Sanjay Ambekar       Apr 22, 2024

ಹೋಂಡಾ ಎಲಿವೇಟ್ ಕಾರು ಖರೀದಿಸಬೇಕೇ?

ಆನ್-ರೋಡ್ ಬೆಲೆ

ಬೆಂಗಳೂರಿನಲ್ಲಿ ಈ ಕಾರಿನ ವಿವಿಧ ರೂಪಾಂತರಗಳು ರೂ.14.53 ಲಕ್ಷದಿಂದ ರೂ.20.53 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿವೆ. 

ಇಎಂಐ ಆಯ್ಕೆ

ಹೋಂಡಾ ಎಲಿವೇಟ್ ಎಸ್‌ಯುವಿಯನ್ನು ರೂ.1.45 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಖರೀದಿಸಿದರೆ ಶೇಕಡ 9.8% ಬಡ್ಡಿ ದರದಲ್ಲಿ 5 ವರ್ಷದ ಅವಧಿಗೆ ಮಾಸಿಕ ರೂ.27,666 ಇಎಂಐ ಕಟ್ಟಬೇಕು.

ಆಸನ ಆಯ್ಕೆ

ಈ ಕಾರು 5 ಆಸನ ಆಯ್ಕೆಯಲ್ಲಿ ಲಭ್ಯವಿದೆ. 

ಬಣ್ಣಗಳು

ಹೋಂಡಾ ಎಲಿವೇಟ್ ಎಸ್‌ಯುವಿ ಫೀನಿಕ್ಸ್ ಆರೆಂಜ್ ಪರ್ಲ್, ಅಬ್ಸಿಡಿಯನ್ ಬ್ಲೂ ಪರ್ಲ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೆ ದೊರೆಯುತ್ತದೆ. 

ಎಂಜಿನ್

ಈ ಕಾರು 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿನ್ನು ಪಡೆದಿದೆ.

ಗೇರ್ ಬಾಕ್ಸ್

ಹೋಂಡಾ ಎಲಿವೇಟ್ 6-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಆಟೋಮೆಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿದೆ. 

ಮೈಲೇಜ್

ಈ ಕಾರು 15.31 ರಿಂದ 16.92 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.

ವೈಶಿಷ್ಟ್ಯಗಳು

ಹೋಂಡಾ ಎಲಿವೇಟ್ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಕೊಂಡಿದೆ.

ಸುರಕ್ಷತಾ ವೈಶಿಷ್ಟ್ಯಗಳು

ಇದು 6 ಏರ್‌ಬ್ಯಾಗ್‌, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ.