ಆಕರ್ಷಕ ಬೆಲೆಯಲ್ಲಿ ಹೊಸ ಫೋರ್ಸ್ ಗೂರ್ಖಾ ಎಸ್‍ಯುವಿ ಬಿಡುಗಡೆ
ಫೋರ್ಸ್ ಕಂಪನಿಯು ತನ್ನ ಬಹುನಿರೀಕ್ಷಿತ ಗೂರ್ಖಾ ಎಸ್‍ಯುವಿಯನ್ನು ಎರಡೂ ರೂಪದಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿದೆ.
2024ರ ಫೋರ್ಸ್ ಗೂರ್ಖಾ 3-ಡೋರ್ ಮಾದರಿಯ ಬೆಲೆಯು ರೂ.16.75 ಲಕ್ಷವಾದರೆ, ಹೊಸ 5-ಡೋರ್ ಮಾದರಿಯ ಬೆಲೆಯು ರೂ.18 ಲಕ್ಷವಾಗಿದೆ.
ಗೂರ್ಖಾ ಎಸ್‍ಯುವಿ ರೂ.25,000 ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ತಿಂಗಳ ಕೊನೆಯಲ್ಲಿ ವಿತರಣೆಗಳು ಪ್ರಾರಂಭವಾಗುತ್ತವೆ.
2024ರ ಫೋರ್ಸ್ ಗೂರ್ಖಾ ಎಸ್‍ಯುವಿಯನ್ನು ಮೊದಲ ಬಾರಿಗೆ ಮೂರು ಮತ್ತು ಐದು-ಬಾಗಿಲಿನ ರೂಪಗಳಲ್ಲಿ ನೀಡುತ್ತಿದೆ.
ಫೋರ್ಸ್ ಗೂರ್ಖಾದ ಎರಡೂ ಆವೃತ್ತಿಗಳು ಹೆಚ್ಚು ಪ್ರಬಲವಾದ ಮರ್ಸಿಡಿಸ್ ಮೂಲದ 2.6-ಲೀಟರ್ OM616 ಟರ್ಬೋಡೀಸೆಲ್ ಎಂಜಿನ್ ಅನ್ನು ಪಡೆಯುತ್ತವೆ.
ಈ ಎಂಜಿನ್ 3,200rpm ನಲ್ಲಿ 138bhp ಮತ್ತು 1,400 ಮತ್ತು 2,600rpm ನಡುವೆ 320Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಎಂಜಿನ್ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಫೋರ್ ವ್ಹೀಲ್ ಡ್ರೈವ್ ನೊಂದಿಗೆ ಜೋಡಿಸಲಾಗಿದೆ.
ಇದು Android Auto ಮತ್ತು Apple CarPlay ಅನ್ನು ಸಂಪೂರ್ಟ್ ಮಾಡುತ್ತದೆ. ಹೊಸ ಗೂರ್ಖಾದ ಆಲ್-ಮೆಟಲ್ ಬಾಡಿಯು ಮುಂಭಾಗದ ಕ್ರ್ಯಾಶ್-ಕಂಪ್ಲೈಂಟ್ ಆಗಿದೆ.
ಗೂರ್ಖಾ ತನ್ನ ಸುರಕ್ಷತಾ ಸೂಟ್ ಅನ್ನು ಸಹ ನವೀಕರಿಸಿದ್ದು, ಇದು ಈಗ ಎಬಿಎಸ್ ಮತ್ತು ಇಬಿಡಿ ಜೊತೆಗೆ ಎರಡು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿದೆ.