Tap to Read ➤

ಕಾರೆನ್ಸ್ ಎಂಯುವಿ ಮಾಲೀಕರಿಗೆ ಹೊಸ ಸರ್ವಿಸ್ ಪ್ಯಾಕೇಜ್ ಘೋಷಿಸಿದ ಕಿಯಾ ಇಂಡಿಯಾ

Praveen Sannamani
ಹೊಸ ಕಾರೆನ್ಸ್ ಎಂಯುವಿ ಕಾರು ಮಾಲೀಕರಿಗೆ ಮೈ ಕನ್ವೀನಿಯನ್ಸ್ ಪ್ಯಾಕೇಜ್‌ ಪರಿಚಯಿಸಿದ ಕಿಯಾ ಕಂಪನಿ
ಪ್ರೀಮಿಯಂ ಮತ್ತು ಲಗ್ಷುರಿ ಎನ್ನುವ ಹಂತದ ಮೈ ಕನ್ವೀನಿಯನ್ಸ್ ಪ್ಯಾಕೇಜ್‌ ಲಭ್ಯ
ಮೈ ಕನ್ವೀನಿಯನ್ಸ್ ಪ್ಯಾಕೇಜ್‌‌ ಮೂಲಕ ನಾಲ್ಕರಿಂದ ಐದು ವರ್ಷಗಳ ತನಕ ಕಾರಿಗೆ ಅತ್ಯುತ್ತಮ ಕವರೇಜ್
ಹೊಸ ಸರ್ವಿಸ್ ಪ್ಯಾಕೇಜ್ ದೇಶದಾದ್ಯಂತ ಲಭ್ಯವಿರುವ ಕಿಯಾ ಸರ್ವಿಸ್ ಸೆಂಟರ್‌ಗಳಲ್ಲಿ ಲಭ್ಯ
ಕಾರೆನ್ಸ್ ಮಾಲೀಕರಿಗೆ ಹೊಸ ಸರ್ವಿಸ್ ಪ್ಯಾಕೇಜ್ ಅಡಿ ದೇಶಾದ್ಯಂತವಿರುವ ಕಿಯಾ ಸರ್ವಿಸ್ ಸೆಂಟರ್‌ಗಳಲ್ಲಿ ಸೇವೆ ಲಭ್ಯ
ಹೊಸ ಸರ್ವಿಸ್ ಪ್ಯಾಕೇಜ್ ಜೊತೆ ಕಾರಿಗೆ ಗರಿಷ್ಠ ಭದ್ರತೆ ನೀಡುವ ಕಾರ್ ಶೀಲ್ಡ್ ಪ್ಯಾಕೇಜ್ ಸಹ ಘೋಷಣೆ
ಅಪಘಾತದ ಸಂದರ್ಭದಲ್ಲಿ ಗ್ರಾಹಕರಿಗೆ ರೂ. 1 ಲಕ್ಷದವರೆಗೆ ವಿಮೆ ಕ್ಲೈಮ್ ಮಾಡಲು ಸಹಕರಿಸುತ್ತದೆ
ಸದ್ಯ 50 ಸಾವಿರ ಬುಕಿಂಗ್ ಮೂಲಕ ಎಂಪಿವಿ ಕಾರು ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಕಾರೆನ್ಸ್ ಕಾರು
6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 8.99 ಲಕ್ಷದಿಂದ ರೂ. 16.99 ಲಕ್ಷ ಬೆಲೆ ಹೊಂದಿರುವ ಹೊಸ ಕಾರು
ಹೊಸ ಕಾರಿನಲ್ಲಿ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಜೋಡಣೆ