200 km ರೇಂಜ್ ನೀಡುವ 'ಸಿಂಪಲ್ ಒನ್' ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರ ಬಿಡುಗಡೆ: ಉತ್ಪಾದನಾ ಘಟಕ ಉದ್ಘಾಟನೆ

ಭಾರತದಲ್ಲಿ ಪೆಟೋಲ್ ಬೆಲೆ ಭಾರೀ ಏರಿಕೆಯಾಗಿದ್ದು, ಹೊಸ ವಾಹನಗಳನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ವೇಳೆ ಆಶಾಕಿರಣ ಎಂಬಂತೆ ದ್ವಿಚಕ್ರ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು (EV) ಅಭಿವೃದ್ಧಿಪಡಿಸಲು ಮುಂದಾಗಿದ್ದು, ಈ ವಿಭಾಗದಲ್ಲಿ ಹಲವು ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ 'ಸಿಂಪಲ್ ಎನರ್ಜಿ' ತನ್ನ ಮೊದಲ ಉತ್ಪಾದನಾ ಘಟಕವನ್ನು ಗುರುವಾರ (ಜನವರಿ 19) ಉದ್ಘಾಟಿಸಿದೆ. ಕಂಪನಿಯು ತನ್ನ ಪ್ರಮುಖ ಮಾದರಿಯಾದ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯನ್ನು ಪ್ರಾರಂಭಿಸಲು ಸಜ್ಜಾಗುತ್ತಿದೆ. ಈ ಹೊಸ ಅತ್ಯಾಧುನಿಕ ಎಲೆಕ್ಟ್ರಿಕ್ ವಾಹನ (EV) ಉತ್ಪಾದನಾ ಘಟಕ 2,00,000 ಚದರ ಅಡಿ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದ್ದು, ತಮಿಳುನಾಡಿನ ಶೂಲಗಿರಿಯಲ್ಲಿದೆ. ಈ ಹೊಸ ಘಟಕಕ್ಕೆ 'ಸಿಂಪಲ್ ವಿಷನ್ 1.0' ಎಂದು ಹೆಸರಿಡಲಾಗಿದೆ.

ಬಹುನಿರೀಕ್ಷಿತ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರ ಬಿಡುಗಡೆ: ಉತ್ಪಾದನಾ ಘಟಕ ಉದ್ಘಾಟನೆ

ಇದಲ್ಲದೆ, 'ಸಿಂಪಲ್ ವಿಷನ್ 1.0' ಘಟಕವು ಭಾರತ ದೇಶದಲ್ಲಿಯೇ ಸುರಕ್ಷಿತ ಉತ್ಪಾದನಾ ಘಟಕಗಳಲ್ಲಿ ಒಂದಾಗಿದೆ ಎಂದು ಸಿಂಪಲ್ ಎನರ್ಜಿ ಹೇಳಿಕೊಂಡಿದೆ. ಈ ಉತ್ಪಾದನಾ ಘಟಕವು ಆಂತರಿಕ ವಾಹನ ಪರೀಕ್ಷಾ ಕೇಂದ್ರ (in house vehicle testing centre)ವನ್ನು ಸಹ ಹೊಂದಿದೆ. ಅದರ ಮೂಲಕ ಪ್ರಸ್ತುತ ಹಾಗೂ ಭವಿಷ್ಯದ ವಾಹನಗಳನ್ನು ಮಾರುಕಟ್ಟೆಯಲ್ಲಿನ ಗ್ರಾಹಕರ ಅಭಿರುಚಿಗೆ ತಕ್ಕಂತೆ ಮತ್ತಷ್ಟು ಅಭಿವೃದ್ಧಿಪಡಿಸಲು ಈ ಘಟಕದ ಮೂಲಕ ಸಾಧ್ಯವಾಗಲಿದೆ ಎಂದು ಹೇಳಬಹುದು.

ಕಂಪನಿ ಪ್ರಕಾರ, 'ಸಿಂಪಲ್ ವಿಷನ್ 1.0' ಉತ್ಪಾದನಾ ಘಟಕವನ್ನು ರೂ.100 ಕೋಟಿಗಳ ಆರಂಭಿಕ ಹೂಡಿಕೆಯೊಂದಿಗೆ ನಿರ್ಮಿಸಲಾಗಿದೆ. ಸ್ಥಳೀಯವಾಗಿ 700ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ಮಹಿಳಾ ಉದ್ಯೋಗಿಗಳಿಗೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನ ಮಾಡಿದೆ. ಅಲ್ಲದೆ, ಪರಿಸರವನ್ನು ಸಂರಕ್ಷಿಸಲು ಜಾಗತಿಕವಾಗಿ ಪರಿವರ್ತನೆ ಮಾಡುವ ಕೆಲಸದಲ್ಲಿ ಮುಂಚೂಣಿಯಲ್ಲಿರಲು ಕಂಪನಿಯು ತನ್ನದೇ ಆದ ಗುರಿ ಹೊಂದಿದೆಯಂತೆ. ಅದಕ್ಕಾಗಿ ಈಗಾಗಲೇ ಅತ್ಯಾಧುನಿಕ ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡಿಕೊಂಡಿದೆ.

ಬಹುನಿರೀಕ್ಷಿತ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರ ಬಿಡುಗಡೆ: ಉತ್ಪಾದನಾ ಘಟಕ ಉದ್ಘಾಟನೆ

ಹೊಸ ಸಿಂಪಲ್ ಒನ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದರ ಸಂಪೂರ್ಣ ಚಾರ್ಜ್ ಮಾಡಿದ ಬ್ಯಾಟರಿ ಪ್ಯಾಕ್, ಬರೋಬ್ಬರಿ 200 ಕಿಲೋಮೀಟರ್‌ಗಳಿಗಿಂತ ಹೆಚ್ಚು ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಸಿಂಪಲ್ ಎನರ್ಜಿ ಕಂಪನಿ ಹೇಳಿಕೊಂಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ ಹೆಚ್ಚು ಶಕ್ತಿಶಾಲಿ 8.5kW ಎಲೆಕ್ಟ್ರಿಕ್ ಮೋಟಾರ್‌ ಹೊಂದಿದ್ದು, 72 Nm ಪೀಕ್ ಟಾರ್ಕ್ ಉತ್ಪಾದಿಸುವ ದೊಡ್ಡ 4.8kWh ಬ್ಯಾಟರಿ ಪ್ಯಾಕ್‌ನೊಂದಿಗೆ ಖರೀದಿಗೆ ಲಭ್ಯವಾಗಲಿದೆ.

ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಮಾತನಾಡುವುದಾದರೆ, ಮುಂಬರುವ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಸುಮಾರು 105 ಕಿಮೀ / ಗಂ ಗರಿಷ್ಠ ವೇಗವನ್ನು ಹೊಂದಿದ್ದು, ಕೇವಲ 2.77 ಸೆಕೆಂಡುಗಳಲ್ಲಿ 0 - 40 ಕಿಮೀ/ಗಂ ಟಾಪ್ ಸ್ವೀಡ್ ಪಡೆಯಲಿದೆ. ಇಷ್ಟೇಅಲ್ಲದೆ, ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಫ್ರೀ-ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಈ ಎಲೆಕ್ಟ್ರಿಕ್ ಸ್ಕೂಟರ್ ರೂ.1.05 ಲಕ್ಷ (ಎಕ್ಸ್ ಶೋ ರೂಂ) ಪ್ರಾರಂಭಿಕ ಬೆಲೆಯೊಂದಿಗೆ ಖರೀದಿಗೆ ಬರುವ ಸಾಧ್ಯತೆಯಿದೆ.

ಭಾರತದಲ್ಲಿ ಸಿಂಪಲ್ ಎನರ್ಜಿ ಮಾತ್ರವಲ್ಲದೆ ವಿವಿಧ ವಾಹನ ತಯಾರಕ ಕಂಪನಿಗಳು, ತಮ್ಮ ದ್ವಿಚಕ್ರ ವಾಹನಗಳನ್ನು ಖರೀದಿಗೆ ನೀಡುತ್ತವೆ. ಅವುಗಳ ಬೆಲೆಯು ಕೈಗೆಟುಕುವಂತಿದೆ. ಜಾಯ್ ಇ - ಬೈಕ್ ತಯಾರಕ ಕಂಪನಿ 'ವಾರ್ಡ್ ವಿಝಾರ್ಡ್ ಜನವರಿ 22 ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಆನ್‌ಲೈನ್ ಆರ್ಡರ್ ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಸ್ಕೂಟರ್ ಬೆಲೆ ರೂ.1.49 ಲಕ್ಷ ಇದೆ. ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ರೂ.99,130, ಓಲಾ S1 ಎಲೆಕ್ಟ್ರಿಕ್ ಸ್ಕೂಟರ್ 1,04,999 ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ.

ಸಿಂಪಲ್ ಎನರ್ಜಿ ಉತ್ಪಾದನಾ ಘಟಕದ ಬಗ್ಗೆ..
ಇನ್ನು, ತಮಿಳುನಾಡಿನಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕದೊಂದಿಗೆ, ಸಿಂಪಲ್ ಎನರ್ಜಿ ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲಿ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನೆಯನ್ನು ಪ್ರಾರಂಭಿಸಲಿದ್ದು, ಶೀಘ್ರದಲ್ಲೇ ಗ್ರಾಹಕರಿಗೆ ಖರೀದಿಗೆ ಸಿಗಲಿದೆ. ಮುಂಬರುವ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ ಕಾರ್ಯಕ್ಷಮತೆ, ವಿನ್ಯಾಸ ಮತ್ತು ವೈಶಿಷ್ಟ್ಯಗಳಲ್ಲಿ ಖರೀದಿದಾರರ ನಿರೀಕ್ಷೆಗಳನ್ನು ಪೂರೈಸಬಹುದು. ಆ ಬಗ್ಗೆ ಕೆಲವೇ ದಿನಗಳಲ್ಲಿ ಮಾಹಿತಿ ತಿಳಿಯಲಿದ್ದು, ಕಾತರತೆ ಹೆಚ್ಚಾಗಿದೆ ಎಂದು ಹೇಳಬಹುದು.

Most Read Articles

Kannada
English summary
Simple one electric scooter launch soon manufacturing plant inaugurated
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X