ಪ್ಯಾರಿಸ್ ಮೋಟಾರು ಶೋದಲ್ಲಿ ಹೊಸ ಕ್ರಾಂತಿ - 2017 ನಿಸ್ಸಾನ್ ಮೈಕ್ರಾ
ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ನಿಸ್ಸಾನ್, ಹೊಚ್ಚ ಹೊಸ 2017 ನಿಸ್ಸಾನ್ ಮೈಕ್ರಾ ಟೀಸರ್ ವಿಡಿಯೋ ಹಾಗೂ ಚಿತ್ರಗಳನ್ನು ಬಿಡುಗಡೆಗೊಳಿಸಿದೆ. ಈ ಬಹುನಿರೀಕ್ಷಿತ ಕಾರು 2016 ಪ್ಯಾರಿಸ್ ಮೋಟಾರು ಶೋದಲ್ಲಿ ಪ್ರದರ್ಶನ ಕಾಣಲಿದೆ.
ನೂತನ 2017 ನಿಸ್ಸಾನ್ ಮೈಕ್ರಾ ಹೆಚ್ಚು ಪ್ರಭಾವಶಾಲಿ ವಿನ್ಯಾಸ ನೀತಿಯನ್ನು ಮೈಗೂಡಿಸಿಕೊಂಡು ಬಂದಿದೆ. ಇದು ಪ್ರಮುಖವಾಗಿಯೂ ಫೋಕ್ಸ್ ವ್ಯಾಗನ್ ಪೊಲೊ, ಫೋರ್ಡ್ ಫಿಯೆಸ್ಟಾ, ಸಿಟ್ರಾನ್ ಸಿ3 ಹಾಗೂ ಪ್ಯೂಜೊ 208 ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಭಾರತದಲ್ಲಿ ನಿಸ್ಸಾನ್ ಮೈಕ್ರಾ ಅಷ್ಟೊಂದು ಹೆಸರು ಮಾಡಿಲ್ಲವಾದರೂ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಜನಪ್ರಿಯತೆಯನ್ನು ಕಾಪಾಡಿಕೊಂಡಿದೆ. ಇದುವೇ ಹೊಸ ನಿಸ್ಸಾನ್ ಮೈಕ್ರಾ ಆಗಮನಕ್ಕೆ ಪ್ರೇರಣೆಯಾಗಿದೆ.

ಸಂಸ್ಥೆಯೇ ಬೊಟ್ಟು ಮಾಡಿ ಹೇಳುವಂತೆಯೇ 2016 ಪ್ಯಾರಿಸ್ ಮೋಟಾರು ಶೋದಲ್ಲಿ ಕ್ರಾಂತಿಯೊಂದರ ಆಗಮನವಾಗುತ್ತಿದೆ ಎಂದು ಘೋಷಿಸಿದೆ.

ನೂತನ ನಿಸ್ಸಾನ್ ಮೈಕ್ರಾ ಕಾರು ಸಿಎಂಎಫ್-ಬಿ ತಳಹದಿಯಲ್ಲಿ ನಿರ್ಮಾಣವಾಗಲಿದೆ. ಹೊಸ ಮೈಕ್ರಾ ಹೆಚ್ಚಿನ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.


Click it and Unblock the Notifications