ಭಾರತದಲ್ಲಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಯಾವಾಗ? ಅತಿ ಹೆಚ್ಚು ರೇಂಜ್ ಕೊಡಲಿದೆಯಂತೆ..!

ಜಪಾನ್ ಮೂಲದ ಪ್ರಮುಖ ವಾಹನ ತಯಾರಕ ಕಂಪನಿ ಸುಜುಕಿ ಹಲವು ನೂತನ ರೀತಿಯ ದ್ವಿಚಕ್ರ ವಾಹನಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿರುತ್ತದೆ. ಅವುಗಳ ಅತ್ಯಾಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳು ಗ್ರಾಹಕರಿಗೆ ಇಷ್ಟವಾಗಲಿದ್ದು, ಸುಜುಕಿಯ ಬೈಕ್ ಹಾಗೂ ಸ್ಕೂಟರ್‌ಗಳನ್ನು ಖರೀದಿಸಲು ಬಯಸುತ್ತಾರೆ ಎಂದು ಹೇಳಬಹುದು.

ಸುಜುಕಿ ತನ್ನ ಜಾಗತಿಕ ಮಾರಾಟ ಕಾರ್ಯತಂತ್ರದ ಕುರಿತಂತೆ ಮಾಹಿತಿಯನ್ನು ಹಂಚಿಕೊಂಡಿದೆ. ಅದರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಚಿಕ್ಕ ಹಾಗೂ ಮಧ್ಯಮ ಗ್ರಾತದ ಮೋಟಾರ್‌ಸೈಕಲ್ ಗೆ ಸರಿಸಮನಾದ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ. ಇದನ್ನು ಕೆಲಸಕ್ಕೆ ತೆರಳಲು ಹಾಗೂ ಇತರೆ ಕಾರ್ಯಗಳಿಗೆ ಬಳಕೆ ಮಾಡಬಹುದು ಎಂದು ತಿಳಿಸಿದೆ. ಆದರೆ, ಕಂಪನಿಯ ಈ ದ್ವಿಚಕ್ರ ವಾಹನ, ಸ್ಕೂಟರ್ ಅಥವಾ ಬೈಕ್ ಆಗಿರಲಿದೆಯೇ ಎಂಬುದರ ಬಗ್ಗೆ ಯಾವುದೇ ವಿಚಾರ ಗೊತ್ತಾಗಿಲ್ಲ. ಕೆಲವರು ಇದು ಸ್ಕೂಟರ್ ಎಂದು ಹೇಳುತ್ತಿದ್ದಾರೆ.

ಭಾರತದಲ್ಲಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಯಾವಾಗ? ಅತಿ ಹೆಚ್ಚು ರೇಂಜ್ ಕೊಡಲಿದೆಯಂತೆ..!

ಕಂಪನಿ ರೂಪಿಸುವ ಕಾರ್ಯತಂತ್ರದ ಪ್ರಕಾರ, ಇದು, ಕೈಗೆಟುಕುವ ಬೆಲೆಯ ಪ್ರಯಾಣಿಕ ದ್ವಿಚಕ್ರ ವಾಹನವಾಗಿರಲಿದೆ. ಅಲ್ಲದೆ, 2030ರ ಆರ್ಥಿಕ ವರ್ಷದೊಳಗೆ ಭಾರತದ ಮಾರುಕಟ್ಟೆಯಲ್ಲಿ ತನ್ನ ದ್ವಿಚಕ್ರ ವಾಹನ ಮಾರಾಟ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಸಂಖ್ಯೆ ಶೇಕಡ 25% ಹೊಂದಿರಲು ಕಂಪನಿ ಯೋಜಿಸಿದೆ. ಕೇವಲ ಎಂಟು (2030) ವರ್ಷಗಳಲ್ಲಿಯೇ ಬಯೊಬ್ಬರಿ 8 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ರೆಡಿ ಮಾಡುವ ಗುರಿಯನ್ನು ಕಂಪನಿ ಹಾಕಿಕೊಂಡಿದೆ ಎಂದು ವರದಿಯಾಗಿದೆ.

ಕಳೆದ ಎರಡು ವರ್ಷದಿಂದ ಸುಜುಕಿ ಎಲೆಕ್ಟ್ರಿಕ್ ಬರ್ಗ್‌ಮ್ಯಾನ್ ಸ್ಕೂಟರ್ ಅನ್ನು ಹಲವು ಬಾರಿ ರಸ್ತೆಯಲ್ಲಿ ಪರೀಕ್ಷಿಸಿದ್ದು, ಇದೇ ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಇದರಲ್ಲಿ ಅಳವಡಿಸಲಾಗಿರುವ ಮೋಟಾರ್, 4kW ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಸಾಧ್ಯತೆ ಇದ್ದು, ಕಾರ್ಯಕ್ಷಮತೆಯ ವಿಚಾರಕ್ಕೆ ಬಂದರೆ, 110 ಸಿಸಿ ಪೆಟ್ರೋಲ್ ಚಾಲಿತ ಸ್ಕೂಟರ್‌ಗೆ ಸರಿಸಮನಾಗಿರುತ್ತದೆ ಎಂದು ಹೇಳಲಾಗಿದ್ದು, ಒಂದೇ ಚಾರ್ಜಿನಲ್ಲಿ ಬರೋಬ್ಬರಿ 90 ಕಿಮೀ ರೇಂಜ್ ನೀಡಬಹುದಂತೆ.

ಪರೀಕ್ಷೆಗೆ ಒಳಪಟ್ಟಿರುವ ಎಲೆಕ್ಟ್ರಿಕ್ ಬರ್ಗ್‌ಮ್ಯಾನ್ ಸ್ಕೂಟರ್, ಸದ್ಯ ಭಾರತ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಇಂಧನ ಚಾಲಿತ ಬರ್ಗ್‌ಮ್ಯಾನ್ ಸ್ಟ್ರೀಟ್‌ನಂತೆಯೇ ಫ್ರಂಟ್, 12-ಇಂಚಿನ ಅಲಾಯ್ ವೀಲ್ಸ್, ರೇರ್, ಟ್ವಿನ್ ಶಾಕ್ ಅಬ್ಸಾರ್ಬರ್ ಸೆಟಪ್ ಡ್ರಮ್ ಬ್ರೇಕ್ ಹೊಂದಿರುವ ಸಾಧ್ಯತೆ ಇದೆ. ಆದರೆ, ನೂತನ ಎಲೆಕ್ಟ್ರಿಕ್ ಸ್ಕೂಟರ್, ಬರ್ಗ್‌ಮ್ಯಾನ್ ನ್ನೇ ಆಗಿರುತ್ತಾ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಸುಜುಕಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2025ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಲಿದ್ದು, ಸರಿ ಸುಮಾರು ಒಂದು ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಬಹುದು.

ಮತ್ತೊಂದು ಜಪಾನ್ ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಹೋಂಡಾ ಕೂಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ನಿರತವಾಗಿದೆ. ಕಂಪನಿಯು ಬಹುತೇಕ ಹೋಂಡಾ ಆಕ್ಟಿವಾವನ್ನು ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿದೆ ಎಂದು ಅಂದಾಜಿಸಲಾಗಿದ್ದು, 2024ರಲ್ಲಿ ಖರೀದಿಗೆ ಸಿಗುವ ಸಾಧ್ಯತೆಯಿದೆ. ಸದ್ಯ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುವ ಹೋಂಡಾ ಆಕ್ಟಿವಾ ಪೆಟ್ರೋಲ್ ಆವೃತ್ತಿಯು ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಮಾರಾಟದಲ್ಲೂ ಮೊದಲ ಸ್ಥಾನದಲ್ಲಿರುತ್ತದೆ. ಎಲೆಕ್ಟ್ರಿಕ್ ಹೋಂಡಾ ಆಕ್ಟಿವಾ, ಸಿಂಗಲ್ ಚಾರ್ಜ್ ನಲ್ಲಿ 100km ಹೆಚ್ಚು ರೇಂಜ್ ನೀಡಬಹುದು ಎಂದು ಹೇಳಲಾಗಿದೆ.

ಇನ್ನು, ಸುಜುಕಿ ತನ್ನ ದೊಡ್ಡ ಗ್ರಾತ್ರದ ಬೈಕ್ ಗಳಲ್ಲಿ 'ಕಾರ್ಬನ್ ನ್ಯೂಟ್ರಲ್ ಫ್ಯುಯೆಲ್' ಬಳಕೆ ಮಾಡುವ ಬಗ್ಗೆಯೂ ಕಾರ್ಯನಿರ್ವಹಿಸುತ್ತಿದೆ . ಸುಜುಕಿ ಭಾರತದ ಮಾರುಕಟ್ಟೆಗೆ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವ ಮೂಲಕ ಮುಂಬರಲಿರುವ ಹೋಂಡಾ ಆಕ್ಟಿವಾ ಇವಿಗೆ ಭಾರೀ ಪೈಪೋಟಿ ನೀಡಬಹುದು ಎಂದು ಅಂದಾಜಿಸಲಾಗಿದ್ದು, ಹಲವು ನವೀನ ವೈಶಿಷ್ಟ್ಯದೊಂದಿಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸುವ ಕೆಲಸದಲ್ಲಿ ಸುಜುಕಿ ನಿರತವಾಗಿದೆ. ಇದರ ಮೇಲೆ ಗ್ರಾಹಕರಿಗೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗುತ್ತಿವೆ ಎಂದು ಹೇಳಬಹುದು.

ಇನ್ನು, ಭಾರತದ ಮಾರುಕಟ್ಟೆಯಲ್ಲಿ ಹಲವು ದೊಡ್ಡ ವಾಹನ ತಯಾರಕ ಕಂಪನಿಗಳು ಸೇರಿದಂತೆ ಸಣ್ಣ ಸ್ಟಾರ್ಟಪ್ ಗಳು ಕೂಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ರೆಡಿ ಮಾಡುತ್ತಿವೆ. ಅದರಲ್ಲಿ ಓಲಾ ಎಲೆಕ್ಟ್ರಿಕ್, ಎಥರ್ ಎನರ್ಜಿ ಹಾಗೂ ಟಿವಿಎಸ್ ಕಂಪನಿಗಳು ಸೇರಿವೆ. ಈಗಾಗಲೇ ದೇಶದಲ್ಲಿ ಈ ಸ್ಕೂಟರ್ ಕಂಪನಿಗಳ ಮಾರಾಟ ಪ್ರಮಾಣ ಅತ್ಯುತ್ತಮವಾಗಿದ್ದು, ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ ಎಂದು ಹೇಳಬಹುದು. ಮಂಬರುವ ದಿನಗಳಲ್ಲಿ ರಸ್ತೆಗಳಲ್ಲಿ ಕೇವಲ ಎಲೆಕ್ಟ್ರಿಕ್ ವಾಹನಗಳನ್ನು ನೋಡಿದರೂ ಆಶ್ಚರ್ಯಪಡಬೇಕಾಗಿಲ್ಲ.

Most Read Articles

Kannada
English summary
Suzuki first electric scooter launched in india in 2025 details kannada
Story first published: Tuesday, January 31, 2023, 16:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X