ಪಲ್ಸರ್ NS400Z ಖರೀದಿಸಲು ನೀವೇನು ಮಾಡಬೇಕು ಗೊತ್ತಾ?
ಹೊಸ ಬಜಾಜ್ ಪಲ್ಸರ್ NS400Z ಬೈಕನ್ನು ಖರೀದಿಸಲು ಟೋಕನ್ ಮೊತ್ತ ರೂ.5 ಸಾವಿರ ಪಾವತಿಸಿ ಬುಕ್ ಮಾಡಬಹುದು
ಹೊಸ ಬಜಾಜ್ ಪಲ್ಸರ್ NS400Z ಬೆಲೆಯು ರೂ. 1.85 ಲಕ್ಷ(ಎಕ್ಸ್ ಶೋರೂಂ) ಆಗಿದೆ.
ಬೆಂಗಳೂರಿನಲ್ಲಿ ಬಜಾಜ್ ಪಲ್ಸರ್ NS400Z ಆನ್ ರೋಡ್ ಬೆಲೆ ಸುಮಾರು 2,05,072 ರೂ. ಗಳಷ್ಟಾಗುತ್ತದೆ.
9.8% ಬಡ್ಡಿ ದರದಲ್ಲಿ 5 ವರ್ಷಗಳ ಕಾಲಾವಧಿಗೆ ಲೋನ್ ಮಾಡಿದರೆ, ಪ್ರತೀ ತಿಂಗಳು ಸುಮಾರು 3,483 ರೂಗಳನ್ನು ಇಎಂಐ ರೂಪದಲ್ಲಿ ಬ್ಯಾಂಕಿಗೆ ಪಾವತಿಸಬೇಕಾಗುತ್ತದೆ.
ಈ ಬೈಕ್ ಲೋನ್ ನಲ್ಲಿ ಖರೀದಿಸುವಾಗ 40000 ರೂ. ಡೌನ್ ಪೇಮೆಂಟ್ ಹೊಂದಿದೆ.
ಈ ಬಜಾಜ್ ಪಲ್ಸರ್ NS400Z ಬೈಕ್ 373.27cc ಎಂಜಿನ್ ಅನ್ನು ಹೊಂದಿದೆ.
ಈ ಎಂಜಿನ್ 8800rpm ನಲ್ಲಿ 39.4bhp ಮತ್ತು 6500rpm ನಲ್ಲಿ 35Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.