ಥಾಯ್ಲೆಂಡ್ ನಿಂದ ಭಾರತದತ್ತ ತೀಕ್ಷ್ಣ ನೋಟ ಬೀರಿದ 2017 ಹೋಂಡಾ ಸಿಟಿ

Written By:

ಭಾರತದಲ್ಲಿ ನಿಕಟ ಭವಿಷ್ಯದಲ್ಲೇ ಬಿಡುಗಡೆಯಾಗಲಿರುವ ಅತಿ ನೂತನ 2017 ಹೋಂಡಾ ಸಿಟಿ ಕಾರು ಅತ್ತ ಥಾಯ್ಲೆಂಡ್ ದೇಶದಿಂದ ತೀಕ್ಷ್ಣ ನೋಟವನ್ನು ಬೀರಿದೆ. ಇದು ಥಾಯ್ಲೆಂಡ್ ಮಾರುಕಟ್ಟೆಯನ್ನು 2017 ಜನವರಿ 12ರಂದು ತಲುಪಲಿದೆ.

ನೂತನ 2017 ಹೋಂಡಾ ಸಿಟಿ ಕಾರು ಗ್ರೇಜ್ ಸೆಡಾನ್ ಕಾರಿಗಿಂತಲೂ ವಿಭಿನ್ನವಾಗಿ ಹೊಸ ತಲೆಮಾರಿನ ಸಿವಿಕ್ ಕಾರಿನಿಂದ ವಿನ್ಯಾಸ ಪ್ರೇರಣೆಯನ್ನು ಗಿಟ್ಟಿಸಿಕೊಂಡಿದೆ.

ಈ ಸಂಬಂಧ ಬಿಡುಗಡೆ ಮಾಡಿರುವ ಟೀಸರ್ ಚಿತ್ರವನ್ನು ನೋಡಿದಾಗಲೇ ನೂತನ ಸಿಟಿ ಕಾರು ಎಲ್ ಇಡಿ ಹೆಡ್ ಲ್ಯಾಂಪ್ ಜೊತೆ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಪಡೆದಿರುವುದು ತಿಳಿದು ಬರುತ್ತದೆ.

ಸಿವಿಕ್ ವಿನ್ಯಾಸಕ್ಕೆ ಸಮಾನವಾಗಿ ಕಾರಿನ ಮುಂಭಾಗದಲ್ಲಿ ಕ್ರೋಮ್ ಗ್ರಿಲ್ ಹೆಡ್ ಲ್ಯಾಂಪ್ ನತ್ತ ಹೊಂದಿಕೊಂಡಿದೆ.

ನೂತನ ಹೋಂಡಾ ಸಿಟಿ ಕಾರು 16 ಇಂಚುಗಳ ಡೈಮಂಟ್ ಕಟ್ ಅಲಾಯ್ ಚಕ್ರಗಳನ್ನು ಗಿಟ್ಟಿಸಿಕೊಳ್ಳಲಿದೆ. ಪರಿಷ್ಕೃತ ಬಂಪರ್ ಮತ್ತು ಫಾಗ್ ಲ್ಯಾಂಪ್ ಇತರ ಪ್ರಮುಖ ಆಕರ್ಷಣೆಯಾಗಿದೆ.

ಕಾರಿನ ಬದಿ ಮತ್ತು ಹಿಂಭಾಗದ ವಿನ್ಯಾಸವು ಈಗಿನ ಮಾದರಿಗೆ ಹೋಲುವಂತಿದೆ. ಹಾಗಿದ್ದರೂ ಹಿಂಭಾಗದಲ್ಲಿ ಟೈಲ್ ಲೈಟ್ ಪರಿಷ್ಕೃತಗೊಳಿಸಲಾಗಿದೆ.

2017 ಹೋಂಡಾ ಸಿಟಿ ಕಾರಿನೊಳಗೆ ಹೊಸತಾದ ಟಚ್ ಸ್ಕ್ರೀನ್ ಮಾಹಿತಿ ಮರರಂಜನಾ ಪರದೆಯ ವ್ಯವಸ್ಥೆಯಿರಲಿದೆ. ಇದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆ ಹೊಂದಿಕೆಯಾಗಲಿದೆ.

ಇನ್ನು ಲೆಥರ್ ಸೀಟು ಹಾಗೂ ಟಾಪ್ ಎಂಡ್ ವೆರಿಯಂಟ್ ಬದಿ ಮತ್ತು ಕರ್ಟೈನ್ ಏರ್ ಬ್ಯಾಗ್ ಸೌಲಭ್ಯಗಳನ್ನು ಪಡೆಯಲಿದೆ.

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡಲಿದೆ.

ಭಾರತದಲ್ಲಿ ಪ್ರಮುಖವಾಗಿಯೂ ಮಾರುತಿ ಸಿಯಾಝ್, ಸ್ಕೋಡಾ ರಾಪಿಡ್, ಹ್ಯುಂಡೈ ವೆರ್ನಾ ಮತ್ತು ಫೋಕ್ಸ್ ವ್ಯಾಗನ್ ವೆಂಟೊ ಮಾದರಿಗಳಿಗೆ ನೂತನ ಹೋಂಡಾ ಸಿಟಿ ಕಾರು ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

English summary
India-Bound 2017 Honda City Teased In Thailand
Please Wait while comments are loading...

Latest Photos