ವಿಮರ್ಶೆ: ಬೈಕ್‌ಗಿಂತ ಎಪ್ರಿಲಿಯಾ ಎಸ್ಆರ್ 150 ರೇಸ್ ಸ್ಕೂಟರ್ ಖರೀದಿ ಉತ್ತಮವೇ?

Written By:

ಪಿಯಾಗ್ಗಿಯೋ ಸಂಸ್ಥೆಯ ಬಹುನೀರಿಕ್ಷಿತ ಎಪ್ರಿಲಿಯಾ ಎಸ್ಆರ್ 150 ರೇಸ್ ಸ್ಕೂಟರ್ ಬಿಡುಗಡೆಯಾಗಿದ್ದು, ಭರ್ಜರಿ ಮಾರಾಟ ನೀರಿಕ್ಷೆ ಹುಟ್ಟುಹಾಕಿದೆ. 2016ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಕಂಡಿದ್ದ ಎಪ್ರಿಲಿಯಾ ಎಸ್ಆರ್ 150, ಮೊದಲ ನೋಟದಲ್ಲೇ ಪ್ರಭಾವ ಬೀರುತ್ತಿದೆ.

ಇಟಾಲಿಯನ್ ಮೂಲದ ಸಂಸ್ಥೆಯಿಂದ ಅಭಿವೃದ್ಧಿಗೊಂಡಿರುವ ಎಪ್ರಿಲಿಯಾ ಎಸ್ಆರ್150 ರೇಸ್ ಸ್ಕೂಟರ್, ಗ್ಲ್ಯಾಮರಸ್ ಬಾಹ್ಯ ವಿನ್ಯಾಸದೊಂದಿಗೆ ರೇಸ್ ಬೈಕ್ ಪ್ರಿಯರ ಗಮನಸೆಳೆಯುತ್ತಿದೆ. ಹಾಗಾದ್ರೆ ವಿನೂತನ ಮಾದರಿಯಲ್ಲಿ ಬೈಕ್ ಪ್ರಿಯರಿಗೆ ಇಷ್ಟವಾಗಬಹುದಾದ ಅಂಶಗಳ ಕಂಪ್ಲೀಟ್ ಹೈಲೈಟ್ಸ್ ಇಲ್ಲಿದೆ.

ಏನಿದು ಹೊಸತು?
ಪಿಯಾಗ್ಗಿಯೋ ಸಂಸ್ಥೆಯ ಹೊಸ ಎಪ್ರಿಲಿಯಾ ಎಸ್ಆರ್ 150 ರೇಸ್ ಸ್ಕೂಟರ್ ಒಂದು ಕ್ರೀಡಾ ಆವೃತ್ತಿಯಾಗಿದೆ. ಇದಲ್ಲದೇ ಮೋಟೋ ಜಿಪಿ ಬೈಕಿನಿಂದ ಸ್ಪೂರ್ತಿ ಪಡೆದಿರುವ ಹೊಚ್ಚ ಹೊಸ ಎಪ್ರಿಲಿಯಾ ವಿವಿಧ ನಮೂನೆಯ ಗ್ರಾಫಿಕ್ ವರ್ಕ್ಸ್ ಕ್ರಿಡಾ ಆವೃತ್ತಿಗೆ ಹೊಸ ಮೆರಗು ತಂದಿದೆ.

14-ಇಂಚಿನ ಮಿಶ್ರಲೋಹದ ವೀಲ್ಹ್‌ಗಳನ್ನು ಹೊಂದಿರುವ ಎಪ್ರಿಲಿಯಾ ಎಸ್ಆರ್ 150 ರೇಸ್ ಸ್ಕೂಟರ್, ಹಿಂಬದಿಯ ಚಕ್ರದಲ್ಲಿನ ಮೊನೊ ಶಾಕ್ ರೆಡ್ ಪೇಟಿಂಗ್‌ನಿಂದಾಗಿ ಆಕರ್ಷಕವಾಗಿದೆ. ಜೊತೆಗೆ ಡಿಸ್ಕ್ ಬ್ರೇಕ್ ಕ್ಯಾಲಿಪರ್ ಕಪ್ಪು ಬಣ್ಣದ ಬದಲು ಚಿನ್ನದ ಲೇಪನ ಹೊಂದಿದೆ.

ಒಟ್ಟಾರೆ ಗ್ರಾಫಿಕ್ಸ್‌ನಿಂದಲೇ ಗಮನಸೆಳೆಯುತ್ತಿರುವ ಎಪ್ರಿಲಿಯಾ ಎಸ್ಆರ್150 ಸ್ಕೂಟರ್ ಕೆಂಪು, ಹಸಿರು ಮತ್ತು ಬೂದು ಮಿಶ್ರಿತ ಲೋಹದ ಬಣ್ಣದಲ್ಲಿ ಮಿಂಚುತ್ತಿದೆ. ಮಿಶ್ರಲೋಹದ ಚಕ್ರಗಳು ಮತ್ತು ಹಿಂದಿನ ಮೊನೊ ಶಾಕ್ ಕೂಡಾ ಆಕರ್ಷಣಿಯ ಬಣ್ಣ ಹೊಂದಿದ್ದು, ಮುಂಭಾಗದ ನೋಟವನ್ನು ಪ್ರಶಾಂತವಾಗಿಸಿವೆ.

ಹ್ಯಾಂಡಲಿಂಗ್ ಮತ್ತು ಬ್ರೇಕ್
ಎಪ್ರಿಲಿಯಾ 150ಎಸ್ಆರ್ ಸವಾರಿ ಆರಾಮದಾಯಕವಾಗಿದೆ. ಇದಕ್ಕೆ ಪ್ರಮುಖ ಕಾರಣ ಸವಾರರಿಗೆ ಅನುಕೂಲವಾಗುವಂತಿರುವ ಹ್ಯಾಂಡಲಿಂಗ್. ರೇಸ್ ಸ್ಕೂಟರ್‌ನಲ್ಲಿ ಕೆಂಪು ಮತ್ತು ಕಪ್ಪು ಮಿಶ್ರಿತ ಸೀಟ್ ಕವರ್ ಜೋಡಿಸಲಾಗಿದೆ. ಮುಂಭಾಗ ಮತ್ತು ಹಿಂಬದಿಯಲ್ಲಿ 120ಎಂಎಂ ಟೈರ್ ಹೊಂದಿದ್ದು, 14-ಇಂಚಿನ ಮಿಶ್ರಲೋಹದ ವೀಲ್ಹ್‌ಗಳಿವೆ.

ಎಪ್ರಿಲಿಯಾ ಎಸ್ಆರ್ 150 ಅಗಲವಾದ ಟೈರ್ ಹೊಂದಿದ್ದು, ವೇಗದ ಸವಾರಿ ಮತ್ತು ಕಾರ್ನರ್‌ಗಳಲ್ಲಿ ಉತ್ತಮ ಹಿಡಿತ ಸಾಧಿಸಬಹುದಾಗಿದೆ. ಮುಂಭಾಗದಲ್ಲಿ ಟೆಲಿಸ್ಕೋಫಿಕ್ ವ್ಯವಸ್ಥೆಯನ್ನು ಹೊಂದಿರುವ ಸ್ಪೋರ್ಟ್ಸ್ ಆವೃತ್ತಿಯಲ್ಲಿ ಸಹಜವಾಗಿಯೇ ಹೆಚ್ಚಿನ ವೇಗದ ಸವಾರಿ ಮಾಡಬಹುದಾಗಿದೆ.

ಇನ್ನು ಬ್ರೇಕ್ ವ್ಯವಸ್ಥೆ ಬಗೆಗೆ ಹೇಳುವುದಾದರೆ ಡಿಸ್ಕ್ ಬ್ರೇಕ್ ಮತ್ತು ಡ್ರಮ್ ಬ್ರೇಕ್ ಕಾರ್ಯನಿರ್ವಹಣೆ ಅತ್ಯುತ್ತಮವಾಗಿದೆ. 150 ರೇಸ್ ವಿಭಾಗದ ಇತರೆ ಸ್ಕೂಟರ್‌ಗಳಿಗೆ ಹೋಲಿಸಿದ್ರೆ ಎಪ್ರಿಲಿಯಾ ಎಸ್ಆರ್ ಸಾಕಷ್ಟು ಸುಧಾರಣೆ ಹೊಂದಿದೆ.

ಎಂಜಿನ್ ಮತ್ತು ಕಾರ್ಯಕ್ಷಮತೆ
154.4ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್, 10.26 ಬಿಎಚ್‌ಪಿ ಮತ್ತು 11.4ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸಿವಿಟಿ ಗೇರ್ ಬಾಕ್ಸ್ ಹೊಂದಿರುವ ಎಪ್ರಿಲಿಯಾ ಪ್ರತಿಲೀಟರ್‌ಗೆ 35 ಕಿಲೋ ಮೀಟರ್ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

154.4ಸಿಸಿ ಎಂಜಿನ್ ಹೊಂದಿರುವ ಎಪ್ರಿಲಿಯಾ ಎಸ್ಆರ್ 150 ಕೇವಲ 28 ಸೆಕೆಂಡುಗಳಲ್ಲಿ 100ಕಿಲೇೂ ಮೀಟರ್ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿದೆ. ಜೊತೆಗೆ ಪ್ರತಿ ಗಂಟೆಗೆ 105 ಕಿಲೋ ಮೀಟರ್ ಗರಿಷ್ಠ ವೇಗ ಹೊಂದಿದೆ. 

100 ಕಿಲೋ ಮೀಟರ್ ವೇಗದಲ್ಲೂ ನಿಮಗೆ ಸುರಕ್ಷಾ ಅನುಭವ ನೀಡುವ ಎಸ್ಆರ್ 150, ಪ್ರಯಾಣದಲ್ಲಿ ಯಾವುದೇ ರೀತಿಯ ಎಂಜಿನ್ ಒತ್ತಡ ಎನ್ನಿಸುವುದಿಲ್ಲ ಜೊತೆಗೆ ಹೊಸ ವಿನ್ಯಾಸದ ಸ್ಪೀಡೋಮೀಟರ್ ನಿಮಗೆ ಪ್ರಯಾಣದ ನಿಖರ ಮಾಹಿತಿ ಒದಗಿಸಲಿದೆ.

ಹೆಚ್ಚುವರಿ ಸೌಲಭ್ಯಗಳು
ಎಪ್ರಿಲಿಯಾ ಎಸ್ಆರ್ 150 ರೇಸ್ ಬೈಕಿನಲ್ಲಿ ರೇಸ್ ಕಿಟ್ ಒದಗಿಸಲು ಯೋಜಿಸಿಸುತ್ತಿದೆ. ಬೈಕ್ ನಿರ್ವಹಣೆಯನ್ನು ಸುಧಾರಿಸಲು ರಿಟರ್ನ್ ಮಪ್ಲರ್ ವ್ಯವಸ್ಥೆಯಿದ್ದು, ಮತ್ತೊಂದೆಡೆ ಕಾರ್ಬರೇಟರ್ ಸಹ ನವೀಕರಿಸಲಾಗಿರುವ ದೊಡ್ಡ ಜೆಟ್‌ಗಳನ್ನು ಒದಗಿಸಲಾಗಿದೆ. ಆದ್ರೆ ರೇಸ್ ಕಿಟ್ ಬೆಲೆ ಸದ್ಯ ಮಾರುಕಟ್ಟೆಯಲ್ಲಿ 3 ಸಾವಿರದಿಂದ 5 ಸಾವಿರ ಬೆಲೆಯಿದ್ದು, ಮಾರುಕಟ್ಟೆಗೆ ಅನುಗುಣವಾಗಿ ಎಪ್ರಿಲಿಯಾ ಹೆಚ್ಚುವರಿ ಸೌಲಭ್ಯ ನೀಡುವ ಸಾಧ್ಯತೆಗಳಿವೆ.

ಸದ್ಯ ಬಿಡುಗಡೆಯಾಗಿರುವ ಎಪ್ರಿಲಿಯಾ ಎಸ್ಆರ್ 150 ಬೆಲೆ ಮುಂಬೈ ಎಕ್ಸ್‌ಶೋಂ ಪ್ರಕಾರ ರೂ. 70,288ಕ್ಕೆ ಲಭ್ಯವಿದೆ. ಆದ್ರೆ ಪ್ರಸ್ತುತ ಬೆಲೆಗಳನ್ನು ಗಮನಿಸಿದಾಗ ಎಪ್ರಿಲಿಯಾ ಎಸ್ಆರ್ ಬೆಲೆ ತುಸು ಹೆಚ್ಚಿದ್ದು, ವೆಸ್ಪಾ 150 ಸ್ಕೂಟರ್‌ಗೆ ತೀವ್ರ ಸ್ಪರ್ಧೆ ಒಡ್ಡಲಿದೆ. ಒಟ್ಟಿನಲ್ಲಿ ಎಸ್ಆರ್ 150 ಆವೃತ್ತಿಯ ಸ್ಕೂಟರ್ ಖರೀದಿಗೆ ಎಪ್ರಿಲಿಯಾ ಎಸ್ಆರ್ ಅತ್ಯತ್ತಮವಾಗಿದೆ ಎಂದು ಹೇಳಬಹುದು.

ಹೊಚ್ಚ ಹೊಸ ಎಪ್ರಿಲಿಯಾ ಎಸ್ಆರ್ 150 ರೇಸ್ ಸ್ಕೂಟರ್ ಚಿತ್ರಗಳನ್ನ ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Story first published: Monday, February 20, 2017, 12:20 [IST]
English summary
Aprilia has launched a sportier version of the standard SR 150 and the new scooter looks amazing with the cosmetic changes.
Please Wait while comments are loading...

Latest Photos