ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ... ಹಿಂದೆಯೇ ಬಂತು ಟಿವಿಎಸ್!

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳೆಂದು ಗುರುತಿಸಿಕೊಂಡಿರುವ ಹೀರೋ ಮೋಟೊಕಾರ್ಪ್, ಟಿವಿಎಸ್, ಬಜಾಜ್ ಆಟೋ ಸೇರಿದಂತೆ ವಿವಿಧ ಕಂಪನಿಗಳು ಜನವರಿ 2023ರ ಮಾರಾಟ ವಿವರವನ್ನು ಬಿಡುಗಡೆ ಮಾಡಿವೆ. ಬೆಳವಣಿಗೆಯಲ್ಲಿ ಕುಸಿತಕಂಡರೂ ಹೀರೋ ಎಂದಿನಂತೆ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದು, ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

ಹೀರೋ ಮೋಟೊಕಾರ್ಪ್: 3,49,437 ಯುನಿಟ್:
ದೇಶದ ಅತಿದೊಡ್ಡ ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಹೀರೋ ಮೋಟೊಕಾರ್ಪ್, ಕಳೆದ ಜನವರಿಯಲ್ಲಿ ಬರೋಬ್ಬರಿ 3,49,437 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಈ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ವರ್ಷದಿಂದ ವರ್ಷದ (YoY) ಬೆಳವಣಿಗೆಯನ್ನು ಗಮನಿಸಿದಾಗ ಅದು ಕಡಿಮೆಯಾಗಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. 2022ರ ಜನವರಿಯಲ್ಲಿ 3,80,476 ಯುನಿಟ್ ಮಾರಾಟ ಮಾಡಲು ಯಶಸ್ವಿಯಾಗಿತ್ತು. ಕೆಲವೇ ದಿನಗಳ ಹಿಂದೆ, ಕಂಪನಿಯು ಹೀರೋ Xoom 110cc ಸ್ಕೂಟರ್ ಅನ್ನು ರೂ.68,599 ಬೆಲೆಗೆ ಬಿಡುಗಡೆ ಮಾಡಿತ್ತು.

ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ.. ಹಿಂದೆಯೇ ಬಂತು ಟಿವಿಎಸ್!

ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) 2,78,143 ಯುನಿಟ್:
ಹೋಂಡಾ ಕಂಪನಿಯು ಜನವರಿ ತಿಂಗಳ ಮಾರಾಟದ ಅಂಕಿಅಂಶದ ವರದಿಯನ್ನು ಪ್ರಕಟಿಸಿದ್ದು, 2,78,143 ಯುನಿಟ್ ದ್ವಿಚಕ್ರ ವಾಹನಗಳನ್ನು ಸೇಲ್ ಮಾಡಿದೆ. ಆದರೆ, ವರ್ಷದಿಂದ ವರ್ಷದ (YoY) ಮಾರಾಟ ಪ್ರಮಾಣದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ. 2022ರ ಜನವರಿಗೆ ಹೋಲಿಕೆ ಮಾಡಿದರೆ, ಶೇಕಡ 11.8% ಇಳಿಕೆಯಾಗಿದೆ. ಇತ್ತೀಚೆಗೆ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಕೀ ಆವೃತ್ತಿಯನ್ನು ರೂ.80,537 ಎಕ್ಸ್ ಶೋರೂಂ ಬೆಲೆಯಲ್ಲಿ ಲಾಂಚ್ ಮಾಡಿತ್ತು.

ಟಿವಿಎಸ್ ಮೋಟಾರ್ಸ್ 2,64,710 ಯುನಿಟ್:
ಹೀರೋ ಮೋಟೊಕಾರ್ಪ್ ಹಾಗೂ ಹೋಂಡಾ ಕಂಪನಿಗಳು ಮಾರಾಟದಲ್ಲಿ ನಷ್ಟ ಅನುಭವಿಸುತ್ತಿವೆ. ಆದರೆ, ಟಿವಿಎಸ್ ಯಶಸ್ಸಿನತ್ತ ಭಾರೀ ವೇಗದಲ್ಲಿ ಮುನ್ನುಗ್ಗುತ್ತಿದೆ. ಕಳೆದ ಜನವರಿಯಲ್ಲಿ 2,64,710 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿ, ಉತ್ತಮ ಪ್ರಗತಿಯನ್ನು ದಾಖಲಿಸಿದೆ. ವರ್ಷದಿಂದ ವರ್ಷಕ್ಕೆ (YoY) ಶೇಕಡ 57.8% ಬೆಳವಣಿಗೆಯನ್ನು ಸಾಧಿಸಿದೆ. 2022ರ ಡಿಸೆಂಬರ್ ಗೆ ಹೋಲಿಸಿದರೆ, ತಿಂಗಳ ಸೇಲ್ ನಲ್ಲೂ ಒಳ್ಳೆಯ ಸಾಧನೆಯನ್ನೇ ಮಾಡಿದ್ದು, ಶೇಕಡ 16.3% ಪ್ರಗತಿಯನ್ನು ದಾಖಲಿಸಿದೆ. ತನ್ನ ಉದ್ಯಮವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಸಿಂಗಾಪುರ ಮೂಲದ ION ಮೊಬಿಲಿಟಿಯಲ್ಲಿ ಬಂಡವಾಳ ಹಾಕಲು ಮುಂದಾಗಿದೆ.

ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ.. ಹಿಂದೆಯೇ ಬಂತು ಟಿವಿಎಸ್!

ಬಜಾಜ್ ಆಟೋ 1,40,428 ಯುನಿಟ್:
ಪ್ರಮುಖ ದೇಶೀಯ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಬಜಾಜ್ ಆಟೋ ಉತ್ತಮವಾದ ಪ್ರಗತಿಯನ್ನು ದಾಖಲಿಸಿದೆ ಎಂದು ಹೇಳಬಹುದು. ಕಳೆದ ಜನವರಿ ತಿಂಗಳಲ್ಲಿ 1,40,428 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದ್ದು, 2022ರ ಜನವರಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 3.6% ಬೆಳವಣಿಗೆ ಸಾಧಿಸಿದ್ದು, ತಿಂಗಳ ಮಾರಾಟದಲ್ಲೂ ಉತ್ತಮ ಪ್ರಗತಿ ಕಂಡಿದ್ದು, 2022ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ, ಶೇಕಡ 11.9% ಬೆಳವಣಿಗೆ ಸಾಧಿಸಿದೆ. ಜೊತೆಗೆ ಹೊಸ ಪಲ್ಸರ್ P150 ಇತ್ತೀಚಿಗೆ ಲಾಂಚ್ ಮಾಡಿತ್ತು.

ರಾಯಲ್ ಎನ್‌ಫೀಲ್ಡ್ 67,702 ಯುನಿಟ್:
ಯುವಕರ ಹಾಟ್ ಫೆವರೇಟ್ ಬೈಕ್ ಗಳನ್ನು ತಯಾರಿಸುವ ರಾಯಲ್ ಎನ್‌ಫೀಲ್ಡ್, ಜನವರಿಯಲ್ಲಿ 67,702 ಯುನಿಟ್ ಗಳನ್ನು ಮಾರಾಟ ಮಾಡಿದೆ. 2022ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ, ಕಳೆದ ತಿಂಗಳು 13.2% ಪ್ರಗತಿಯನ್ನು ಸಾಧಿಸಿದೆ. ಅದೇರೀತಿ ವರ್ಷದಿಂದ ವರ್ಷದ ಮಾರಾಟ ಪ್ರಮಾಣವು ಉತ್ತಮವಾಗಿ ಬೆಳೆಯುತ್ತಿದ್ದು, 2022ರ ಜನವರಿಗೆ ಹೋಲಿಕೆ ಮಾಡಿದರೆ, ಶೇಕಡ 36.1% ಬೆಳವಣಿಗೆಯನ್ನು ಸಾಧಿಸಿದೆ. ಕಂಪನಿಯು ಇತ್ತೀಚೆಗೆ ಸೂಪರ್ ಮೀಟಿಯರ್ 650 ಕ್ರೂಸರ್ ಮೋಟಾರ್‌ಸೈಕಲ್ ಅನ್ನು ರೂ.3.49 ಲಕ್ಷ ಆರಂಭಿಕ ಬೆಲೆಯಲ್ಲಿ ಲಾಂಚ್ ಮಾಡಿದೆ.

ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ.. ಹಿಂದೆಯೇ ಬಂತು ಟಿವಿಎಸ್!

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 66,209 ಯುನಿಟ್:
ಜಪಾನ್ ಮೂಲದ ಸುಜುಕಿ ಕಂಪನಿಯು 2022ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ, ಈ ತಿಂಗಳು 66,209 ಯುನಿಟ್ ಮಾರಾಟ ಮಾಡುವುದರೊಂದಿಗೆ ಶೇಕಡ 3.6% ಪ್ರಗತಿಯನ್ನು ದಾಖಲಿಸಿದೆ. ಅಲ್ಲದೆ, ವರ್ಷದಿಂದ ವರ್ಷದ (YoY) ಮಾರಾಟದ್ಲಲೂ ಒಳ್ಳೆಯ ರೀತಿಯಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು. ಇನ್ನು, ಈ ಮಾರಾಟದ ಅಂಕಿ ಅಂಶಗಳನ್ನು ಗಮನಿಸಿದಾಗ ಹೀರೋ ಮೋಟೊಕಾರ್ಪ್ ಹಾಗೂ ಹೋಂಡಾ ಕಂಪನಿಗಳು ಉತ್ತಮವಾಗಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿವೆ. ಆದರೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕುಸಿತಕಂಡಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Top 6 two wheeler manufacturers in india january sales details kannada
Story first published: Saturday, February 4, 2023, 8:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X