Tap to Read ➤

ಭಾರತೀಯ ವಾಯುಸೇನೆಯಲ್ಲಿ ಇಂದಿಗೂ ಪ್ರೊಪೆಲ್ಲರ್ ಬಳಸುತ್ತಿರುವ ವಿಮಾನಗಳಿವು!

ಭಾರತೀಯ ವಾಯುಪಡೆಯಲ್ಲಿ ಈಗಲೂ ಪ್ರೊಪೆಲ್ಲರ್ ಚಾಲಿತ ಯುದ್ಧ ವಿಮಾನಗಳನ್ನು ಬಳಸುತ್ತಿದ್ದು ಅವುಗಳ ಪಟ್ಟಿ ಇಲ್ಲಿದೆ.
Arun Teja P
ಡೋರ್ನಿಯರ್ 228
• ಮೊದಲು ಡೋರ್ನಿಯರ್‌ನಿಂದ ಅಭಿವೃದ್ಧಿ ಬಳಿಕ ಎಚ್‌ಎಎಲ್‌ನಿಂದ ಉತ್ಪಾದನೆ
• ಒಟ್ಟು ಆಸನಗಳ ಸಂಖ್ಯೆ 19
• ವಿಶಿಷ್ಟ ಆಯತಾಕಾರದ ವಿಮಾನ
• ಟಾಪ್ ಸ್ಪೀಡ್ 433 km/h
ಆ್ಯಂಟೊನೋವ್ ಎನ್-32
• ವಾಯುಪಡೆಯಲ್ಲಿ ಎನ್-32 ಅತಿ ಹೆಚ್ಚು ಬಳಕೆಯಲ್ಲಿರುವ ವಿಮಾನ
• ಪೈಲೆಟ್‌ಗಳಿಗೆ ಟ್ರೈನಿಂಗ್‌ ನೀಡಲು ಬಳಕೆ
• ಟಾಪ್ ಸ್ಪೀಡ್ 540 km/h
• ಸದ್ಯ ಸೇವೆಯಲ್ಲಿವೆ 103 ಎನ್-32 ವಿಮಾನಗಳು
ಲಾಕ್‌ಹೆಡ್ ಮಾರ್ಟಿನ್ ಸಿ-130ಜೆ ಸೂಪರ್ ಹರ್ಕುಲೆಸ್
• ವಿಶ್ವದ ಸುಮಾರು 22 ದೇಶಗಳಲ್ಲಿ ಬಳಕೆಯಲ್ಲಿದೆ ಸಿ-130ಜೆ ಹರ್ಕುಲೆಸ್
• ಎಲ್ಲಾ ರೀತಿಯ ವಾತರಣದಲ್ಲೂ ಕಾರ್ಯಾಚರಿಸುವ ಸಾಮರ್ಥ್ಯ
• ಟಾಪ್ ಸ್ಪೀಡ್ 590 km/h
• ವಾಯುಪಡೆಯಲ್ಲಿವೆ 12 ಮಾರ್ಟಿನ್ ಸಿ-130ಜೆ ಹರ್ಕುಲೆಸ್‌ಗಳು
ಹಾಕರ್ ಸಿಡ್ಡೆಲೀ ಹೆಚ್‌ಎಸ್ 748
• ಇದು ವಾಯುಪಡೆಯ ತುಂಬಾ ಹಳೆಯ ಟ್ರಾನ್ಸ್‌ಪೋರ್ಟ್ ವಿಮಾನ
• ಇದರ ಉತ್ಪಾದನಾ ಹಕ್ಕನ್ನು ಪಡೆದು 80 ವಿಮಾನಗಳನ್ನು ನಿರ್ಮಿಸಿ ಕೊಟ್ಟಿದೆ ಹೆಚ್‌ಎಎಲ್
• ಒಟ್ಟು ಆಸನಗಳ ಸಂಖ್ಯೆ 64
• ಟಾಪ್ ಸ್ಪೀಡ್ 452 km/h
ಪಿಲಾಟಸ್ ಪಿಸಿ-7 ಎಮ್‌ಕೆ-||
• ಇದು ವಾಯುಪಡೆಯ ಪ್ರೈಮರಿ ಬೇಸಿಕ್ ಟ್ರೈನಿಂಗ್ ಏರ್‌ಕ್ರಾಫ್ಟ್
• 2011 ರಲ್ಲಿ 75 ವಿಮಾನಗಳ ಖರೀದಿ
• ಮೇಡ್‌ ಇನ್ ಸ್ವಿಡ್ಜರ್‌ಲ್ಯಾಂಡ್
• ಟಾಪ್ ಸ್ಪೀಡ್ 412 km/h
ಐಎಐ ಸರ್ಚರ್ ||
• ಇದು ವಿಶ್ವದ ಅಡ್ವಾನ್ಸಡ್ ಯುಎವಿ (ಮಾನವರಹಿತ ವಿಮಾನ)
• 47 ಹೆಚ್‌ಪಿ ಪಿಸ್ಟನ್ ಎಂಜಿನ್‌ನಿಂದ ನಿರ್ಮಾಣ
• ವ್ಯಾಪ್ತಿ 350 ಕಿ.ಮೀ
• ಟಾಪ್ ಸ್ಪೀಡ್ 201 km/h
ಐಎಐ ಹೆರೋನ್
• ಇದು ಮಧ್ಯಮ ಎತ್ತರ ಹಾಗೂ ದೀರ್ಘ ಕಾರ್ಯಚರಣೆಯ ಯುಎವಿ
• 51 ಘಂಟೆಗಳ ಸುಧೀರ್ಘ ಕಾರ್ಯಾಚರಣೆ ಸಾಮರ್ಥ್ಯ
• ವ್ಯಾಪ್ತಿ 350 ಕಿ.ಮೀ
• ಟಾಪ್ ಸ್ಪೀಡ್ 207 km/h
ಪಿಪಿಸ್ಟ್ರಲ್ ವೈರಸ್ ಎಸ್‌ಡಬ್ಲ್ಯೂ 80
• ಇದು ವಾಯುಪಡೆಯ ಅತೀ ಸಣ್ಣ ವಿಮಾನ
• 80 hp ರೋಟೆಕ್ಸ್ 912 ಎಂಜಿನ್‌ ಸಾಮರ್ಥ್ಯ
• ಇದು ವಾಯುಪಡೆಯ ಬೇಸಿಕ್ ಟ್ರೈನರ್
• ಟಾಪ್ ಸ್ಪೀಡ್ 302 km/h