Okaya EVಯ ಬಹುನಿರೀಕ್ಷಿತ ಟೀಸರ್: ಫೆ.10ಕ್ಕೆ ಅತಿಹೆಚ್ಚು ವೇಗದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದಿನದಿಂದ ದಿನಕ್ಕೆ ಪ್ರಖ್ಯಾತಿಗಳಿಸುತ್ತಿದ್ದು, ಅದರಂತೆ ವಿವಿಧ ವಾಹನ ತಯಾರಕ ಕಂಪನಿಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಲವು ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್ ಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿರುತ್ತವೆ. ಇದೀಗ ಒಕಾಯಾ ಇವಿ ತನ್ನ ಹೊಸ ಸ್ಕೂಟರ್ ಟೀಸರ್ ಅನ್ನು ಬಿಡುಗಡೆ ಮಾಡಿದೆ.

ಒಕಾಯಾ ಇವಿ (Okaya EV) ತಯಾರಿಸಿರುವ ಫಾಸ್ಟ್ ಎಫ್3 (Faast F3) ಎಲೆಕ್ಟ್ರಿಕ್ ಸ್ಕೂಟರ್ ಫೆಬ್ರವರಿ 10ರಂದು ಲಾಂಚ್ ಆಗಲಿದೆ. ಅದಕ್ಕೂ ಮೊದಲು ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕಂಪನಿ ಪೋಸ್ಟ್ ಮಾಡಿರುವ ಟೀಸರ್ ಗೆ ಗ್ರಾಹಕರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಒಕಾಯಾ ಇವಿ ಮೂರು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡುತ್ತಿದೆ. ಅವುಗಳೆಂದರೆ, ಫಾಸ್ಟ್ ಎಫ್4 (Faast F4), ಒಕಾಯಾ ಫ್ರೀಡಂ (Okaya Freedum), ಒಕಾಯಾ ಕ್ಲಾಸಿಕ್ IQ (Okaya ClassIQ).

Okaya EVಯ ಬಹುನಿರೀಕ್ಷಿತ ಟೀಸರ್: ಫೆ.10ಕ್ಕೆ ಅತಿಹೆಚ್ಚು ವೇಗದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಈ ಫಾಸ್ಟ್ ಎಫ್3 1,13,999 ಬೆಲೆಯಲ್ಲಿ ಖರೀದಿಗೆ ಲಭ್ಯವಿರಲಿದೆಯಂತೆ. ಆದರೆ, ಇದರ ವಿನ್ಯಾಸ ಹಾಗೂ ವೈಶಿಷ್ಟ್ಯದ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಇದು ಅತ್ಯಂತ ವೇಗದ ಎಲೆಕ್ಟ್ರಿಕ್ ಸ್ಕೂಟರ್ ಆಗಿರಲಿದ್ದು, 70 ರಿಂದ 80 ಕಿಮೀ/ಗಂಟೆ ಟಾಪ್ ಸ್ವೀಡ್ ಹೊಂದಿರಲಿದೆ. ಈ ಸ್ಕೂಟರ್ ನಲ್ಲಿ 1200W ಸಾಮರ್ಥ್ಯದ ಮೋಟಾರ್ ಬಳಕೆ ಮಾಡಲಾಗಿದ್ದು, ಅದು, 2500W ಪವರ್ ಉತ್ಪಾದಿಸಲಿದೆ. 3.5kWh Li-ion LFP ಬ್ಯಾಟರಿಯನ್ನು ಪಡೆದಿರಲಿದ್ದು, ಜೊತೆಗೆ ಸಿಂಗಲ್ ಚಾರ್ಜ್ ನಲ್ಲಿ ಈ ಸ್ಕೂಟರ್ 120 - 140 ಕಿಮೀ ರೇಂಜ್ ನೀಡಲಿದೆ ಎಂದು ಹೇಳಲಾಗಿದೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಒಕಾಯಾ ಇವಿಯ ಫಾಸ್ಟ್ ಎಫ್4 (Faast F4) ಸ್ಕೂಟರ್ ಒಂದೇ ರೂಪಾಂತರದಲ್ಲಿ ರೂ.1,09,000 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಡ್ಯುಯಲ್ LFP (ಲಿಥಿಯಂ ಐರನ್ ಫಾಸ್ಫೇಟ್) ಬ್ಯಾಟರಿ ಪ್ಯಾಕ್ ಹೊಂದಿದ್ದು, 1.2kW BLDC ಹಬ್ ಮೋಟಾರ್‌ನಿಂದ ಕಾರ್ಯನಿರ್ವಹಿಸಲಿದೆ. ಕೇವಲ 5 ರಿಂದ 6 ಗಂಟೆಯಲ್ಲಿ ಈ ಸ್ಕೂಟರ್ ನ ಸಂಪೂರ್ಣ ಬ್ಯಾಟರಿ ಚಾರ್ಜ್ ಆಗಲಿದ್ದು, 140 -160 km ರೇಂಜ್ ನೀಡುವ ಸಾಮರ್ಥ್ಯ ಪಡೆದಿದ್ದು, 60-70 kmph ಟಾಪ್ ಸ್ವೀಡ್ ಹೊಂದಿದೆ.

ಈ ಫಾಸ್ಟ್ ಎಫ್4 ಸ್ಕೂಟರ್ ಸಸ್ಪೆನ್ಷನ್ ಬಗ್ಗೆ ಮಾತನಾಡುವುದರೆ, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ರೇರ್ ಟ್ವಿನ್ ಶಾಕ್ ಅಬ್ಸಾರ್ಬರ್ ಸೆಟಪ್ ಅನ್ನು ಹೊಂದಿದೆ. ಅಲ್ಲದೆ, ಫ್ರಂಟ್ 130ಎಂಎಂ ಡ್ರಮ್ ಬ್ರೇಕ್ ಹಾಗೂ 110ಎಂಎಂ ಡ್ರಮ್ ಬ್ರೇಕ್ ಸಿಸ್ಟಮ್ ಅನ್ನು ಪಡೆದಿದ್ದು, ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ 12 ಇಂಚಿನ ವೀಲ್ಸ್ ಅನ್ನು ಹೊಂದಿದೆ. ಇನ್ನು, ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಹೊಸ ಫಾಸ್ಟ್ ಎಫ್4 ಸ್ಕೂಟರ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಆಂಟಿ ಥೆಫ್ಟ್ ಅಲರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ ಎಂದು ಹೇಳಬಹುದು.

ಒಕಾಯಾ ಫ್ರೀಡಂ ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, LA-2 ಹಾಗೂ LI-2. ರೂ.58,900 ರಿಂದ ರೂ.74,900 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ರಿಮೋಟ್ ಲಾಕಿಂಗ್ ನಂತಹ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಒಟ್ಟು 12 ಬಣ್ಣಗಳ ಆಯ್ಕೆಯಲ್ಲಿ ಈ ಸ್ಕೂಟರ್ ದೊರೆಯಲಿದ್ದು, 48V 30Ah LFP (ಲಿಥಿಯಂ ಐರನ್ ಫಾಸ್ಫೇಟ್) ಬ್ಯಾಟರಿ ಹಾಗೂ 48V 28Ah VRLA ಬ್ಯಾಟರಿ ಪ್ಯಾಕ್ ಹೊಂದಿದೆ. 250W ಹಬ್ ಮೋಟಾರ್ ನಿಂದ ಚಾಲಿತವಾಗಲಿದ್ದು, 25 kmph ಟಾಪ್ ಸ್ವೀಡ್ ಹೊಂದಿದೆ.

ಒಕಾಯಾ ಕ್ಲಾಸಿಕ್ IQ ಒಂದೇ ರೂಪಾಂತರ ಹಾಗೂ ಐದು ಬಣ್ಣಗಳ ಆಯ್ಕೆಯಲ್ಲಿ ಖರೀದಿ ಲಭ್ಯವಿದ್ದು, ರೂ.74,500 ಬೆಲೆಯಲ್ಲಿ ದೊರೆಯಲಿದೆ. ಇದು 48V 30Ah ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, 250W BLDC ಹಬ್ ಮೋಟಾರ್ ನಿಂದ ಚಾಲಿತವಾಗಲಿದೆ. ಕೇವಲ 5-6 ಗಂಟೆಯಲ್ಲಿ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲಿದ್ದು, 60 - 70 km ರೇಂಜ್ ನೀಡಲಿದೆ. ಅಲ್ಲದೆ, 25 kmph ಟಾಪ್ ಸ್ವೀಡ್ ಹೊಂದಿದೆ.

ಒಟ್ಟಾರೆಯಾಗಿ ಬೆಳವಣಿಗೆಯಾಗುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ವಿವಿಧ ವಾಹನ ತಯಾರಕ ಕಂಪನಿಗಳು ಪ್ರಯತ್ನಿಸುತ್ತಿದ್ದು, ಇದೀಗ, ಒಕಾಯಾ ಕಂಪನಿ ಫಾಸ್ಟ್ ಎಫ್3 ವೇಗದ ಸ್ಕೂಟರ್ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಎಂಟ್ರಿ ಕೊಡಲು ಪ್ರಯತ್ನಿಸುತ್ತಿದೆ. ಈ ಸ್ಕೂಟರ್ ಕೈಗೆಟುಕುವ ಬೆಲೆ ಹಾಗೂ ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಬಹುದು. ಮಾರುಕಟ್ಟೆಗೆ ಬಂದ ಮೇಲೆ ಎಥರ್, ಓಲಾ ಹಾಗೂ ಟಿವಿಎಸ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ.

Most Read Articles

Kannada
English summary
Okaya ev long awaited teaser super fast electric scooter to launch on feb 10
Story first published: Saturday, February 4, 2023, 14:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X