ಯೆಜ್ಡಿ ಬೈಕ್ಗಳನ್ನು ಗ್ರಾಹಕರ ಬೇಡಿಕೆಯೆಂತೆ ಕ್ಲಾಸಿಕ್, ಅಡ್ವೆಂಚರ್, ಸ್ಕ್ರ್ಯಾಂಬ್ಲರ್ ಮಾದರಿಗಳು ಹೊಸ ತಲೆಮಾರಿನ ವೈಶಿಷ್ಟ್ಯತೆಯೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಿವೆ.
Praveen Sannamani
ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಪ್ರೈ.ಲಿ, ಕಂಪನಿಯು ಯೆಜ್ಡಿ ಬೈಕ್ಗಳನ್ನು ಭಾರತದಲ್ಲಿ ಹೊಸ ತಲೆಮಾರಿನ ವೈಶಿಷ್ಟ್ಯತೆಯೊಂದಿಗೆ ಮರುಮಾರಾಟ ಆರಂಭಿಸಿದೆ.
ಯೆಜ್ಡಿ ಹೊಸ ಅಡ್ವೆಂಚರ್ ಬೈಕ್ ಮಾದರಿಯನ್ನು ವಿಶೇಷವಾಗಿ ಆಫ್-ರೋಡ್ ಪ್ರಿಯರಾಗಿ ಅಭಿವೃದ್ದಿಗೊಳಿಸಲಾಗಿದೆ.
ಹೊಸ ಯೆಜ್ಡಿ ಅಡ್ವೆಂಚರ್ ಬೈಕ್ ಮಾದರಿಯು ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2,09,900 ರಿಂದ ಟಾಪ್ ಎಂಡ್ ಮಾದರಿಯು ರೂ. 2,18,900 ಬೆಲೆ ಹೊಂದಿದೆ.
6-ಸ್ಪೀಡ್ ಗೇರ್ಬಾಕ್ಸ್ ಹೊಂದಿರುವ ಹೊಸ ಬೈಕ್ ಲಿಕ್ವಿಡ್-ಕೂಲ್ಡ್ 334 ಸಿಸಿ, ಸಿಂಗಲ್-ಸಿಲಿಂಡರ್ ಮೂಲಕ 29.7 ಬಿಎಚ್ಪಿ ಮತ್ತು 29.9 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಮುಂಭಾಗದಲ್ಲಿ 200 ಎಂಎಂ ಟ್ರಾವೆಲ್ ಸಸ್ಷೆಷನ್ ಮತ್ತು ಹಿಂಬದಿಯಲ್ಲಿ 180 ಎಂಎಂ ಟ್ರಾವೆಲ್ ಸಸ್ಷೆಷನ್ನೊಂದಿಗೆ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ.
ಡಬಲ್-ಕ್ರೇಡಲ್ ಫ್ರೇಮ್ ಮೇಲೆ ಅಭಿವೃದ್ದಿಗೊಂಡಿರುವ ಹೊಸ ಬೈಕ್ ಮಾದರಿಯು ಮಧ್ಯಮ ಕ್ರಮಾಂಕದ ಆಫ್-ರೋಡಿಂಗ್ ಸಾಹಸಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ಹೊಸ ಬೈಕಿನ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಜೊತೆಗೆ ಸ್ವಿಚ್ ಹೊಂದಿರುವ ಎಬಿಎಸ್ ಜೋಡಣೆ ಮಾಡಲಾಗಿದೆ.
ಬೈಕ್ ಸವಾರಿಯನ್ನು ಸುಲಭವಾಗಿಸಲು ರೋಡ್, ರೈನ್ ಮತ್ತು ಆಫ್ ರೋಡ್ ಮೋಡ್ಗಳೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ವೈಶಿಷ್ಟ್ಯತೆಗಳನ್ನು ನೀಡಲಾಗಿದೆ.
ಎಲ್ಇಡಿ ಹೆಡ್ಲ್ಯಾಂಪ್, ಎಲ್ಇಡಿ ಟರ್ನ್ ಸಿಗ್ನಲ್ ಇಂಡಿಕೇಟರ್, ಸ್ಮಾರ್ಟ್ಫೋನ್ ಚಾರ್ಜಿಂಗ್ ಪೋರ್ಟ್, ಎಲ್ಸಿಡಿ ಡಿಸ್ಪ್ಲೇ, ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಸೇರಿ ಹಲವು ಹೊಸ ಸೌಲಭ್ಯಗಳಿವೆ.
ಗುಣಮಟ್ಟ ಆದ್ಯತೆಯೊಂದಿಗೆ ಆರಾಮದಾಯಕ ಸವಾರಿ ಕಲ್ಪಿಸುವ ಹೊಸ ಅಡ್ವೆಂಚರ್ ಬೈಕ್ ಆರ್ಇ ಹಿಮಾಲಯನ್, ಕೆಟಿಎಂ 250 ಅಡ್ವೆಂಚರ್, ಬೆನೆಲ್ಲಿ ಟಿಆರ್ಕೆ 251 ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.