Tap to Read ➤

ಕ್ರ್ಯಾಶ್ ಟೆಸ್ಟಿಂಗ್: 4 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡ ಟೊಯೊಟಾ ಅರ್ಬನ್ ಕ್ರೂಸರ್

ಟೊಯೊಟಾ ಅರ್ಬನ್ ಕ್ರೂಸರ್ ಮಾದರಿಯು ಇತ್ತೀಚಿನ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಉತ್ತಮ ರ‍್ಯಾಂಕ್ ಗಳಿಸಿದೆ.
Praveen Sannamani
ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌
ಟೊಯೊಟಾ ಅರ್ಬನ್ ಕ್ರೂಸರ್ ಸಬ್‌-ಕಂಪ್ಯಾಕ್ಟ್ ಎಸ್‍ಯುವಿಯು 5 ಸ್ಟಾರ್ ರೇಂಟಿಂಗ್ಸ್‌ನಲ್ಲಿ 4 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದೆ.
ಅರ್ಬನ್ ಕ್ರೂಸರ್ ಸೇಫ್ಟಿ ರೇಟಿಂಗ್ಸ್
* ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ 17 ರಲ್ಲಿ 13.52 ಅಂಕ ಗಳಿಕೆ

* ಮಕ್ಕಳ ಸುರಕ್ಷತೆಯಲ್ಲಿ 49 ರಲ್ಲಿ 36.68 ಅಂಕ ಗಳಿಕೆ
ಕ್ರ್ಯಾಶ್ ಟೆಸ್ಟ್ ಎಂದರೇನು?
ಪ್ರತಿ ಹೊಸ ಕಾರು ರಸ್ತೆಗಿಳಿಯುವ ಮುನ್ನ ನಡೆಸುವ ಸುರಕ್ಷತಾ ಅಪಘಾತ ಪರೀಕ್ಷೆಯೇ ಕ್ರ್ಯಾಶ್ ಟೆಸ್ಟ್
ಭಾರತದಲ್ಲಿ ಕ್ರ್ಯಾಶ್ ಟೆಸ್ಟ್ ರೇಟಿಂಗ್ಸ್
ಹೊಸ ಕಾರುಗಳಲ್ಲಿನ ಸುರಕ್ಷಾ ಸೌಲಭ್ಯಗಳನ್ನು ಆಧರಿಸಿ ಸೊನ್ನೆಯಿಂದ ಗರಿಷ್ಠ 5 ಸ್ಟಾರ್ ತನಕ ಸೇಫ್ಟಿ ರೇಟಿಂಗ್ಸ್ ನೀಡಲಾಗುತ್ತದೆ.
ಕನಿಷ್ಠ ಅಂಕಗಳು ಅಗತ್ಯವೇ?
* ಹೌದು, ಕ್ರ್ಯಾಶ್‌ ಟೆಸ್ಟ್‌ನಲ್ಲಿ ಕನಿಷ್ಠ 3 ಸ್ಟಾರ್ ರೇಟಿಂಗ್ಸ್ ಪಡೆದುಕೊಳ್ಳುವುದು ಕಡ್ಡಾಯ

* 3 ಸ್ಟಾರ್ ರೇಟಿಂಗ್ಸ್‌ಗಿಂತಲೂ ಕಡಿಮೆ ಅಂಕ ಗಳಿಸುವ ಕಾರುಗಳನ್ನು ಕಳಪೆ ಎಂದು ಪರಿಗಣಿಸಲಾಗುತ್ತದೆ.
ರೇಟಿಂಗ್ಸ್ ಮಾನದಂಡಗಳು ಯಾವವು?
ಅಪಘಾತಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಒದಗಿಸುವ ಸುರಕ್ಷತೆಯನ್ನು ಆಧರಿಸಿ ಸೇಫ್ಟಿ ರೇಟಿಂಗ್ಸ್ ನಿರ್ಧಾರ
ಕ್ರ್ಯಾಶ್ ಟೆಸ್ಟ್ ಹೇಗಿರುತ್ತದೆ?
* ಹೊಸ ಕಾರನ್ನು ಪ್ರತಿ ಗಂಟೆಗೆ 40-65 ಕಿ.ಮೀ. ವೇಗದಲ್ಲಿ ನಿರ್ಬಂಧಿತ ಪ್ರದೇಶದಲ್ಲಿ ಗೋಡೆಗಳಿಗೆ ಡಿಕ್ಕಿ ಹೊಡೆಸಲಾಗುತ್ತದೆ.
* ಈ ಮೂಲಕ ಕಾರು ಎಷ್ಟು ಸುರಕ್ಷಿತ ಅನ್ನೋದನ್ನು ಕಂಡು ಹಿಡಿಯಲಾಗುತ್ತದೆ.
ಕ್ರ್ಯಾಶ್ ಟೆಸ್ಟ್ ವಿಧಗಳು
* ಮೊದಲನೆದಾಗಿ ವಾಹನದ ಮುಂಭಾಗವನ್ನು ಗೋಡೆಗೆ ಡಿಕ್ಕಿ ಹೊಡೆಸುವುದು ಮತ್ತು ಏರ್‌ಬ್ಯಾಗ್ ಕಾರ್ಯಕ್ಷಮತೆ ಪರೀಕ್ಷಿಸುವುದು.
* ಎರಡನೆದಾಗಿ ವಾಹನದ ಬಲಬದಿ ಭಾಗವನ್ನು ಗೋಡೆಗೆ ಡಿಕ್ಕಿ ಹೊಡೆಸುವುದು ಮತ್ತು ಕರ್ಟನ್ ಏರ್‌ಬ್ಯಾಗ್ ಕಾರ್ಯಕ್ಷಮತೆ ಪರೀಕ್ಷಿಸುವುದು.
ಅಂತಿಮ ಫಲಿತಾಂಶ
ವಿವಿಧ ಹಂತಗಳಲ್ಲಿ ಕಾರ್ಯಕ್ಷಮತೆ ಆಧರಿಸಿ ಕಾರಿನ ಸುರಕ್ಷತೆಗೆ ಸೇಫ್ಟಿ ರೇಟಿಂಗ್ಸ್ ನೀಡಲಿದ್ದು, ಇತ್ತೀಚಿನ ಕ್ರ್ಯಾಶ್ ಟೆಸ್ಟ್‌ನಲ್ಲಿ ಅರ್ಬನ್ ಕ್ರೂಸರ್ 4 ಸ್ಟಾರ್ ರೇಟಿಂಗ್ಸ್ ಗಳಿಸಿದೆ.