ಎಫ್-ಪೇಸ್ ಫೇಸ್‌ಲಿಫ್ಟ್ ಆವೃತ್ತಿಯ ಬುಕ್ಕಿಂಗ್ ಆರಂಭಿಸಿದ ಜಾಗ್ವಾರ್ | ವಿವರಣೆ ಹಾಗೂ ಇನ್ನಿತರ ವಿವರಗಳು

By: Drivespark Video Team
Published : April 10, 2021, 05:40

ಜಾಗ್ವಾರ್ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ತನ್ನ ಎಫ್-ಪೇಸ್ ಫೇಸ್‌ಲಿಫ್ಟ್ ಆವೃತ್ತಿಯ ಬುಕ್ಕಿಂಗ್'ಗಳನ್ನು ಆರಂಭಿಸಿದೆ. nಈ ಕಾರಿನ ವಿತರಣೆಯನ್ನು ಮೇ ತಿಂಗಳಿನಲ್ಲಿ ಆರಂಭಿಸುವ ನಿರೀಕ್ಷೆಗಳಿವೆ. nnಜಾಗ್ವಾರ್ ಎಫ್-ಪೇಸ್ ಕಾರ್ ಅನ್ನು ಮೊದಲ ಬಾರಿಗೆ 2015ರಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕಾರು 2017ರ ವರ್ಲ್ಡ್ ಕಾರ್ ಹಾಗೂ ವರ್ಲ್ಡ್ ಕಾರ್ ಆಫ್ ದಿ ಇಯರ್ ಪ್ರಶಸ್ತಿಗಳನ್ನು ಗೆದ್ದಿದೆ. nn2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಎಫ್-ಪೇಸ್ ಕಾರ್ ಅನ್ನು ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಾಯಿತು. nnಎಫ್-ಪೇಸ್ ಫೇಸ್ ಲಿಫ್ಟ್ ಕಾರಿನ ವಿನ್ಯಾಸದಲ್ಲಿ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಮಾಡಲಾಗಿದೆ. ಇವುಗಳಲ್ಲಿ ಸ್ಲೀಕ್ ಆದ ಹೆಡ್‌ಲ್ಯಾಂಪ್‌, ದೊಡ್ಡದಾದ ಗ್ರಿಲ್, ಉದ್ದವಾದ ಬಾನೆಟ್'ಗಳು ಸೇರಿವೆ. n nಜಾಗ್ವಾರ್ ಎಫ್-ಪೇಸ್ ಫೇಸ್‌ಲಿಫ್ಟ್ ಆವೃತ್ತಿಯ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X