Tap to Read ➤

ಅತಿ ಹೆಚ್ಚು ಬೇಡಿಕೆಯಲ್ಲಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಗಳಿವು!

ಎಥರ್ ಎನರ್ಜಿ
ಪ್ರೀಮಿಯಂ 450 ಪ್ಲಸ್ ಮತ್ತು 450ಎಕ್ಸ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ ಕಂಪನಿಯು ಫೆಬ್ರವರಿ ತಿಂಗಳಿನಲ್ಲಿ ಒಟ್ಟು 2,229 ಇವಿ ಸ್ಕೂಟರ್ ಮಾರಾಟ ಮಾಡಿ ಐದನೇ ಸ್ಥಾನದಲ್ಲಿದೆ.
ಓಲಾ ಎಲೆಕ್ಟ್ರಿಕ್
ಅತಿ ಹೆಚ್ಚು ಮೈಲೇಜ್ ನೀಡುವ ಎಸ್1 ಮತ್ತು ಎಸ್1 ಪ್ರೊ ಇವಿ ಸ್ಕೂಟರ್ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಫೆಬ್ರವರಿಯಲ್ಲಿ ಒಟ್ಟು 3,904 ಇವಿ ಸ್ಕೂಟರ್ ಮಾರಾಟ ಮಾಡಿ ನಾಲ್ಕನೇ ಸ್ಥಾನದಲ್ಲಿದೆ.
ಆಂಪಿಯರ್ ಎಲೆಕ್ಟ್ರಿಕ್
ಗ್ರಾಹಕರ ಬೇಡಿಕೆಯೆಂತೆ ವಿವಿಧ ಇವಿ ಸ್ಕೂಟರ್‌ಗಳ ಮೂಲಕ ಉತ್ತಮ ಮಾರಾಟ ಸೌಲಭ್ಯ ಹೊಂದಿರುವ ಆಂಪಿಯರ್ ಎಲೆಕ್ಟ್ರಿಕ್ ಕಂಪನಿಯು ಫೆಬ್ರವರಿಯಲ್ಲಿ ಒಟ್ಟು 4,303 ಇವಿ ಸ್ಕೂಟರ್ ಮಾರಾಟ ಮಾಡಿ ಮೂರನೇ ಸ್ಥಾನದಲ್ಲಿದೆ.
ಒಕಿನಾವ
ವಿವಿಧ ಮಾದರಿಯ ಇವಿ ಸ್ಕೂಟರ್‌ಗಳ ಮಾರಾಟದೊಂದಿಗೆ ಉತ್ತಮ ಬೇಡಿಕೆ ಹೊಂದಿರುವ ಒಕಿನಾವ ಕಂಪನಿಯು ಫೆಬ್ರವರಿಯಲ್ಲಿ ಒಟ್ಟು 5,923 ಇವಿ ಸ್ಕೂಟರ್ ಮಾರಾಟ ಮಾಡಿ ಎರಡನೇ ಸ್ಥಾನದಲ್ಲಿದೆ.
ಹೀರೋ ಎಲೆಕ್ಟ್ರಿಕ್
ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ 13 ವರ್ಷಗಳ ಅನುಭವ ಹೊಂದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಇತ್ತೀಚೆಗೆ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಫೆಬ್ರವರಿ ಅವಧಿಯಲ್ಲಿ ಒಟ್ಟು 7,356 ಇವಿ ಸ್ಕೂಟರ್ ಮಾರಾಟ ಮಾಡಿ ಅಗ್ರಸ್ಥಾನ ಕಾಯ್ದುಕೊಂಡಿದೆ.