ಭವಿಷ್ಯದ ವಾಹಕ ಟೆರ್ರಾ ಎಲೆಕ್ಟ್ರಿಕ್ ಸ್ಕೂಟರ್

By Nagaraja

ಸುಮಾರು 18 ಲಕ್ಷ ರು.ಗಳಷ್ಟು ಬೆಳೆಬಾಳುವ ದುಬಾರಿ ಕಿವಾನಿ ಎಲೆಕ್ಟ್ರಿಕ್ ಸೂಪರ್ ಬೈಕನ್ನು ಭಾರತಕ್ಕೆ ಪರಿಚಯಿಸಿರುವ ಜಪಾನ್ ಮೂಲದ ಟೆರ್ರಾ ಮೋಟಾರ್ಸ್, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ 12ನೇ ಆಟೋ ಎಕ್ಸ್ ಪೋದಲ್ಲೂ ಮಗದೊಂದು ಆಕರ್ಷಕ ವಿದ್ಯುತ್ ಚಾಲಿತ ಸ್ಕೂಟರ್ ಪ್ರದರ್ಶಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.

2014 ಆಟೋ ಎಕ್ಸ್ ಪೋ

ವಿದ್ಯುತ್ ಚಾಲಿತ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಉತ್ಪಾದನೆಯಲ್ಲಿ ನಂ.1 ಸಂಸ್ಥೆ ಎನಿಸಿಕೊಂಡಿರುವ ಟೆರ್ರಾ ಮೋಟಾರ್ಸ್, 2014 ಆಟೋ ಎಕ್ಸ್ ಪೋದಲ್ಲಿ ಜಗತ್ತಿನ ಮೊತ್ತ ಮೊದಲ ಎಕ್ಸಿಕೂಟಿವ್ ಇ ಸ್ಕೂಟರ್ 'ಎ 4000ಐ' ಅನಾವರಣಗೊಳಿಸಿದೆ.

ಟೆರ್ರಾ ಎಲೆಕ್ಟ್ರಿಕ್ ಸ್ಕೂಟರ್ ಎ 4000ಐ

ಇದರ ಪ್ರಮುಖ ವೈಶಿಷ್ಟ್ಯವೆಂದರೆ ಸ್ಮಾರ್ಟ್ ಫೋನ್ ಜತೆಗಿನೂ ಕನೆಕ್ಟ್ ಮಾಡಬಹುದಾಗಿದೆ. ಇದೇ ಸಂದರ್ಭದಲ್ಲಿ ಎಲೆಕ್ಟ್ರಿಕ್ ಟಿ4ಇ-ರಿಕ್ಷಾವನ್ನು ಪ್ರದರ್ಶಿಸಲಾಗಿತ್ತು.

ವಿಶಿಷ್ಟತೆಗಳು

ವಿಶಿಷ್ಟತೆಗಳು

  • ಚಾಲನೆ ಮಾಡುವಾಗ ವಿದ್ಯುತ್ ಬಳಕೆ,
  • ಲಿಥಿಯಂ ಬ್ಯಾಟರಿ,
  • ಚಾಲನೆ ವೇಳೆ ಡಾಟಾ ಸಂಗ್ರಹಣೆ.
  • ಟೆರ್ರಾ ಎಲೆಕ್ಟ್ರಿಕ್ ಸ್ಕೂಟರ್ ಎ 4000ಐ

    ನೂತನ ಟೆರ್ರಾ ಎಲೆಕ್ಟ್ರಿಕ್ ಬೈಕ್‌ನಲ್ಲಿ ಸ್ಮಾರ್ಟ್ ಫೋನ್ ಕನೆಕ್ಟ್ ಮಾಡುವ ಮೂಖಾಂತರ ಸ್ಥಳ ಇತ್ಯಾದಿ ಬಳಕೆದಾರರ ಮಾಹಿತಿ ಗಿಟ್ಟಿಸಿಕೊಳ್ಳಬಹುದಾಗಿದೆ.

    ವೈಶಿಷ್ಟ್ಯ

    ವೈಶಿಷ್ಟ್ಯ

    • ಐಫೋನ್ ಬಳಕೆ,
    • ಬ್ಯಾಟರಿ ಭಾರ 16 ಕೆ.ಜಿ,
    • ಬದಲಾಯಿಸಬಹುದಾದ ಬ್ಯಾಟರಿ,
    • ಬ್ಯಾಟರಿ ಜೀವಾವಧಿ 50,000 ಕೀ.ಮೀ.,
    • ಚಾರ್ಚಿಂಗ್ ಸಮಯ 4.5 ಗಂಟೆ
    • ವೈಶಿಷ್ಟ್ಯ

      ವೈಶಿಷ್ಟ್ಯ

      • ಇಬ್ಬರನ್ನು ಹೊತ್ಯೊಯ್ಯಬಲ್ಲ ಸಾಮರ್ಥ್ಯ,
      • ಬ್ರೇಕ್ ಫ್ರಂಟ್ ಡಿಸ್ಕ್ ರಿಯರ್ ಡಿಸ್ಕ್,
      • ಗರಿಷ್ಠ ವೇಗತೆ ಗಂಟೆಗೆ 65 ಕೀ.ಮೀ.,
      • ಗ್ರೌಂಡ್ ಕ್ಲಿಯರನ್ಸ್ 140 ಎಂಎಂ,
      • ವೀಲ್‌ಬೇಸ್ 1280 ಎಂಎಂ,
      • ಸೀಟು ಎತ್ತರ 750 ಎಂಎಂ
      • ಟೆರ್ರಾ ಎಲೆಕ್ಟ್ರಿಕ್ ಸ್ಕೂಟರ್ ಎ 4000ಐ

        ಟೆರ್ರಾ ಮೋಟಾರ್ಸ್ ಇನ್ನಷ್ಟೇ ಭಾರತಕ್ಕೆ ಅಧಿಕೃತ ಪ್ರವೇಶ ಪಡೆಯಬೇಕಾಗಿದೆ. ಇದಕ್ಕೆ ಮುನ್ನಡಿಯೆಂಬಂತೆ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ತ್ರಿಚಕ್ರ ವಾಹನಗಳನ್ನು ಪ್ರದರ್ಶಿಸಿದೆ.

Most Read Articles

Kannada
English summary
Terra Motors Unveiled A4000i Electric Scooter at 2014 Auto Expo
Story first published: Monday, February 17, 2014, 17:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X