ಕಾದಿರಿ, ಹೊಸ ವರ್ಷಕ್ಕೆ ಹೋಂಡಾದಿಂದ ನೂತನ ಕೊಡುಗೆ

ಹೋಂಡಾ ಬಿಆರ್-ವಿ ಮಾರುಕಟ್ಟೆಯಲ್ಲಿ ಅಷ್ಟೇನೂ ಸದ್ದು ಮಾಡುತ್ತಿಲ್ಲ. ಹಾಗಿರುವಾಗ ನೂತನ ಡಬ್ಲ್ಯುಆರ್-ವಿ ಕ್ರಾಸೋವರ್ ಕಾರಿಗೆ ಯಶ ಲಭಿಸಿದೆ ಎಂಬುದನ್ನು ಕಾದು ನೋಡಬೇಕಿದೆ.

By Nagaraja

ಹೋಂಡಾ ಬಿಆರ್-ವಿ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು (ಎಸ್ ಯುವಿ) ಭಾರತೀಯ ಮಾರುಕಟ್ಟೆಗೆ ಪರಿಚಿಯಿಸಿರುವ ಜಪಾನ್ ಮೂಲದ ಮುಂಚೂಣಿಯ ಸಂಸ್ಥೆಯೀಗ ಮಗದೊಂದು ಆಕರ್ಷಕ ಕ್ರಾಸೋವರ್ ಕಾರನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದೆ. ಬಲ್ಲ ಮೂಲಗಳ ಪ್ರಕಾರ ಹೋಂಡಾ ಡಬ್ಲ್ಯುಆರ್-ವಿ ಕ್ರಾಸೋವರ್ ಕಾರು ಮುಂದಿನ ವರ್ಷ ಭಾರತ ಪ್ರವೇಶವನ್ನು ಮಾಡಲಿದೆ.

ಕಾದಿರಿ, ಹೊಸ ವರ್ಷಕ್ಕೆ ಹೋಂಡಾದಿಂದ ನೂತನ ಕೊಡುಗೆ

ಇಲ್ಲಿ ಗಮನಾರ್ಹ ಸಂಗತಿ ಏನೆಂದರೆ ಪ್ರಸ್ತುತ ಮಾರಾಟದಲ್ಲಿರುವ ಹೋಂಡಾ ಜಾಝ್ ಹ್ಯಾಚ್ ಬ್ಯಾಕ್ ಕಾರಿನ ತಹಳದಿಯಲ್ಲಿ ನೂತನ ಡಬ್ಲ್ಯುಆರ್-ವಿ ಕ್ರಾಸೋವರ್ ಕಾರು ನಿರ್ಮಾಣವಾಗುತ್ತಿದೆ.

ಕಾದಿರಿ, ಹೊಸ ವರ್ಷಕ್ಕೆ ಹೋಂಡಾದಿಂದ ನೂತನ ಕೊಡುಗೆ

2016 ಸಾವೊ ಪಾಲೊ ಮೋಟಾರು ಶೋದಲ್ಲಿ ಪ್ರದರ್ಶನ ಕಾಣಲಿರುವ ನೂತನ ಕಾನ್ಸೆಪ್ಟ್ ಕಾರು ವಿನ್ಯಾಸ ಹಾಗೂ ವೈಶಿಷ್ಟ್ಯಗಳ ವಿಚಾರದಲ್ಲಿ ಯಾವುದೇ ರಾಜಿಗೂ ತಯಾರಾಗಿಲ್ಲ

ಕಾದಿರಿ, ಹೊಸ ವರ್ಷಕ್ಕೆ ಹೋಂಡಾದಿಂದ ನೂತನ ಕೊಡುಗೆ

ಈ ಸಂಬಂಧ ಬ್ರೆಜಿಲ್ ವಾಹನ ಪ್ರೇಮಿಗಳಿಗಾಗಿ ಆಕರ್ಷಕ ರೇಖಾಚಿತ್ರವನ್ನು ಸಂಸ್ಥೆಯು ಬಿಡುಗಡೆಗೊಳಿಸಿದೆ. ಇದು ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಗುರಿ ಮಾಡಲಿದೆ.

ಕಾದಿರಿ, ಹೊಸ ವರ್ಷಕ್ಕೆ ಹೋಂಡಾದಿಂದ ನೂತನ ಕೊಡುಗೆ

ಮುಂಭಾಗದಲ್ಲಿ ಶಕ್ತಿಯುತ ರೇಖೆಗಳ ಜೊತೆಗೆ ಕ್ರೋಮ್ ಗ್ರಿಲ್, ಫ್ರಂಟ್ ಹೆಡ್ ಲ್ಯಾಂಪ್ ಗಳು ಜಾಝ್ ಗಿಂತಲೂ ಆಕ್ರಮಣಕಾರಿ ನಿಲುವನ್ನು ಮೈಗೂಡಿಸಿಕೊಂಡಿದೆ.

ಕಾದಿರಿ, ಹೊಸ ವರ್ಷಕ್ಕೆ ಹೋಂಡಾದಿಂದ ನೂತನ ಕೊಡುಗೆ

ಜಾಝ್ ತರಹನೇ ಕಾರಿನ ಬದಿಯಲ್ಲಿ ಸ್ವಭಾವ ರೇಖೆಗಳು ಹಾದು ಹೋಗಲಿದೆ. ಇನ್ನು ದೊಡ್ಡದಾದ ಸ್ಟೈಲಿಷ್ ಅಲಾಯ್ ಚಕ್ರಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

ಕಾದಿರಿ, ಹೊಸ ವರ್ಷಕ್ಕೆ ಹೋಂಡಾದಿಂದ ನೂತನ ಕೊಡುಗೆ

ಕಾರಿನೊಳಗೆ ಜಾಝ್ ರೀತಿಯಲ್ಲಿ ಗಮನಾರ್ಹ ವೈಶಿಷ್ಟ್ಯಗಳಿಗೆ ಮನೆ ಮಾಡಲಾಗುವುದು. ಹಾಗಿದ್ದರೂ ಪ್ರೀಮಿಯಂ ಸೌಲಭ್ಯಗಳಿಗೆ ಒತ್ತು ನೀಡಲಾಗುವುದು.

ಕಾದಿರಿ, ಹೊಸ ವರ್ಷಕ್ಕೆ ಹೋಂಡಾದಿಂದ ನೂತನ ಕೊಡುಗೆ

ಎರಡು ಎಂಜಿನ್ ಆಯ್ಕೆಗಳಲ್ಲಿ 2017 ಡಬ್ಲ್ಯುಆರ್-ವಿ ಆಗಮನವಾಗುವ ಸಾಧ್ಯತೆಯಿದೆ. ಇದು 1.2 ಲೀಟರ್ ಐ-ವಿಟೆಕ್ ಪೆಟ್ರೋಲ್ ಮತ್ತು ಅರ್ಥ್ ಡ್ರೀಮ್ಸ್ ಐ-ಡಿಟೆಕ್ ಡೀಸೆಲ್ ಎಂಜಿನ್ ಗಳನ್ನು ಪಡೆಯಲಿದೆ.

ಕಾದಿರಿ, ಹೊಸ ವರ್ಷಕ್ಕೆ ಹೋಂಡಾದಿಂದ ನೂತನ ಕೊಡುಗೆ

ಈ ಪೈಕಿ 90 ಅಶ್ವಶಕ್ತಿ ಉತ್ಪಾದಿಸಬಲ್ಲ 1.2 ಲೀಟರ್ ಎಂಜಿನ್ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳನ್ನು ಪಡೆಯಲಿದೆ. ಇನ್ನೊಂದೆಡೆ 1.5 ಲೀಟರ್ ಡೀಸೆಲ್ ಎಂಜಿನ್ 100 ಅಶ್ವಶಕ್ತಿ ಉತ್ಪಾದಿಸಲಿದ್ದು, ಆರು ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಗಿಟ್ಟಿಸಿಕೊಳ್ಳಲಿದೆ.

ಕಾದಿರಿ, ಹೊಸ ವರ್ಷಕ್ಕೆ ಹೋಂಡಾದಿಂದ ನೂತನ ಕೊಡುಗೆ

ಹಾಗೊಂದು ವೇಳೆ 2017 ಮಾರ್ಚ್ ವೇಳೆಯಲ್ಲಿ ಭಾರತದಲ್ಲಿ ಬಿಡುಗಡೆ ಭಾಗ್ಯ ಕಂಡ್ಡಲ್ಲಿ ನೂತನ ಕಾರು ಹ್ಯುಂಡೈ ಐ20 ಆಕ್ಟಿವ್, ಟೊಯೊಟಾ ಎಟಿಯೋಸ್ ಕ್ರಾಸ್, ಫೋಕ್ಸ್ ವ್ಯಾಗನ್ ಕ್ರಾಸ್ ಪೊಲೊ ಮತ್ತು ಫಿಯೆಟ್ ಅರ್ಬನ್ ಕ್ರಾಸ್ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

Most Read Articles

Kannada
Read more on ಹೋಂಡಾ
English summary
2017 Honda WR-V — To Be Launched In India In March Next Year
Story first published: Friday, October 21, 2016, 13:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X