ಹೊಸ 2024ರ ಜೀಪ್ ರಾಂಗ್ಲರ್ ಟಾಪ್ ವಿಶೇಷತೆಗಳು!
ಭಾರತೀಯ ಮಾರುಕಟ್ಟೆಗೆ ಪ್ರಸಿದ್ಧ ಕಾರು ನಿರ್ಮಾಣ ಕಂಪನಿಯಾದ ಜೀಪ್, ತನ್ನ 2024 ರಾಂಗ್ಲರ್ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಿದೆ.
ಜೀಪ್ ರಾಂಗ್ಲರ್‌ನಲ್ಲಿ ಅಪ್‌ಡೇಟೆಡ್ ಗ್ರಿಲ್, 17 ಮತ್ತು 18 ಇಂಚಿನ ಅಯ್ಕೆಯ ಅಲಾಯ್ ವ್ಹೀಲ್‌ಗಳು, ಗೊರಿಲ್ಲಾ ಗ್ಲಾಸ್ ವಿಂಡ್ ಶೀಲ್ಡ್ ಹೊಸದಾಗಿ ಲಭ್ಯವಿದೆ.
ಹೊಸ 12.3 ಇಂಚ್‌ನ ಇನ್ಪೋಟೇನ್‌ಮೆಂಟ್ ಡಿಸ್ಪ್ಲೇ, ಇತ್ತೀಚಿನ ಅನ್‌ಕನೆಕ್ಟ್ 5 ಆಪರೆಟಿಂಗ್ ಸಿಸ್ಟಂ, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಇದೆ.
ರಾಂಗ್ಲರ್‌ನಲ್ಲಿ 2.0-ಲೀಟರ್ ಟರ್ಬೋ ಪೆಟ್ರೋಲ್ ಫಿಯಟ್ ಎಂಜಿನ್ ನೀಡಲಾಗಿದೆ. ರಾಂಗ್ಲರ್‌ಗೆ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಗೇರ್ ಬಾಕ್ಸ್ ಆಯ್ಕೆಯಾಗಿ ಲಭ್ಯವಿದೆ.
ಈ ಎಂಜಿನ್ ಸಹಾಯದಿಂದ ಜೀಪ್ ರಾಂಗ್ಲರ್ ಸುಮಾರು 270bhp ಪವರ್ ಮತ್ತು 400Nm ಟಾರ್ಕ್ ಉತ್ಪಾದಿಸುತ್ತದೆ. ಇದು ಫೋರ್ ವ್ಹೀಲ್ ಡ್ರೈವ್ ಬೆಂಬಲಿತವಾಗಿದೆ.
ಅತ್ಯಾಧುನಿಕ ಡ್ರೈವರ್ ಅಸಿಸ್ಟೆಂಟ್ ಸಿಸ್ಟಂ/ಅಡಾಸ್ ಅನ್ನು ಅಳವಡಿಸಲಾಗಿದೆ. 6-ಏರ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ನೀಡಲಾಗಿದೆ.
ಹಿಲ್ ಡಿಸೆಂಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ರೋಲ್ ಬಿಗಿಟೇಷನ್, ಆಟೋ ಹೆಡ್‌ಲ್ಯಾಂಪ್, ಟಿಎಂಎಸ್, ರೇರ್ ಪಾರ್ಕಿಂಗ್ ಸೆನ್ಸಾರ್ ಜೊತೆಗೆ ಪಾರ್ಕಿಂಗ್ ಕ್ಯಾಮೆರಾಗಳು ಲಭ್ಯವಿದೆ.
ಈ ಕಾರಿನಲ್ಲಿರುವ 2.0-ಲೀಟರ್ ಟರ್ಬೋ ಪೆಟ್ರೋಲ್ ಫಿಯಟ್ ಎಂಜಿನ್ ಕಡಿಮೆ ವೇಗದಲ್ಲೂ ಸಹ ಉತ್ತಮ ಟಾರ್ಕ್ ಅನ್ನು ವಾಹನದ ನಾಲ್ಕೂ ಟೈರ್‌ಗಳಿಗೆ ಸರಬರಾಜು ಮಾಡುತ್ತದೆ.