ಪೋರ್ಷೆ 718 ಕೆಮನ್ ಜಿಟಿ4 ಆರ್ಎಸ್ ಕಾರು ಭಾರತದಲ್ಲಿ ಬಿಡುಗಡೆ
ಐಷಾರಾಮಿ ಸ್ಪೋರ್ಟ್ ಕಾರು ತಯಾರಕ ಕಂಪನಿ ಪೋರ್ಷೆ ತನ್ನ ಹೊಸ 718 ಕೆಮನ್ ಜಿಟಿ4 ಆರ್ಎಸ್ ಮಾದರಿಯನ್ನು ಭಾರತದಲ್ಲೂ ಬಿಡುಗಡೆಗೊಳಿಸಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ)
• ಒಂದೇ ವೆರಿಯೆಂಟ್ ಹೊಂದಿರುವ ಹೊಸ ಕಾರು
• ರೂ. 2.54 ಕೋಟಿ ಆರಂಭಿಕ ಬೆಲೆ
718 ಕೆಮನ್ ಜಿಟಿ4 ಆರ್ಎಸ್ ವಿಶೇಷತೆಗಳು
• ಸ್ಪೋರ್ಟ್ಸ್ ಕಾರ್ನ ಅತ್ಯಂತ ಹಾರ್ಡ್ಕೋರ್ ಆವೃತ್ತಿ • ಅತಿ ಹೆಚ್ಚು ಏರೋ ಡೈನಾಮಿಕ್ ವಿನ್ಯಾಸ • ತೂಕ ಇಳಿಕೆಗಾಗಿ ವ್ಯಾಪಕವಾದ ಕಾರ್ಬನ್ ಫೈಬರ್ ಬಳಕೆ
ಎಂಜಿನ್ ಆಯ್ಕೆ
• 4.0-ಲೀಟರ್ ನ್ಯಾಚುರಲ್ ಆಸ್ಪೈರಡ್ ಫ್ಲಾಟ್-ಸಿಕ್ಸ್ ಎಂಜಿನ್ • 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ಬಾಕ್ಸ್ • ರಿಯಲ್ ವ್ಹೀಲ್ ಡ್ರೈವ್ ಸಿಸ್ಟಂ
ಪರ್ಫಾಮೆನ್ಸ್
• 496 ಬಿಹೆಚ್ಪಿ ಮತ್ತು 450 ಎನ್ಎಂ ಟಾರ್ಕ್ ಉತ್ಪಾದನೆ • ಸ್ಟ್ಯಾಂಡರ್ಡ್ ಮಾದರಿಗಿಂತ ಹೆಚ್ಚುವರಿ 79 ಬಿಹೆಚ್ಪಿ ಉತ್ಪಾದನೆ • ಕೇವಲ 3.4 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ,ಮೀ ವೇಗ ಸಾಮರ್ಥ್ಯ • ಪ್ರತಿ ಗಂಟೆಗೆ 315 ಕಿ.ಮೀ ಟಾಪ್ ಸ್ಪೀಡ್
ಹೊಸ ವಿನ್ಯಾಸಗಳು
• ವಿಶಾಲವಾದ ಹಗುರ ಫ್ರಂಟ್ ವಿಂಗ್ ಪ್ಯಾನೆಲ್ • ಹೊಸ ಫ್ರಂಟ್ ಲಿಪ್ ಸ್ಪಾಯ್ಲರ್ • ಹೊಸ ಬಾಲ್ ಜಾಯಿಂಟ್ ಜೋಡಣೆ • 20-ಇಂಚಿನ ಮೆಗ್ನೀಸಿಯಂ ಚಕ್ರಗಳು
ಹೊಸ ತಂತ್ರಜ್ಞಾನಗಳು
• ಮಾರ್ಪಡಿಸಿದ ಸ್ಪ್ರಿಂಗ್ ಮತ್ತು ಆಂಟಿ-ರೋಲ್ ಬಾರ್ • ವೈಸಾಕ್ ಪ್ಯಾಕೇಜ್ ಮೂಲಕ ಟೈಟಾನಿಯಂ ರೋಲ್ ಕೇಜ್ • ಟೆಕ್ಆರ್ಟ್ ಕಸ್ಟಮೈಸ್ ಆಯ್ಕೆಗಳು