ಹೊಸ ಹೋಂಡಾ ಸಿಟಿಯಲ್ಲಿ ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು 6 ಏರ್ ಬ್ಯಾಗ್

2017 ಹೋಂಡಾ ಸಿಟಿ ಮುಂಬರುವ ವರ್ಷಾರಂಭದಲ್ಲಿ ಬಿಡುಗಡೆ ಭಾಗ್ಯ ಕಾಣಲಿದ್ದು, ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಗಿಟ್ಟಿಸಿಕೊಳ್ಳಲಿದೆ.

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ ನೂತನ ಹೋಂಡಾ ಸಿಟಿ ಹೊಸ ವರ್ಷದಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಈ ನಡುವೆ ವಾಹನ ವಲಯಗಳಿಂದ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ ನೂತನ ಹೋಂಡಾ ಸಿಟಿ ಮಧ್ಯಮ ಗಾತ್ರದ ಸೆಡಾನ್ ಕಾರು ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು ಆರು ಏರ್ ಬ್ಯಾಗ್ ಗಳ ಸೇವೆಯನ್ನು ಪಡೆಯಲಿದೆ.

ಹೊಸ ಹೋಂಡಾ ಸಿಟಿಯಲ್ಲಿ ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು 6 ಏರ್ ಬ್ಯಾಗ್

ದೇಶದಲ್ಲಿರುವ ತನ್ನ ಶ್ರೇಣಿಯ ಕಾರುಗಳ ಪೈಕಿ ಅತ್ಯಂತ ಜನಪ್ರಿಯವೆನಿಸಿರುವ ಸಿಟಿ ಕಾರನ್ನು ನವೀಕೃತಗೊಳಿಸಲು ಹೊರಟಿರುವ ಹೋಂಡಾ, ತನ್ಮೂಲಕ ಮಾರಾಟಕ್ಕೆ ಉತ್ತೇಜನ ತುಂಬಲಿದೆ.

ಹೊಸ ಹೋಂಡಾ ಸಿಟಿಯಲ್ಲಿ ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು 6 ಏರ್ ಬ್ಯಾಗ್

ಮಾರುತಿ ಸುಜುಕಿ ಸಿಯಾಝ್, ಹ್ಯುಂಡೈ ವೆರ್ನಾ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರುವ ಹೋಂಡಾ ಸಿಟಿ ಕಾರಿನಲ್ಲಿ ಪ್ರಮುಖವಾಗಿಯೂ ಅಂದತೆಯಲ್ಲಿ ಬದಲಾವಣೆ ಕಂಡುಬರಲಿದೆ.

ಹೊಸ ಹೋಂಡಾ ಸಿಟಿಯಲ್ಲಿ ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು 6 ಏರ್ ಬ್ಯಾಗ್

ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ವ್ಯವಸ್ಥೆಯು ಕಾರಿನ ಒಟ್ಟಾರೆ ಆಂತರಿಕ ಗುಣಮಟ್ಟತೆಯನ್ನು ವೃದ್ಧಿಸಲಿದೆ. ಸಾಮಾನ್ಯವಾಗಿ ಇಂತಹ ಸೌಲಭ್ಯಗಳು ಹೈ ಎಂಡ್ ಕಾರಿನಲ್ಲಿ ಮಾತ್ರ ಕಾಣ ಸಿಗುತ್ತದೆ.

ಹೊಸ ಹೋಂಡಾ ಸಿಟಿಯಲ್ಲಿ ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು 6 ಏರ್ ಬ್ಯಾಗ್

ಮೂರು ವರ್ಷಗಳ ಹಿಂದೆ ಪರಿಚಯವಾಗಿರುವ ಹೋಂಡಾ ಸಿಟಿ ಈಗಿನ ಆವೃತ್ತಿಯು ತನ್ನ ಪ್ರತಿಸ್ಪರ್ಧಿಗಳೆನ್ನೆಲ್ಲ ಹಿಂದಕ್ಕೆ ತಳ್ಳುತ್ತಾ ಅತ್ಯುತ್ತಮ ಮಾರಾಟವನ್ನು ಕಾಪಾಡಿಕೊಂಡಿತ್ತು.

ಹೊಸ ಹೋಂಡಾ ಸಿಟಿಯಲ್ಲಿ ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು 6 ಏರ್ ಬ್ಯಾಗ್

ನೂತನ ಕಾರಿನಲ್ಲಿ ಅಕಾರ್ಡ್ ನಿಂದ ಸ್ಪೂರ್ತಿ ಪಡೆದ ವಿನ್ಯಾ, ಪರಿಷ್ಕೃತ ಗ್ರಿಲ್, ಬಂಪರ್, ಅಗಲವಾದ ಏರ್ ಡ್ಯಾಮ್, ದೊಡ್ಡದಾದ ಫಾಗ್ ಲ್ಯಾಂಪ್ ಮತ್ತು ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಸೇವೆಯಿರಲಿದೆ.

ಹೊಸ ಹೋಂಡಾ ಸಿಟಿಯಲ್ಲಿ ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು 6 ಏರ್ ಬ್ಯಾಗ್

ಕಾರಿನ ಹಿಂಭಾಗದಲ್ಲಿ ಪರಿಷ್ಕೃತ ಬಂಪರ್ ಜೊತೆಗೆ ಎಲ್ಲ ಹೊಸತನದ ಎಲ್ ಇಡಿ ಟೈಲ್ ಲೈಟ್ ಜೋಡಿಸಲಾಗಿದೆ.

ಹೊಸ ಹೋಂಡಾ ಸಿಟಿಯಲ್ಲಿ ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು 6 ಏರ್ ಬ್ಯಾಗ್

ಕಾರಿನೊಳಗೆ ಹೊಸತಾದ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಆಂಡ್ರಾಯ್ಡ್ ಆಟೋ ಹಾಗೂ ಮೊಬೈಲ್ ಮಿರರ್ ಸೌಲಭ್ಯಗಳಿರಲಿದೆ.

ಹೊಸ ಹೋಂಡಾ ಸಿಟಿಯಲ್ಲಿ ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು 6 ಏರ್ ಬ್ಯಾಗ್

ಟಾಪ್ ಎಂಡ್ ಆವೃತ್ತಿಯು ಆರು ಏರ್ ಬ್ಯಾಗ್, ಸನ್ ರೂಫ್ ಮತ್ತು ಲೆಥರ್ ಹೋದಿಕೆಗಳನ್ನು ಗಿಟ್ಟಿಸಿಕೊಳ್ಳಲಿದೆ. ಒಟ್ಟಾರೆಯಾಗಿ ಎಲ್ಲ ಕಪ್ಪು ವರ್ಣದ ಡ್ಯಾಶ್ ಬೋರ್ಡ್ ಉಳಿಸಿಕೊಳ್ಳಲಾಗಿದೆ.

ಹೊಸ ಹೋಂಡಾ ಸಿಟಿಯಲ್ಲಿ ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು 6 ಏರ್ ಬ್ಯಾಗ್

ಇಷ್ಟೆಲ್ಲ ಆದರೂ ಕಾರಿನ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು 1.5 ಲೀಟರ್ ವಿಟೆಕ್ ಪೆಟ್ರೋಲ್ ಮತ್ತು 1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ ಗಿಟ್ಟಿಸಿಕೊಳ್ಳಲಿದೆ.

ಹೊಸ ಹೋಂಡಾ ಸಿಟಿಯಲ್ಲಿ ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು 6 ಏರ್ ಬ್ಯಾಗ್

ಪೆಟ್ರೋಲ್ ಎಂಜಿನ್ 145 ಎನ್ ಎಂ ತಿರುಗುಬಲದಲ್ಲಿ 118 ಅಶ್ವಶಕ್ತಿಯನ್ನು ಮತ್ತು ಡೀಸೆಲ್ ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ 99 ಅಶ್ವಶಕ್ತಿಯನ್ನು ನೀಡಲಿದೆ.

ಹೊಸ ಹೋಂಡಾ ಸಿಟಿಯಲ್ಲಿ ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು 6 ಏರ್ ಬ್ಯಾಗ್

ಅತ್ತ ಗೇರ್ ಬಾಕ್ಸ್ ಜವಾಬ್ದಾರಿಯನ್ನು ಆರು ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಟ್ರಾನ್ಸ್ ಮಿಷನ್ ವಹಿಸಿಕೊಳ್ಳಲಿದೆ.

ಹೊಸ ಹೋಂಡಾ ಸಿಟಿಯಲ್ಲಿ ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು 6 ಏರ್ ಬ್ಯಾಗ್

ಅಂದ ಹಾಗೆ 2017ನೇ ಸಾಲಿನ ವರ್ಷಾರಂಭದಲ್ಲಿ ಬಿಡುಗಡೆಯಾಗಲಿರುವ ನೂತನ ಹೋಂಡಾ ಸಿಟಿ ದೇಶದಲ್ಲಿ 8ರಿಂದ 13 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

Most Read Articles

Kannada
Read more on ಹೋಂಡಾ
English summary
2017 Honda City Top Of The Line Variant To Be Equipped With Additional Featur
Story first published: Saturday, December 10, 2016, 17:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X