ಬಿಡುಗಡೆಯಾಗಲಿರುವ ಅತ್ಯಧಿಕ ಮೈಲೇಜ್ ಪ್ರೇರಿತ 2022ರ ನೆಕ್ಸಾನ್ ಇವಿ ವಿಶೇಷತೆಗಳಿವು
ಟಾಟಾ ಹೊಸ ನೆಕ್ಸಾನ್ ಇವಿ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಮೈಲೇಜ್ನೊಂದಿಗೆ ಹೆಚ್ಚುವರಿ ಫೀಚರ್ಸ್ ಪಡೆದುಕೊಳ್ಳಲಿದ್ದು, ಹೊಸ ಕಾರು ಮೇ 11ರಂದು ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ.
2022ರ ನೆಕ್ಸಾನ್ ಇವಿ
• ಪ್ರಸ್ತುತ ಮಾದರಿಗಿಂತಲೂ ಸುಧಾರಿತ ಬ್ಯಾಟರಿ ಪ್ಯಾಕ್ ಜೋಡಣೆ
• ಮೈಲೇಜ್ ಪ್ರಮಾಣದಲ್ಲಿ ಶೇ.30 ರಷ್ಟು ಹೆಚ್ಚಳ ಸಾಧ್ಯತೆ
ಹೊಸ ಮಾದರಿಯಲ್ಲಿನ ನೀರಿಕ್ಷೆಗಳು
• 40kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ
• ಪ್ರತಿ ಚಾರ್ಜ್ಗೆ 400 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಧ್ಯತೆ
ಸುಧಾರಿತ ಪರ್ಫಾಮೆನ್ಸ್
• ಸುಧಾರಣೆಗೊಂಡಿರುವ ಎಲೆಕ್ಟ್ರಿಕ್ ಮೋಟಾರ್ ಕಾರ್ಯಕ್ಷಮತೆ
• ಪ್ರಸ್ತುತ 127 ಬಿಎಚ್ಪಿಯಿಂದ 134 ಬಿಎಚ್ಪಿಗೆ ಹೆಚ್ಚಳ ಸಾಧ್ಯತೆ
ಹೊಸ ಫೀಚರ್ಸ್ ನೀರಿಕ್ಷೆ
• ಮರುವಿನ್ಯಾಸಗೊಳಿಸಲಾದ ಬಂಪರ್ • ಸ್ಟ್ಯಾಂಡರ್ಡ್ ಆಗಿ ಆಲ್ ವ್ಹೀಲ್ ಡಿಸ್ಕ್ ಬ್ರೇಕ್ • ವೆಂಟಿಲೆಟೆಡ್ ಸೀಟುಗಳು • ಉನ್ನತೀಕರಿಸಲಾದ ಜಿಪ್ಟ್ರಾನ್ ತಂತ್ರಜ್ಞಾನ
ಜಿಪ್ಟ್ರಾನ್ ತಂತ್ರಜ್ಞಾನ ವಿಶೇಷತೆಗಳು
• ಹೈ ವೊಲ್ಟೆಜ್ ಸಿಸ್ಟಂ • ದೀರ್ಘಕಾಲಿಕ ಬ್ಯಾಟರಿ ಸಾಮಾರ್ಥ್ಯ • ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಚಾರ್ಜಿಂಗ್ ಸಿಸ್ಟಂ • ಸೂಪಿರಿಯರ್ ಪರ್ಫಾಮೆನ್ಸ್
ಬೆಲೆ(ಎಕ್ಸ್ಶೋರೂಂ ಪ್ರಕಾರ)
• ಪ್ರಸ್ತುತ ಮಾರುಕಟ್ಟೆಯಲ್ಲಿ ರೂ. 14.54 ಲಕ್ಷದಿಂದ ರೂ.17.15 ಲಕ್ಷ ಬೆಲೆ ಹೊಂದಿರುವ ನೆಕ್ಸಾನ್ ಇವಿ
• ಹೊಸ ಮಾದರಿಯೊಂದಿಗೆ ತುಸು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿರುವ 2022ರ ಮಾದರಿ