಜಿ. ಇದೆ.

ನೂತನ ಹಾಪ್ ಲಿಯೋ ಎಲೆಕ್ಟ್ರಿಕ್ ಸ್ಕೂಟರ್ ವಾಟರ್ ಪ್ರೂಫ್ ಮತ್ತು ಡಸ್ಟ್ ಪ್ರೂಫ್ ಸಹ ಆಗಿದ್ದು, ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಡಿಜಿಟಲ್ ಡಿಸ್ಪ್ಲೇ, GPS ಟ್ರ್ಯಾಕರ್ ಆಯ್ಕೆಯನ್ನು ಹೊಂದಿದೆ. ಅಲ್ಲದೆ, ಈ ಸ್ಕೂಟರ್ ಐದು ಬೇರೆ - ಬೇರೆ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಅವುಗಳೆಂದರೆ, ಬ್ಲ್ಯಾಕ್, ವೈಟ್, ಗ್ರೇ, ಬ್ಲೂ ಮತ್ತು ರೆಡ್. ಜೊತೆಗೆ ಗ್ರೀನ್ ನಂಬರ್ ಪ್ಲೇಟ್‌ನೊಂದಿಗೆ ಖರೀದಿದಾರರು, ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಯಲ್ಲಿ ನೋಂದಣಿ ಮಾಡಬೇಕಾಗಿದೆ.

ಇಷ್ಟೇಅಲ್ಲದೆ, ದೇಶೀಯ ಮಾರುಕಟ್ಟೆಯಲ್ಲಿ ಓಲಾ ಹಾಗೂ ಎಥರ್ ಕಂಪನಿಗಳು ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿವೆ. ಓಲಾ ಕಂಪನಿ S1 ಮತ್ತು S1 ಪ್ರೊ ಸ್ಕೂಟರ್ ಮಾರಾಟ ಮಾಡುತ್ತಿದ್ದು, ಕೆಲವೇ ತಿಂಗಳ ಹಿಂದೆ, ಓಲಾ ಎಸ್1 ಏರ್ ಎಂಬ ನೂತನ ಸ್ಕೂಟರ್ ಅನ್ನು ಬಿಡುಗಡೆ ಮಾಡಿತ್ತು. ಓಲಾ S1 ಬೆಲೆ 1 ಲಕ್ಷವಿದ್ದು, ಓಲಾ S1 ಪ್ರೊ ಬೆಲೆ 1.40 ಲಕ್ಷ ರೂ. ಇದೆ. ಶೀಘ್ರದಲ್ಲೇ ಖರೀದಿಗೆ ಲಭ್ಯವಾಗಲಿರುವ ಓಲಾ ಎಸ್1 ಏರ್ ಬೆಲೆ 80 ಸಾವಿರ ರೂ.ಗಿಂತ ಕಡಿಮೆ ಇರಲಿದೆಯಂತೆ.

ಭಾರತದಲ್ಲಿ ಎಥರ್ 450Xನ ಆರಂಭಿಕ ಬೆಲೆ ರೂ.1,37,195 ಇದ್ದು, ಟಾಪ್ ಎಂಡ್ ಮಾದರಿ ಎಥರ್ 450X Gen 3 ಬೆಲೆ ರೂ.1,60,205 ಇದೆ. ಈ ಸ್ಕೂಟರ್, ಬ್ಲೂಟೂತ್ ಕನೆಕ್ಟಿವಿಟಿ, ಐದು ರೈಡಿಂಗ್ ಮೋಡ್‌ಗಳನ್ನು ಪಡೆದಿದೆ. ಅವುಗಳೆಂದರೆ, ಸ್ಮಾರ್ಟ್ ಇಕೋ, ಇಕೋ, ರೈಡ್, ಸ್ಪೋರ್ಟ್ ಮತ್ತು ವಾರ್ಪ್ (450Xಗೆ ಮಾತ್ರ). ಜೊತೆಗೆ ಎಲ್‌ಇಡಿ ಇಲ್ಯುಮಿನೇಷನ್, ಪಾರ್ಕಿಂಗ್ ಅಸಿಸ್ಟ್ ಹಾಗೂ ಏಳು ಇಂಚಿನ ಟಚ್‌ಸ್ಕ್ರೀನ್ TFT ಡಿಸ್ಪ್ಲೇ ಅನ್ನು ಹೊಂದಿದೆ. ಇದೀಗ ಖರೀದಿಗೆ ಸಿಗಲಿರುವ ಹಾಪ್ ಲಿಯೋ ಇ-ಸ್ಕೂಟರ್ ಮೇಲೆ ಗ್ರಾಹಕರಿಗೆ ನೀರಿಕ್ಷೆಗಳು ಹೆಚ್ಚಾಗಿವೆ.

Most Read Articles

Kannada
English summary
New hop leo e scooter announced details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X