130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... ರೂ.99,999ಕ್ಕೆ ಸಿಗುತ್ತೆ!

ಹೊಸ ದ್ವಿಚಕ್ರ ವಾಹನಗಳನ್ನು ಖರೀದಿಸುವವರೂ ಸದ್ಯ ಪೆಟ್ರೋಲ್ ಚಾಲಿತ ಮೋಟಾರ್‌ಸೈಕಲ್‌ಗಳಿಗೆ ಗುಡ್ ಬೈ ಹೇಳಿ, ಎಲೆಕ್ಟ್ರಿಕ್ ಬೈಕ್ ಕೊಂಡುಕೊಳ್ಳಲು ಮನಸ್ಸು ಮಾಡುತ್ತಿದ್ದಾರೆ. ಭಾರತದಲ್ಲಿ ಅನೇಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಹುಟ್ಟಿಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬೈಕ್‌ಗಳನ್ನು ಲಾಂಚ್ ಮಾಡುತ್ತಿವೆ.

ಹೈದರಾಬಾದ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿಲಿರುವ ಪ್ಯೂರ್ ಇವಿ, ಭಾರತದ ಮಾರುಕಟ್ಟೆಯಲ್ಲಿ ತನ್ನ ಪ್ರಯಾಣಿಕ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ 'ಇಕೋಡ್ರೈಫ್ಟ್' ಬಿಡುಗಡೆ ಮಾಡಿದ್ದು, ರೂ.99,999 (ಎಕ್ಸ್ ಶೋರೂಂ, ದೆಹಲಿ, ಸಬ್ಸಿಡಿ ಸೇರಿ) ಆರಂಭಿಕ ಬೆಲೆಗೆ ಲಭ್ಯವಿದೆ. ಗ್ರಾಹಕರು ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಖರೀದಿ ಮಾಡಬಹುದಾಗಿದೆ. ಅವುಗಳೆಂದರೆ ನಮೇಲಿ ಬ್ಲ್ಯಾಕ್, ಗ್ರೇ, ರೆಡ್ ಹಾಗೂ ಬ್ಲೂ. ಇದರಿಂದಾಗಿ ಈ ಬೈಕ್ ಖರೀದಿದಾರರಿಗೆ ಇಷ್ಟವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಕಂಪನಿ ಇದೆ.

130 km ರೇಂಜ್ ನೀಡುವ ecoDryft ಬೈಕ್ ಬಿಡುಗಡೆ...

ಇಷ್ಟೇಅಲ್ಲದೆ, ದೇಶಾದ್ಯಂತ ಈ ಬೈಕ್‌ನ್ನು ಒಂದೇ ಬೆಲೆಯಲ್ಲಿ ಮಾರಾಟ ಮಾಡಲು ಕಂಪನಿ ಯೋಜಿಸುತ್ತಿದೆ. ಅದು ಕೂಡ ರೂ.1,14,999 ಎಕ್ಸ್ ಶೋರೂಂ ದರದಲ್ಲಿಯೇ.. ಆದರೆ, ಆನ್ ರೋಡ್ ಬೆಲೆ ವಿವಿಧ ರಾಜ್ಯಗಳ ಸಬ್ಸಿಡಿ ಹಾಗೂ ಆರ್‌ಟಿಒ ಶುಲ್ಕ ಆಧರಿಸಿ ಬೇರೆಯಾಗಿರುತ್ತದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಇಕೋಡ್ರೈಫ್ಟ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 3 kWh ಬ್ಯಾಟರಿ ಪ್ಯಾಕ್ ಹಾಗೂ 3 kW ಮೋಟಾರ್ ಅನ್ನು ಹೊಂದಿದೆ.

ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 130 km ರೇಂಜ್ ನೀಡಲಿದ್ದು, 75 kmph ಟಾಪ್ ಸ್ವೀಡ್ ಹೊಂದಿದೆ. ಜೊತೆಗೆ ಇದರ ಬ್ಯಾಟರಿ ಪ್ಯಾಕ್ ಸಂಪೂರ್ಣ ಚಾರ್ಜ್ ಆಗಲು ಆರು ಗಂಟೆ ತೆಗೆದುಕೊಂಡರೆ, ಶೇಕಡ 20 ರಿಂದ 80% ಬ್ಯಾಟರಿ ಚಾರ್ಜ್ ಆಗಲು ಕೇವಲ ಮೂರು ಗಂಟೆ ಸಾಕು. ಈ ಹೊಸ ಬೈಕ್ ಮೂರು ರೈಡಿಂಗ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಅವುಗಳೆಂದರೆ, ಡ್ರೈವ್, ಕ್ರಾಸ್ ಓವರ್ ಮತ್ತು ಥ್ರಿಲ್.

130 km ರೇಂಜ್ ನೀಡುವ ecoDryft ಬೈಕ್ ಬಿಡುಗಡೆ...

ಇಕೋಡ್ರೈಫ್ಟ್ ಬೈಕ್ ಪವರ್‌ಟ್ರೇನ್ ಕುರಿತು ಮಾತನಾಡುವುದಾದರೆ, ಇದರಲ್ಲಿ ಅಳವಡಿಸಿರುವ ಎಲೆಕ್ಟ್ರಿಕ್ ಮೋಟರ್‌ 4.2 bhp ಗರಿಷ್ಠ ಪವರ್ ಹಾಗೂ 40 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕೆಲವೇ 5 ಸೆಕೆಂಡುಗಳಲ್ಲಿ 0 - 40 ಹಾಗೂ 10 ಸೆಕೆಂಡುಗಳಲ್ಲಿ 60km/h ವೇಗವನ್ನು ಪಡೆಯಲಿದೆ ಎಂದು ಪ್ಯೂರ್ ಇವಿ ಹೇಳಿಕೊಂಡಿದೆ. ಅಲ್ಲದೆ, ಫ್ರಂಟ್ 18 ಇಂಚಿನ ವೀಲ್ ಮತ್ತು ರೇರ್ 17 ಇಂಚಿನ ವೀಲ್ ಹೊಂದಿದೆ.

ಹೊಸ ಪ್ಯೂರ್ ಇವಿ ಇಕೋಡ್ರೈಫ್ಟ್ ಬೈಕ್ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಇದು ಸ್ಮಾರ್ಟ್ ಬಿಎಂಎಸ್ (ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಮ್) 7-ಇಂಚಿನ TFT ಡಿಸ್ಪ್ಲೇ, ಬ್ಲೂಟೂತ್ ಸಂಪರ್ಕ, ಚಾರ್ಜರ್, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ನವೀನ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು. ಇಕೋಡ್ರೈಫ್ಟ್ ಬಿಡುಗಡೆ ಬಗ್ಗೆ ಮಾತನಾಡಿರುವ ಸಿಇಒ ರೋಹಿತ್ ವಡೇರಾ, 'ಕಳೆದ ಎರಡು ತಿಂಗಳಿನಿಂದ ಗ್ರಾಹಕರಿಗೆ ಟೆಸ್ಟ್ ಡ್ರೈವ್‌ ನಡೆಸಲು ಸಾಧ್ಯವಾಗುವಂತೆ 100ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳಲ್ಲಿ ಡೆಮೊ ಬೈಕ್ ಗಳನ್ನು ನೀಡಲಾಗಿತ್ತು. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ' ಎಂದು ಹೇಳಿದ್ದಾರೆ.

130 km ರೇಂಜ್ ನೀಡುವ ecoDryft ಬೈಕ್ ಬಿಡುಗಡೆ...

ಅಲ್ಲದೆ, 'ಪ್ರತಿಯೊಂದು ಡೀಲರ್‌ಶಿಪ್‌ಗಳಲ್ಲಿಯು ನೂತನ ಬೈಕಿಗಾಗಿ ಬುಕಿಂಗ್‌ ಕೂಡ ಆರಂಭವಾಗಿದ್ದು, ಗ್ರಾಹಕರಿಗೆ ಮೊದಲ ಬ್ಯಾಚ್ ಬೈಕ್‌ಗಳ ವಿತರಣೆಯನ್ನು ಮಾರ್ಚ್ ತಿಂಗಳ ಮೊದಲ ವಾರದಿಂದ ಪ್ರಾರಂಭಿಸಲಾಗುತ್ತದೆ. ಭಾರತದ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಪಾಲು 65% ಇದ್ದು, ಇಕೋಡ್ರೈಫ್ಟ್ ಬೈಕ್ ಬಿಡುಗಡೆಯೊಂದಿಗೆ ಇಲ್ಲಿ ಒಂದಿಷ್ಟು ಜಾಗವನ್ನು ಮಾಡಿಕೊಳ್ಳುವ ಗುರಿಯನ್ನು ಪ್ಯೂರ್ ಇವಿ ಹೊಂದಿದೆ' ಎಂದು ರೋಹಿತ್ ವಡೇರಾ ತಿಳಿಸಿದ್ದಾರೆ. ಮೋಟಾರ್‌ಸೈಕಲ್‌ ಗ್ರಾಹಕರಿಗೆ ದೊರೆತ ಮೇಲೆ ಮತ್ತಷ್ಟು ಕಮಲ್ ಮಾಡಬಹುದು ಎಂದು ಕಂಪನಿ ನಂಬಿದೆ.

ಈಗಾಗಲೇ, ಪ್ಯೂರ್ ಇವಿ ತನ್ನ ಡೀಲರ್‌ಶಿಪ್‌ಗಳನ್ನು ದೇಶಾದ್ಯಂತ ಪ್ರಮುಖ ನಗರಗಳಲ್ಲಿ ವಿಸ್ತರಿಸುವ ಕಾರ್ಯದಲ್ಲಿ ತೊಡಗಿದ್ದು, ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ತನ್ನ ಬೈಕ್ ಮಾದರಿಗಳನ್ನು ದಕ್ಷಿಣ ಏಷ್ಯಾದ ದೇಶಗಳಿಗೆ ರಫ್ತು ಮಾಡುತ್ತಿದೆ. ಇದೀಗ, ಆಫ್ರಿಕಾ ಹಾಗೂ ಮಧ್ಯಪ್ರಾಚ್ಯ ದೇಶಗಳಾದ ಈಜಿಪ್ಟ್ ಸೇರಿ ಇತರೆಡೆಗೆ ತನ್ನ ವ್ಯಾಪಾರ ಜಾಲವನ್ನು ವಿಸ್ತರಿಸಿಕೊಳ್ಳಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಒಟ್ಟಾರೆ ಭಾರತದ ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ವಿದೇಶದಲ್ಲೂ ಮಾರಾಟ ಮಾಡುವ ಮೂಲಕ ಉತ್ತಮ ಗ್ರಾಹಕರನ್ನು ಗಳಿಸಬೇಕೆಂಬುದು ಕಂಪನಿಯ ಉದ್ದೇಶವಾಗಿದೆ ಎಂದು ಹೇಳಬಹುದು.

Most Read Articles

Kannada
English summary
Pure ev ecodryft launched at rs 99999 specs range features details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X