ಬಜಾಜ್ ಪಲ್ಸರ್ N250 ಬಿಡುಗಡೆ.. ಬೆಲೆ 1.5 ಲಕ್ಷ ರೂ.
ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ಬಜಾಜ್ ಪಲ್ಸರ್ N250 ಬೈಕ್ ಕೊನೆಗೂ ಅಪ್‌ಡೇಟ್ ಹೊಂದಿ ಲಾಂಚ್ ಆಗಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ N250 ಜೊತೆಗೆ ಬಜಾಜ್ ಪಲ್ಸರ್ ಎನ್160 ಸಹ ಇದೇ ಡಿಸೈನ್ ಮತ್ತು ನೋಟವನ್ನು ಹೊಂದಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ತನ್ನ ಹೊಸ ಅಪ್‌ಡೇಟೆಡ್ N250 ಅನ್ನು 1.51 ಲಕ್ಷ ರೂ ಎಕ್ಸ್ ಶೋ ರೂಮ್ ಬೆಲೆಗೆ ಬಿಡುಗಡೆ ಮಾಡಿದೆ.
ಈ ಬೈಕ್‌ನಲ್ಲಿ, ಟ್ರಾಕ್ಷನ್ ಕಂಟ್ರೋಲ್, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಎಬಿಎಸ್ ಮೋಡ್‌ಗಳು ಸಿಗುತ್ತಿದೆ.
ಈ ಬೈಕ್‌ನಲ್ಲಿ ರೈನ್, ರೋಡ್ ಮತ್ತು ಆಫ್ ರೋಡ್ ಎಂಬ ಮೂರು ಮೋಡ್‌ನಲ್ಲಿ ಎಬಿಎಸ್ ಲಭ್ಯವಿದೆ.
ಸವಾರ, ABS ಮೋಡ್ ಬದಲಾಯಿಸಿದಂತೆ ಅದಕ್ಕೆ ತಕ್ಕದಾದ ರೀತಿಯಲ್ಲಿ ಎಬಿಎಸ್ ತನ್ನ ಲಕ್ಷಣಗಳನ್ನು ಬದಲಾಯಿಸುತ್ತದೆ.
ಬೈಕ್‌ನ ಮುಂಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಹಿಂದೆ ಇದ್ದಂತಹ N250 ಯ ಅದೇ ಡಿಸೈನ್ ಇದ್ದು, ಹೆಚ್ಚುವರಿ ಫೀಚರ್ಸ್ ಸೇರಿಸಿದ್ದಾರೆ.
ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕರೆ ಮತ್ತು ಎಸ್‌ಎಂಎಸ್‌ಗಳಿಗಾಗಿ ಬ್ಲೂಟೂತ್ ಕನೆಕ್ಟಿವಿಟಗಳು, ಮತ್ತು ಟರ್ನ್ ಬೈ ಟರ್ನ್ ನಾವಿಗೇಷನ್ ನೀಡಲಾಗಿದೆ.
ಅಪ್‌ಡೇಟೆಡ್ 27mm ನ ಇನ್ವರ್ಟೆಡ್ ಫೋರ್ಕ್‌ಗಳನ್ನು ಹೊಂದಿದೆ. ಕಳೆದ ಬಾರಿಯ ಬಜಾಜ್ ಪಲ್ಸರ್ N250 ಮಾದರಿಯಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ನಾವು ಕಾಣಬಹುದಾಗಿತ್ತು.