Arun Teja P       Apr 24, 2024

ಬೆಂಗಳೂರು ಮೂಲದ ಹೊಸ ಅಲ್ಟ್ರಾವೈಲೆಟ್ ಇವಿ ಬೈಕ್ ಬಿಡುಗಡೆ 

ಬೆಂಗಳೂರು ಮೂಲದ ಜನಪ್ರಿಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕರಾದ ಅಲ್ಟ್ರಾವೈಲೆಟ್, ಭಾರತದಲ್ಲಿ ತನ್ನ ಹೊಸ F77 ಮ್ಯಾಕ್ 2 ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ.

ಈ ಹೊಸ ಅಲ್ಟ್ರಾವೈಲೆಟ್ F77 ಮ್ಯಾಕ್ 2 (Ultraviolette F77 Mach 2) ಎಲೆಕ್ಟ್ರಿಕ್ ಬೈಕಿನ ಪರಿಚಯಾತ್ಮಕ ಬೆಲೆಯ ಎಕ್ಸ್ ಶೋರೂಂ ಪ್ರಕಾರ ರೂ.2,99,999 ಆಗಿದೆ.

ಅಲ್ಟ್ರಾವೈಲೆಟ್ F77 ಮ್ಯಾಕ್ 2 ಬೈಕಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಈ ಎಲೆಕ್ಟ್ರಿಕ್ ಬೈಕನ್ನು ಖರೀದಿಗಾಗಿ ಗ್ರಾಹಕರು ರೂ.5,000 ಪಾವತಿಸಿ ಬುಕ್ ಮಾಡಿಕೊಳ್ಳಬಹುದು.

ಮೊದಲ 1,000 ಗ್ರಾಹಕರು ಪರಿಚಯಾತ್ಮಕ ಬೆಲೆಗೆ ಬುಕ್ ಮಾಡಲು ಸಾಧ್ಯವಾಗುತ್ತದೆ. ಹೊಸ ಅಲ್ಟ್ರಾವೈಲೆಟ್ F77 ಮ್ಯಾಕ್ 2 ಇವಿ ಸ್ಟ್ಯಾಂಡರ್ಡ್ ಮತ್ತು ರೆಕಾನ್ ರೂಪಾಂತರಗಳಲ್ಲಿ ಲಭ್ಯವಿದೆ. 

ಹೊಸ ಅಲ್ಟ್ರಾವೈಲೆಟ್ ಎಲೆಕ್ಟ್ರಿಕ್ ಬೈಕ್ ಗಮನಾರ್ಹ ಕಾರ್ಯಕ್ಷಮತೆ, ಆಕರ್ಷಕ ವೈಶಿಷ್ಟ್ಯಗಳು ಮತ್ತು ಅತ್ಯುತ್ತಮ ಹಾರ್ಡ್‌ವೇರ್ ಅನ್ನು ಒಳಗೊಂಡಿದೆ.

ಲೈಟಿಂಗ್ ಬ್ಲೂ, ಅಸ್ಟೈಡ್ ಗ್ರೇ, ಟರ್ಬೊ ರೆಡ್, ಆಫ್ಟರ್‌ಬರ್ನರ್ ಯೆಲ್ಲೋ, ಸ್ಟೆಲ್ತ್ ಗ್ರೇ, ಕಾಸ್ಮಿಕ್ ಬ್ಲ್ಯಾಕ್, ಪ್ಲಾಸ್ಮಾ ರೆಡ್, ಸೂಪರ್‌ಸಾನಿಕ್ ಸಿಲ್ವರ್ ಮತ್ತು ಸ್ಟೆಲ್ಲರ್ ಬಣ್ಣಗಳಲ್ಲಿ ಲಭ್ಯವಿದೆ. 

ಅಲ್ಟ್ರಾವೈಲೆಟ್ F77 ಮಾದರಿಗೆ ಹೋಲಿಸಿದರೆ ಹೊಸ ಮ್ಯಾಕ್ 2 ಬೈಕಿನಲ್ಲಿ ಚಾರ್ಜಿಂಗ್ ಪೋರ್ಟ್ ಲಿಡ್ ಈಗ ಅಲ್ಯೂಮಿನಿಯಂನಿಂದ ತಯಾರಿಸಲಾಗಿದೆ.

ಅಲ್ಟ್ರಾವೈಲೆಟ್ F77 ಮ್ಯಾಕ್ 2 ಎಲೆಕ್ಟ್ರಿಕ್ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರದಲ್ಲಿ 27kW ಮೋಟಾರ್ ಹೊಂದಿದ್ದರೆ, ರೆಕಾನ್ ರೂಪಾಂತರದಲ್ಲಿ 30kW ಮೋಟಾರ್ ಅನ್ನು ನೀಡಿದೆ.

ಈ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರ 7.1kWh ಬ್ಯಾಟರಿ ಪ್ಯಾಕ್‌ನೊಂದಿಗೆ 211 ಕಿ.ಮೀ ರೇಂಜ್ ಹಾಗೂ ರೆಕಾನ್ ರೂಪಾಂತರ 10.3kWh ಬ್ಯಾಟರಿ ಪ್ಯಾಕ್‌ನೊಂದಿಗೆ 323 ಕಿ.ಮೀ ರೆಂಜ್ ನೀಡುತ್ತದೆ.