Sanjay Ambekar       May 15, 2024

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಬುಕ್ಕಿಂಗ್ ಆರಂಭ

ಯಾವಾಗಿನಿಂದ?

ನೂತನ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಕಾರಿನ ಬುಕ್ಕಿಂಗ್ ಇಂದಿನಿಂದ (ಮೇ.15) ಶುರುವಾಗಿದೆ. 

ಬುಕ್ಕಿಂಗ್ ಮೊತ್ತ

ಈ ಕಾರನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ ಅಥವಾ ಸಮೀಪದ ಡೀಲರ್‌ಶಿಪ್‌ಗೆ ಭೇಟಿ ನೀಡಿ ರೂ.21,000 ಪಾವತಿಸಿ ಕಾಯ್ದಿರಿಸಬಹುದು. 

ವಿತರಣೆ ಯಾವಾಗ?

ನೂತನ ಎಕ್ಸ್‌ಯುವಿ 3ಎಕ್ಸ್ಒ ಎಸ್‌ಯುವಿ ವಿತರಣೆಯು ಮೇ.26ರಿಂದ ಆರಂಭವಾಗಲಿದೆ. 

ಬೆಲೆ

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ರೂ.7.49 ಲಕ್ಷದಿಂದ ರೂ.15.49 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. 

ಎಂಜಿನ್

ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌ನೊಂದಿಗೆ ದೊರೆಯುತ್ತದೆ.

ಗೇರ್ ಬಾಕ್ಸ್

ರೂಪಾಂತರಗಳ ಅನ್ವಯ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮೆಟಿಕ್ ಗೇರ್‌ ಬಾಕ್ಸ್‌ನ್ನು ಪಡೆದಿದೆ.

ವೈಶಿಷ್ಟ್ಯಗಳು

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಎಸ್‌ಯುವಿ ಡುಯಲ್ 10.25-ಇಂಚಿನ ಡಿಸ್ಪ್ಲೇಗಳು, ಕ್ರೂಸ್ ಕಂಟ್ರೋಲ್, ಡುಯಲ್ ಜೋನ್ ಎಸಿ ಸೇರಿದಂತೆ  ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. 

ಸುರಕ್ಷತಾ ವೈಶಿಷ್ಟ್ಯಗಳು

ಈ ಕಾರು 6-ಏರ್‌ಬ್ಯಾಗ್‌, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಒಳಗೊಂಡಿದೆ.