ಬಹುನಿರೀಕ್ಷಿತ ಹೀರೋ ಮ್ಯಾವ್ರಿಕ್ 440 ಬೈಕ್ ವಿತರಣೆ ಪ್ರಾರಂಭ
ಹೀರೋ ತನ್ನ ಬಹುನಿರೀಕ್ಷಿತ ಹೀರೋ ಮಾವ್ರಿಕ್ 440 ಬೈಕ್ ಅನ್ನು ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಗೊಳಿಸಿದ್ದು, ಇಂದಿನಿಂದ ಡೆಲಿವರಿ ಪ್ರಾರಂಭಿಸಿದೆ.
ಈ ಹೊಸ ಬೈಕ್' ಹೀರೋ ಮೋಟೋಕಾರ್ಪ್ ಹಾಗೂ ಹಾರ್ಲೆ ಡೇವಿಡ್ಸನ್ ಎರಡೂ ದೈತ ಕಂಪನಿಗಳ ಪಾಲುದಾರಿಕೆಯಿಂದ ಹೊರಬಂದ ಎರಡನೇ ಮಾದರಿ ಇದಾಗಿದೆ.
ಹಾರ್ಲೆ ಡೇವಿಡ್ಸನ್ X440 ನೊಂದಿಗೆ ಇದನ್ನೂ ಸಹ ಅಭಿವೃದ್ಧಿಪಡಿಸಲಾಗಿರುವುದರಿಂದ ಎರಡೂ ಮೋಟಾರ್‌ಸೈಕಲ್‌ಗಳು ಕೆಲವು ಭಾಗಗಳನ್ನು ಹಂಚಿಕೊಳ್ಳುತ್ತವೆ.
ಈ ಹೊಸ ಹೀರೋ ಮಾವ್ರಿಕ್ 440 ಬೈಕನ ಬೆಲೆಯು ರೂ.1.99 (ಎಕ್ಸ್ ಶೋರೂಂ) ಲಕ್ಷವಿದೆ. ಇದು ಬೇಸ್, ಮಿಡ್ ಮತ್ತು ಟಾಪ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.
ಹೀರೋ ಮಾವ್ರಿಕ್ 440 ಬೈಕಿನಲ್ಲಿ ಹಾರ್ಲೆ ಡೇವಿಡ್ಸನ್ X440 ನಂತೆಯೇ ಅದೇ 440 cc ಸಿಂಗಲ್-ಸಿಲಿಂಡರ್ ಏರ್/ಆಯಿಲ್-ಕೂಲ್ಡ್ ಎಂಜಿನ್ ಅನ್ನು ನೀಡಲಾಗಿದೆ.
ಈ ಎಂಜಿನ್ 27 bhp ಪವರ್ ಮತ್ತು 36 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. X440 ನ ಟಾರ್ಕ್‌ಗಿಂತ 2 Nm ಕಡಿಮೆ ಇದೆ.
ಹೀರೋ ಮಾವ್ರಿಕ್ ಇನ್‌ಸ್ಟ್ರುಮೆಂಟ್ ಕನ್ಸೋಲ್‌ಗಾಗಿ ಎಲ್‌ಸಿಡಿ ಡಿಸ್ ಪ್ಲೇಯೊಂದಿಗೆ ಬರುತ್ತದೆ. ಇದು ಸಾಕಷ್ಟು ಮಾಹಿತಿಯನ್ನು ಪ್ರದರ್ಶಿಸುತ್ತದೆ.
ಇನ್ನು ಈ ಡಿಸ್ ಪ್ಲೇಯು ಬ್ಲೂಟೂತ್ ಕನೆಕ್ಟ್ ನೊಂದಿಗೆ ಕರೆಗಳು ಮತ್ತು SMS ಅಲರ್ಟ್, ಮ್ಯೂಸಿಕ್ ಪ್ಲೇಬ್ಯಾಕ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಅನ್ನು ಹೊಂದಿದೆ.