ಭಾರತಕ್ಕೆ ಕಾಲಿಟ್ಟ ಫೋಕ್ಸ್ ವ್ಯಾಗನ್ ಟೈಗ್ವಾನ್ ಎಸ್‌ಯುವಿ

By Nagaraja

ಫೋಕ್ಸ್ ವ್ಯಾಗನ್ ಟೈಗ್ವಾನ್ ಕ್ರೀಡಾ ಬಳಕೆಯ ವಾಹನ ಮಗದೊಮ್ಮೆ ಭಾರತಕ್ಕೆ ಕಾಲಿಟ್ಟಿದೆ. ಈ ಬಾರಿ ದೇಶದಲ್ಲಿ ಅಂಗೀಕಾರ ಗಿಟ್ಟಿಸಿಕೊಳ್ಳುವ ಗುರಿಯೊಂದಿಗೆ ಪ್ರವೇಶ ಪಡೆದಿದೆ. ಇದಕ್ಕೂ ಮೊದಲು 2016 ವರ್ಷಾರಂಭದಲ್ಲಿ ನಡೆದ ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ಇದರೊಂದಿಗೆ ಭಾರತ ಮಾರುಕಟ್ಟೆಗೆ ನಿಕಟ ಭವಿಷ್ಯದಲ್ಲೇ ಪ್ರವೇಶಿಸಲಿದೆ ಎಂಬುದು ಖಚಿತಗೊಂಡಿದೆ.

ಭಾರತಕ್ಕೆ ಕಾಲಿಟ್ಟ ಫೋಕ್ಸ್ ವ್ಯಾಗನ್ ಟೈಗ್ವಾನ್ ಎಸ್‌ಯುವಿ

2017 ಫೋಕ್ಸ್ ವ್ಯಾಗನ್ ಟೈಗ್ವಾನ್ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನದ ಎರಡು ಯುನಿಟ್ ಗಳನ್ನು ಮಾತ್ರ ಆಮದು ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಫೋಕ್ಸ್ ವ್ಯಾಗನ್ ಟೈಗ್ವಾನ್ ಎರಡು ವೆರಿಯಂಟ್ ಗಳಲ್ಲಿ ಲಭ್ಯವಾಗುವುದು ತಿಳಿದು ಬಂದಿದೆ.

ಭಾರತಕ್ಕೆ ಕಾಲಿಟ್ಟ ಫೋಕ್ಸ್ ವ್ಯಾಗನ್ ಟೈಗ್ವಾನ್ ಎಸ್‌ಯುವಿ

ಇದೇ ವೇಳೆಯಲ್ಲಿ ಭಾರತದಲ್ಲಿ ಫೋಕ್ಸ್ ವ್ಯಾಗನ್ ಟೈಗ್ವಾನ್ ಟೆಸ್ಟಿಂಗ್ ಪ್ರಕ್ರಿಯೆಯು ನಡೆಯಲಿದೆ. ಇದು ಎಂಕ್ಯೂಬಿ ತಳಹದಿಯಲ್ಲಿ ನಿರ್ಮಾಣವಾಗಿದೆ.

ಭಾರತಕ್ಕೆ ಕಾಲಿಟ್ಟ ಫೋಕ್ಸ್ ವ್ಯಾಗನ್ ಟೈಗ್ವಾನ್ ಎಸ್‌ಯುವಿ

ಸ್ಕೋಡಾ ಒಕ್ಟಾವಿಯಾ ಹಾಗೂ ಫೋಕ್ಸ್ ವ್ಯಾಗನ್ ಪಸ್ಸಾಟ್ ಸಹ ಎಂಕ್ಯೂಬಿ ತಳಹದಿಯಲ್ಲೇ ನಿರ್ಮಾಣಗೊಂಡಿತ್ತು. ಇದೀಗ ಟೈಗ್ವಾನ್ ಮತ್ತದೇ ಪ್ರೀಮಿಯಂ ದರ್ಜೆಯನ್ನು ಮತ್ತಷ್ಟು ಜನಪ್ರಿಯವಾಗಿಸಲಿದೆ.

ಭಾರತಕ್ಕೆ ಕಾಲಿಟ್ಟ ಫೋಕ್ಸ್ ವ್ಯಾಗನ್ ಟೈಗ್ವಾನ್ ಎಸ್‌ಯುವಿ

ಕಾರಿನ ಮುಂಭಾಗದಲ್ಲಿ ಆಕ್ರಮಣಕಾರಿ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ. ಒಟ್ಟಾರೆಯಾಗಿ ಫೋಕ್ಸ್ ವ್ಯಾಗನ್ ಕ್ರಾಸ್ ಕೂಪೆ ಜಿಟಿಇ ಕಾರಿನಿಂದ ಸ್ಪೂರ್ತಿ ಪಡೆಯಲಾಗಿದೆ.

ಭಾರತಕ್ಕೆ ಕಾಲಿಟ್ಟ ಫೋಕ್ಸ್ ವ್ಯಾಗನ್ ಟೈಗ್ವಾನ್ ಎಸ್‌ಯುವಿ

ಮುಂದುಗಡೆ ದೊಡ್ಡದಾದ ಹೆಡ್ ಲೈಟ್, ಕ್ರೋಮ್ ಗ್ರಿಲ್, ಶಕ್ತಿಯುತ ಬಂಪರ್, ಫಾಗ್ ಲ್ಯಾಂಪ್, ವೀಲ್ ಆರ್ಚ್, ಹಿಂದುಗಡೆ ಇಂಟೇಗ್ರೇಟಡ್ ಸ್ಪಾಯ್ಲರ್, ವಿಭಜಿತ ಎಲ್ ಇಡಿ ಟೈಲ್ ಲೈಟ್ ಹಾಗೂ ಸಿಲ್ವರ್ ಸ್ಕಿಡ್ ಪ್ಲೇಟ್ ಇರಲಿದೆ.

ಭಾರತಕ್ಕೆ ಕಾಲಿಟ್ಟ ಫೋಕ್ಸ್ ವ್ಯಾಗನ್ ಟೈಗ್ವಾನ್ ಎಸ್‌ಯುವಿ

ಕಾರಿನೊಳಗೆ ಫೋಕ್ಸ್ ವ್ಯಾಗನ್ ಟೈಗ್ವಾನ್ ಪ್ಯೂರ್ ಏರ್ ಕ್ಲೈಮಾಟ್ರಾನಿಕ್ ತ್ರಿ ಝೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ, ಪ್ಯಾನರಾಮಿಕ್ ಸನ್ ರೂಫ್, ಎಲೆಕ್ಟ್ರಿಕ್ ಫ್ರಂಟ್ ಸೀಟು ಜೊತೆ ನಾಲ್ಕು ವಿಧಗಳಲ್ಲಿ ಹೊಂದಾಣಿಸಬಹುದಾದ ಲಂಬರ್ ಸಪೋರ್ಟ್ ಇತ್ಯಾದಿ ವ್ಯವಸ್ಥೆಗಳಿರಲಿದೆ.

ಭಾರತಕ್ಕೆ ಕಾಲಿಟ್ಟ ಫೋಕ್ಸ್ ವ್ಯಾಗನ್ ಟೈಗ್ವಾನ್ ಎಸ್‌ಯುವಿ

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಬಹು ಕ್ರಿಯಾತ್ಮಕ ತ್ರಿ ಸ್ಪೋಕ್ ಫ್ಲ್ಯಾಟ್ ಬಾಟಮ್ ಸ್ಟೀರಿಂಗ್ ವೀಲ್, ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಫೋಕ್ಸ್ ವ್ಯಾಗನ್ ಕಾರು ನೆಟ್ ಆಪ್ ಕನೆಕ್ಟ್, ಫೆಂಡರ್ ಪ್ರೀಮಿಯಂ ಆಡಿಯೋ ಸಿಸ್ಟಂ, 400 ವಾಟ್ ಗಳ ಆಂಪ್ಲಿಫೈರ್ ಮತ್ತು ಒಂಬತ್ತು ಸ್ಪೀಕರುಗಳಿರಲಿದೆ.

ಭಾರತಕ್ಕೆ ಕಾಲಿಟ್ಟ ಫೋಕ್ಸ್ ವ್ಯಾಗನ್ ಟೈಗ್ವಾನ್ ಎಸ್‌ಯುವಿ

ವಿಶ್ವದ ಅತ್ಯಂತ ಸುರಕ್ಷಿತ ಕಾರುಗಳಲ್ಲಿ ಒಂದೆನಿಸಿಕೊಂಡಿರುವ ಫೋಕ್ಸ್ ವ್ಯಾಗನ್ ತನ್ನ ನೂತನ ಟೈಗ್ವಾನ್ ಕಾರಿನಲ್ಲೂ, ಆಟೋಮ್ಯಾಟಿಕ್ ಢಿಕ್ಕಿ ಪೂರ್ವ ಬ್ರೇಕಿಂಗ್ ಸಿಸ್ಟಂ, ಲೇನ್ ಅಸಿಸ್ಟ್ ನಿರ್ಗಮನ ಎಚ್ಚರ ವ್ಯವಸ್ಥೆ, ನಗರ ತುರ್ತು ಬ್ರೇಕಿಂಗ್ ಮತ್ತು ಪಾದಚಾರಿ ಮಾನಿಟರಿಂಗ್ ವ್ಯವಸ್ಥೆಗಳ್ನು ಪಡೆದಿದೆ.

ಭಾರತಕ್ಕೆ ಕಾಲಿಟ್ಟ ಫೋಕ್ಸ್ ವ್ಯಾಗನ್ ಟೈಗ್ವಾನ್ ಎಸ್‌ಯುವಿ

ಇಲ್ಲಿಗೆ ಫೋಕ್ಸ್ ವ್ಯಾಗನ್ ಭದ್ರತೆಯು ಕೊನೆಗೊಳ್ಳುವುದಿಲ್ಲ. ಏಳು ಏರ್ ಬ್ಯಾಗ್, ಚಾಲಕ ಬದಿಯ ಮೊಣಕಾಲು ಏರ್ ಬ್ಯಾಗ್, ಅಡಾಪ್ಟಿಕ್ ಕ್ರೂಸ್ ಕಂಟ್ರೋಲ್, 390 ಡಿಗ್ರಿ ಏರಿಯಾ ವ್ಯೂ, ಢಿಕ್ಕಿ ಪೂರ್ವಭಾವಿಯಾಗಿ ಪಾದಚಾರಿ ರಕ್ಷಣೆ ಮತ್ತು ಸೈಡ್ ಅಸಿಸ್ಟ್ ಸೇವೆಗಳನ್ನು ಪಡೆಯಲಿದೆ.

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ: 4,485

ಅಗಲ: 1839

ಎತ್ತರ: 1633

ಚಕ್ರಾಂತರ: 2682

Article Published On: Tuesday, October 4, 2016, 15:23 [IST]
English summary
Volkswagen Imports Tiguan SUV For Homologation For Indian Market
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+