Yajas Duddiyanda       Apr 17, 2024

ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಹೊಸ ರೂಪಾಂತರದ ಬಿಡುಗಡೆ

ಹೊಸ ರೂಪಾಂತರ

ಟೊಯೊಟಾ ಕಂಪನಿಯು ತನ್ನ ಟೊಯೊಟಾ ಇನ್ನೋವಾ ಹೈಕ್ರಾಸ್ GX (O) ರೂಪಾಂತರವನ್ನು ಬಿಡುಗಡೆಗೊಳಿಸಿದೆ.

ಬೆಲೆ

ಈ ರೂಪಾಂತರವು 7 ಮತ್ತು 8-ಆಸನಗಳ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದ್ದು, ಇವುಗಳ ಬೆಲೆಗಳು ಕ್ರಮವಾಗಿ ರೂ.20.99 ಲಕ್ಷ ಮತ್ತು ರೂ.21.13 ಲಕ್ಷವಾಗಿದೆ.

ಫೀಚರ್ಸ್

ಹೊಸ ಹೈಕ್ರಾಸ್ GX (O) ರೂಪಾಂತರದಲ್ಲಿ 360-ಡಿಗ್ರಿ ಕ್ಯಾಮೆರಾ, ಮುಂಭಾಗದ ಪಾರ್ಕಿಂಗ್ ಸೆನ್ಸರ್, ಹಿಂಭಾಗದ ಡಿಫಾಗರ್ ಮತ್ತು ಎಲ್ಇಡಿ ಫಾಗ್ ಲ್ಯಾಂಪ್‌ಗಳಂತಹ ಫೀಚರ್ಸ್ ಗಳನ್ನು ಸೇರಿಸಿದೆ.

ಬಣ್ಣಗಳು

ಅವಂತ್ ಗಾರ್ಡೆ ಕಂಚಿನ ಮೆಟಾಲಿಕ್, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಪರ್ಲ್ ಕ್ರಿಸ್ಟಲ್ ಶೈನ್, ಬ್ಲ್ಯಾಕ್ಲಿಶ್ ಅಗೆಹಾ ಗ್ಲಾಸ್ ಫ್ಲೇಕ್, ಸಿಲ್ವರ್ ಮೆಟಾಲಿಕ್, ಸೂಪರ್ ವೈಟ್, ಪ್ಲಾಟಿನಂ ವೈಟ್ ಪರ್ಲ್ ಮತ್ತು ಆಟಿಟ್ಯೂಡ್ ಬ್ಲ್ಯಾಕ್ ಮೈಕಾ ಎಂಬ ಬಣ್ಣಗಳ ಆಯ್ಕೆಗಳಲ್ಲಿವೆ

ಎಂಜಿನ್

ಈ ಮಾದರಿಯಲ್ಲಿ 2.0 ಲೀಟರ್ ಪೆಟ್ರೋಲ್ ಎಂಜಿನ್‌ ಅನ್ನು ನೀಡಲಾಗಿದೆ. 

ಪರ್ಫಾಮೆನ್ಸ್

ಈ ಎಂಜಿನ್ 172 bhp ಮತ್ತು 205 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಗೇರ್‌ಬಾಕ್ಸ್‌

ಈ ಎಂಜಿನ್ ಅನ್ನು CVT ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.