Sanjay Ambekar       Apr 15, 2024

3 ತಿಂಗಳಲ್ಲಿಯೇ ದಾಖಲೆ ನಿರ್ಮಿಸಿದ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್

ಏನದು?

ಈ ಕಾರು ಬಿಡುಗಡೆಯಾಗಿ 3 ತಿಂಗಳು ಕಳೆಯುವ ಮೊದಲೇ 1 ಲಕ್ಷಕ್ಕೂ ಅಧಿಕ ಬುಕ್ಕಿಂಗ್ ಪಡೆದುಕೊಂಡಿದೆ.

ಬೆಲೆ

ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿ, ರೂ.11 ಲಕ್ಷದಿಂದ ರೂ.20.15 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ.

ರೂಪಾಂತರಗಳು

ಈ ಕಾರು ಇ, ಇಎಕ್ಸ್, ಎಸ್, ಎಸ್(ಒ), ಎಸ್ಎಕ್ಸ್ ಟೆಕ್ ಸೇರಿದಂತೆ ಹಲವು ರೂಪಾಂತರಗಳ ಆಯ್ಕೆಯಲ್ಲಿ ದೊರೆಯುತ್ತದೆ. 

ಬಣ್ಣಗಳು

ಹ್ಯುಂಡೈ ಕ್ರೆಟಾ ಎಸ್‌ಯುವಿ ಅಟ್ಲಾಸ್ ವೈಟ್, ಅಬಿಸ್ ಬ್ಲಾಕ್, ಟೈಟಾನ್ ಗ್ರೇ ಒಳಗೊಂಡಂತೆ ವಿವಿಧ ಬಣ್ಣಗಳೊಂದಿಗೆ ಲಭ್ಯವಿದೆ. 

ಎಂಜಿನ್

ಈ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. 

ಗೇರ್ ಬಾಕ್ಸ್

ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿ 6-ಸ್ವೀಡ್ ಮ್ಯಾನುವಲ್, 6-ಸ್ವೀಡ್ ಆಟೋಮೆಟಿಕ್, ಸಿವಿಟಿ, 7-ಸ್ವೀಡ್ ಡಿಸಿಟಿ ಗೇರ್ ಬಾಕ್ಸ್ ಅನ್ನು ಹೊಂದಿದೆ.

ಮೈಲೇಜ್

ಈ ಕಾರು 17.4 ರಿಂದ 21.8 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.

ವೈಶಿಷ್ಟ್ಯಗಳು

ಹ್ಯುಂಡೈ ಕ್ರೆಟಾ ಎಸ್‌ಯುವಿ 10.25-ಇಂಚಿನ ಡುಯಲ್ ಡಿಸ್ಪ್ಲೇ (ಇನ್ಫೋಟೈನ್‌ಮೆಂಟ್ ಸಿಸ್ಟಮ್‌ & ಇನ್ಸ್ಟ್ರುಮೆಂಟ್ ಕ್ಲಸ್ಟರ್) ಡುಯಲ್ ಝೋನ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 

ಸುರಕ್ಷತಾ ವೈಶಿಷ್ಟ್ಯಗಳು

ಈ ಕಾರು ಸುರಕ್ಷತೆಗಾಗಿ 6 ಏರ್‌ಬ್ಯಾಗ್‌, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಅನ್ನು ಪಡೆದಿದೆ.