Tap to Read ➤

ಹೊಸ ಯೆಜ್ಡಿ ಸ್ಕ್ರ್ಯಾಂಬ್ಲರ್ ಬೈಕ್ ವಿಶೇಷತೆಗಳಿವು!

ಯೆಜ್ಡಿ ಹೊಸ ಬೈಕ್‌ಗಳಲ್ಲಿ ಸ್ಕ್ರ್ಯಾಂಬ್ಲರ್ ಮಾದರಿಯು ವಿಶೇಷ ವಿನ್ಯಾಸದೊಂದಿಗೆ ಆನ್ ರೋಡ್ ಮತ್ತು ಆಫ್ ರೋಡ್ ಕೌಶಲ್ಯಕ್ಕಾಗಿ ಅಭಿವೃದ್ದಿಗೊಳಿಸಲಾಗಿದೆ.
ಸ್ಕ್ರ್ಯಾಂಬ್ಲರ್ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.05 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 2.11 ಲಕ್ಷ ಬೆಲೆ ಹೊಂದಿದೆ.
6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಹೊಸ ಬೈಕ್ ಲಿಕ್ವಿಡ್-ಕೂಲ್ಡ್ 334 ಸಿಸಿ, ಸಿಂಗಲ್-ಸಿಲಿಂಡರ್  ಹೊಂದಿದೆ.
334 ಸಿಸಿ, ಸಿಂಗಲ್-ಸಿಲಿಂಡರ್ ಮೂಲಕ 28.7 ಬಿಎಚ್‌ಪಿ ಮತ್ತು 28.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಡಬಲ್ ಕ್ರೆಡಲ್ ಚಾಸಿಸ್ ಮೇಲೆ ನಿರ್ಮಾಣವಾಗಿ ಹೊಸ ಬೈಕ್ 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ 800 ಎಂಎಂ ಸೀಟ್ ಹೈಟ್, 12.5 ಲೀಟರ್ ಸಾಮರ್ಥ್ಯ ಫ್ಯೂಲ್ ಟ್ಯಾಂಕ್ ಹೊಂದಿದೆ.
ಹೊಸ ಬೈಕಿನ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ 240 ಎಂಎಂ ಡಿಸ್ಕ್ ಬ್ರೇಕ್, ಟ್ವಿನ್ ಎಕ್ಸಾಸ್ಟ್ ಜೊತೆಗೆ ಸ್ವಿಚ್ ಮಾಡಬಹುದಾದ ಎಬಿಎಸ್ ಜೋಡಣೆ ಮಾಡಲಾಗಿದೆ.
ಬೈಕ್ ಸವಾರಿಯನ್ನು ಸುಲಭವಾಗಿಸಲು ರೋಡ್, ರೈನ್ ಮತ್ತು ಆಫ್ ರೋಡ್ ಮೋಡ್‌ಗಳೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ವೈಶಿಷ್ಟ್ಯತೆಗಳನ್ನು ನೀಡಲಾಗಿದೆ.
ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟರ್ನ್ ಸಿಗ್ನಲ್ ಇಂಡಿಕೇಟರ್‌, ಸ್ಮಾರ್ಟ್‌ಫೋನ್ ಚಾರ್ಜಿಂಗ್ ಪೋರ್ಟ್‌, ಎಲ್‌ಸಿಡಿ ಡಿಸ್ಪ್ಲೇ, ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಸೇರಿ ಹಲವು ಹೊಸ ಸೌಲಭ್ಯಗಳಿವೆ.
ಗುಣಮಟ್ಟದ ಆದ್ಯತೆಯೊಂದಿಗೆ ಆರಾಮದಾಯಕ ಸವಾರಿ ಕಲ್ಪಿಸುವ ಹೊಸ ಬೈಕ್ ಬೆಲೆ ವಿಚಾರ ಪ್ರಮುಖ ಬೈಕ್‌ಗಳಿಗೆ ಉತ್ತಮ ಪೈಪೋಟಿ ನೀಡಲಿದೆ.