ಆಂಪಿಯರ್ ನೆಕ್ಸಸ್ ಫ್ಯಾಮಿಲಿ ಇವಿ ಸ್ಕೂಟರ್ ಬಿಡುಗಡೆ
ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ತನ್ನ ಮೊದಲ ಹೈ-ಪರ್ಫಾಮೆನ್ಸ್ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಆದ ಆಂಪಿಯರ್ ನೆಕ್ಸಸ್ ಅನ್ನು ಬಿಡುಗಡೆ ಮಾಡಿದೆ.
ಆಂಪಿಯರ್ ನೆಕ್ಸಸ್ ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕ ಬೆಲೆಯನ್ನು 1,09,900 ಲಕ್ಷ ರೂ.ಗೆ ನಿಗಧಿಪಡಿಸಿದೆ.
ಝನ್ಸ್ಕರ್ ಆಕ್ವಾ, ಇಂಡಿಯನ್ ರೆಡ್, ಲೂನಾರ್ ವೈಟ್ ಮತ್ತು ಸ್ಟೀಲ್ ಗ್ರೇ ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.
ಆಂಪಿಯರ್ ನೆಕ್ಸಸ್ IP67-ಸರ್ಟಿಫೈಡ್, 3kWh LFP ಕೆಮಿಸ್ಟ್ರಿ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ.
ಸಿಂಗಲ್ ಚಾರ್ಜ್‌ನಲ್ಲಿ 136 ಕಿಲೋಮೀಟರ್‌ಗಳವರೆಗೆ ರೇಂಜ್ ನೀಡುತ್ತದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಇಕೋ, ಸಿಟಿ ಮತ್ತು ಪವರ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ.
ನೆಕ್ಸಸ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಟ್ವಿನ್ ಶಾಕ್‌ಗಳ ಜೊತೆಗೆ ಸ್ವಿಂಗರ್ಮ್‌ನೊಂದಿಗೆ
ಇದರ ಮುಂಭಾಗದಲ್ಲಿ, ನೆಕ್ಸಸ್ ಡೈಮಂಡ್-ಕಟ್ LED ಹೆಡ್‌ಲೈಟ್, ಹಿಂಭಾಗದಲ್ಲಿ ಆಯತಾಕಾರದ ಟೈಲ್‌ಲೈಟ್ ಜೊತೆ ಅದರ ವಿಶಿಷ್ಟ ವಿನ್ಯಾಸದೊಂದಿಗೆ ಬಂದಿದೆ.