Arun Teja P       May 07, 2024

ಭಾರತದಲ್ಲಿ ಇನ್ನೋವಾ ಕ್ರಿಸ್ಟಾ ಹೊಸ ರೂಪಾಂತರ ಬಿಡುಗಡೆ 

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಜನಪ್ರಿಯ ಇನ್ನೋವಾ ಕ್ರಿಸ್ಟಾ ಕಾರಿನ GX+ ಎಂಬ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ.

ಹೊಸ ಟೊಯೊಟಾ ಇನ್ನೋವಾ ಕ್ರಿಸ್ಟಾ GX+ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.21.39 ಲಕ್ಷವಾಗಿದೆ.

ಹೊಸ ಟೊಯೊಟಾ ಇನ್ನೋವಾ ಕ್ರಿಸ್ಟಾವನ್ನು ಪ್ರಸ್ತುತ GX ಮತ್ತು VX ರೂಪಾಂತರಗಳ ನಡುವಿನ ಸ್ಥಾನದಲ್ಲಿ ಇರಿಸಲಾಗಿದೆ.

ಹೊಸ ರೂಪಾಂತರವು ಡ್ರೈವಿಂಗ್ ಮತ್ತು ಪ್ರಯಾಣಿಕರ ಅನುಭವವನ್ನು ಗಣನೀಯವಾಗಿ ಹೆಚ್ಚಿಸುವ ನವೀಕರಣಗಳ ಸೂಟ್ ಅನ್ನು ಹೊಂದಿದೆ.

ಹಿಂಬದಿಯ ಕ್ಯಾಮರಾ, ಡ್ಯಾಶ್ ಕ್ಯಾಮ್, ಆಟೋ-ಫೋಲ್ಡ್ ಮಿರರ್‌ಗಳು, ಅಲಾಯ್ ವೀಲ್‌ಗಳು, ವುಡ್ ಪ್ಯಾನಲ್ ಇನ್‌ಸರ್ಟ್, ಪ್ರೀಮಿಯಂ ಸೀಟ್‌ಗಳನ್ನು ಪಡೆದಿದೆ.

ಟೊಯೊಟಾ GX+ ಮಾದರಿಯಲ್ಲಿ ಒಟ್ಟು 14 ಹೊಸ ವೈಶಿಷ್ಟ್ಯಗಳನ್ನು ಸಂಯೋಜಿಸಿದೆ, ಇದು ಲೋ ರೂಪಾಂತರ ಆದ GX ಮಾದರಿಯಿಂದ ಪ್ರತ್ಯೇಕಿಸುತ್ತದೆ.

ಏಳು ಮತ್ತು ಎಂಟು ಸೀಟುಗಳ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದ್ದು, ಇದರ ಬೆಲೆಗಳು ಕ್ರಮವಾಗಿ ಲಕ್ಷ ರೂ.21.39 ಮತ್ತು ರೂ. 21.44 ಲಕ್ಷವಾಗಿದೆ.

ಇದು ಲೋ ರೂಪಾಂತರ GX ಮಾದರಿಗಿಂತ ರೂ.1.40 - 1.45 ಲಕ್ಷವರೆಗೆ ದುಬಾರಿಯಾಗಿದೆ.