ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

ಕಾಲೇಜು ವಿದ್ಯಾರ್ಥಿಗಳು ಖರೀದಿ ಮಾಡಬಹುದಾದ ದೇಶದಲ್ಲಿ ಲಭ್ಯವಿರುವ ಅತ್ಯುತ್ತಮ ಕಾರುಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ.

By Nagaraja

ಕಲಿಕಾ ಜೀವನವನ್ನು ಜೀವನದ ಸುವರ್ಣ ಕಾಲಘಟ್ಟವಾಗಿ ವರ್ಣಿಸಲಾಗುತ್ತದೆ. ಕಾಲೇಜು ಲೈಫಲ್ಲಿ ಎಲ್ಲವೂ ಎಂಜಾಯ್..ಎಂಜಾಯ್..! ಜೀವನದ ಚಿಂತೆಯಿಲ್ಲದೆ ಗೆಳೆಯರ ಜೊತೆಗಿನ ಒಡನಾಟವನ್ನು ಯಾರು ತಾನೇ ಇಷ್ಟಪಡುತ್ತಿಲ್ಲ? ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳು ಶೋಕಿ ಜೀವನ ನಡೆಸಲು ಬಯಸುತ್ತಾರೆ. ಈಗಿನ ಟ್ರೆಂಡ್ ಗೆ ಅನುಸಾರವಾಗಿ ಬೈಕ್ ಗಿಂತ ಮಿಗಿಲಾಗಿ ಕಾರಲ್ಲೇ ಸ್ನೇಹಿತರ ಜೊತೆಗೆ ಸುತ್ತಾಡಲು ಬಯಸುತ್ತಾರೆ. ಹೀಗೆ ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತವಾಗಿರುವ ಕೆಲವು ಕಾರು ಸಲಹೆಗಳನ್ನು ಇಲ್ಲಿ ಕೊಡಲಿದ್ದೇವೆ.

ರೆನೊ ಕ್ವಿಡ್

ರೆನೊ ಕ್ವಿಡ್

ಕಾಲೇಜು ಲೈಫಲ್ಲಿ ವಿವಿಧ ರೀತಿಯ ಭಂಗಿಗಳ ಬಟ್ಟೆಗಳನ್ನು ಧರಿಸಲು ಹೇಗೆ ಬಯಸುತ್ತಾರೋ ಹಾಗೆಯೇ ಕಾರುಗಳ ಟೇಸ್ಟಿನಲ್ಲೂ ಬದಲಾವಣೆಯಿರುತ್ತದೆ. ಹಳೆಯ ಶೈಲಿಯ ಕಾರುಗಳ ಬದಲಾಗಿ ಆಧುನಿಕತೆ ತಕ್ಕಂತೆ ಕಾರುಗಳನ್ನು ಬಯಸುವುದು ಸಹಜ. ಇದಕ್ಕೆ ಕಡಿಮೆ ಬೆಲೆಯಲ್ಲಿ ದೊರಕುವ ಕಾರು ರೆನೊ ಕ್ವಿಡ್ ಆಗಿದೆ.

ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

ರೆನೊ ಕ್ವಿಡ್ ಯುುವ ಜನಾಂಗವನ್ನು ಅತಿ ಹೆಚ್ಚು ಆಕರ್ಷಿಸಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಕ್ರೀಡಾ ಬಳಕೆಯ ವಾಹನ ಶೈಲಿಯ ಸಾನಿಧ್ಯವು ಕ್ವಿಡ್ ವಾಹನ ಪ್ರೇಮಿಗಳನ್ನು ಅತಿ ಹೆಚ್ಚು ಗಮನ ಸೆಳೆದಿದೆ.

ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

ಇನ್ನು ಎಂಟ್ರಿ ಲೆವೆಲ್ ವಿಭಾಗದಲ್ಲಿ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ನೇವಿಗೇಷನ್ ಸೇವೆಯನ್ನು ರೆನೊ ಕ್ವಿಡ್ ನೀಡುತ್ತದೆ. ಇವೆಲ್ಲದಕ್ಕೂ ಮಿಗಲಾಗಿ ಪ್ರತಿ ಲೀಟರ್ ಗೆ 25.17 ಕೀ.ಮೀ. ಮೈಲೇಜ್ ಕಾಪಾಡಿಕೊಳ್ಳುವುದಾದರೆ ಸ್ನೇಹಿತರ ಜೊತೆಗೆ ಸುತ್ತಾಡಲು ಇನ್ನೇನು ಬೇಕು ಹೇಳಿ ನೋಡೋಣ ?

ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

799 ಸಿಸಿ ಹಾಗೂ ಒಂದು ಲೀಟರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ರೆನೊ ಕ್ವಿಡ್ ಐದು ಸ್ಪೀಡ್ ಮ್ಯಾನುವಲ್ ಹಾಗೂ ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳಲ್ಲೂ ಲಭ್ಯವಿರುತ್ತದೆ.

ಬೆಲೆ: 2.65 ಲಕ್ಷ ರು.ಗಳಿಂದ 3.96 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ಸ್ವಿಫ್ಟ್

ವರ್ಷಗಳೇ ಉರುಳಿದರೂ ಮಾರುತಿ ಸ್ವಿಫ್ಟ್ ಜನಪ್ರಿಯತೆಗೂ ಮಾತ್ರ ಯಾವುದೇ ಕುತ್ತು ಸಂಭವಿಸಿಲ್ಲ. ದೇಶದ ಅಗ್ರ ಮೂರು ಮಾರಾಟದ ಕಾರುಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಮಾರುತಿ ಸ್ವಿಫ್ಟ್ ದೇಶದ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಒಂದೆನಿಸಿಕೊಂಡಿದೆ.

ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

ಆಡಿಯೋ ಸಿಸ್ಟಂ, ಬ್ಲೂಟೂತ್, ಆಟೋಮ್ಯಾಟಿಕ್ ಎಸಿ, ಡ್ಯುಯಲ್ ಏರ್ ಬ್ಯಾಗ್ ಜೊತೆಗೆ ಇಬಿಡಿ ಗಳಂತಹ ಸುರಕ್ಷಾ ವೈಶಿಷ್ಟ್ಯಗಳನ್ನು ಹೊಂದಿರುವ ಸ್ವಿಫ್ಟ್ ಕಾರು ಗರಿಷ್ಠ ಸ್ಥಳಾವಕಾಶವನ್ನು ಕಾಯ್ದುಕೊಂಡಿದೆ.

ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

ಮಾರುತಿ ಸ್ವಿಫ್ಟ್ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳು ಪ್ರತಿ ಲೀಟರ್ ಗೆ ಅನುಕ್ರಮವಾಗಿ 20.4 ಕೀ.ಮೀ. ಮತ್ತು 25.2 ಕೀ.ಮೀ. ಮೈಲೇಜ್ ನೀಡಲಿದೆ.

ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

ಮಾರುತಿ ಸ್ವಿಫ್ಟ್ ನಲ್ಲಿರುವ 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ 115 ಎನ್ ಎಂ ತಿರುಗುಬಲದಲ್ಲಿ 83 ಅಶ್ವಶಕ್ತಿಯನ್ನು ಮತ್ತು 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ 190 ಎನ್ ಎಂ ತಿರುಗುಬಲದಲ್ಲಿ 74 ಅಶ್ವಶಕ್ತಿಯನ್ನು ನೀಡುತ್ತದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ಬೆಲೆ ಮಾಹಿತಿ: 4.76 ಲಕ್ಷ ರು.ಗಳಿಂದ 7.44 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಷೆವರ್ಲೆ ಬೀಟ್

ಷೆವರ್ಲೆ ಬೀಟ್

ಕಾಲೇಜು ಜೀವನದಲ್ಲಿ ವಿಭಿನ್ನತೆ ಬಯಸುವವರು ಷೆವರ್ಲೆ ಬೀಟ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇನ್ನು ಕಾಲೇಜು ಯುವತಿಯರಿಗೆ ಈ ಚೊಕ್ಕದಾದ ಕಾರನ್ನು ಸುಲಭವಾಗಿ ಚಾಲನೆ ಮಾಡಬಹುದಾಗಿದೆ.

ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

ಇವೆಲ್ಲದಕ್ಕೂ ಮಿಗಿಲಾಗಿ ಡ್ಯುಯಲ್ ಎರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ವ್ಯವಸ್ಥೆ, ರಿಮೋಟ್ ಕೀಲೆಸ್ ಎಂಟ್ರಿ ಇತ್ಯಾದಿ ವೈಶಿಷ್ಟ್ಯಗಳು ದೊರಕಲಿದೆ. ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳು ಪ್ರತಿ ಲೀಟರ್ ಗೆ ಅನುಕ್ರಮವಾಗಿ 17.8 ಮತ್ತು 25.44 ಕೀ.ಮೀ. ಮೈಲೇಜ್ ಕಾಪಾಡಿಕೊಳ್ಳಲಿದೆ.

ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

ಷೆವರ್ಲೆ ಬೀಟ್ 1.2 ಲೀಟರ್ ಪೆಟ್ರೋಲ್ ಎಂಜಿನ್ 106.5 ಎನ್ ಎಂ ತಿರುಗುಬಲದಲ್ಲಿ 77 ಅಶ್ವಶಕ್ತಿಯನ್ನು ಮತ್ತು 1.0 ಲೀಟರ್ ಡೀಸೆಲ್ ಎಂಜಿನ್ 142.5 ಎನ್ ಎಂ ತಿರುಗುಬಲದಲ್ಲಿ 56 ಅಶ್ವಶಕ್ತಿಯನ್ನು ನೀಡಲಿದೆ.

ಬೆಲೆ ಮಾಹಿತಿ: 3.95 ಲಕ್ಷ ರು.ಗಳಿಂದ 6.35 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)

ಮಾರುತಿ ಸುಜುಕಿ ಸೆಲೆರಿಯೊ

ಮಾರುತಿ ಸುಜುಕಿ ಸೆಲೆರಿಯೊ

ಇನ್ನು ನಗರ ಪ್ರದೇಶದಲ್ಲಿ ಓದುವ ಕಾಲೇಜು ವಿದ್ಯಾರ್ಥಿಗಳ ಸುಗಮ ಸಂಚಾರಕ್ಕಾಗಿ ಮಾರುತಿ ಸುಜುಕಿ ಸೆಲೆರಿಯೊ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಕಾರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ಟ್ರಾಫಿಕ್ ನಲ್ಲಿ ಪದೇ ಪದೇ ಕ್ಲಚ್ ಅದುಮುವ ತೊಂದರೆಯಿರುವುದಿಲ್ಲ.

ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

ಆಡಿಯೋ ಸಿಸ್ಟಂ, ಬ್ಲೂಟೂತ್ ಕನೆಕ್ಟಿವಿಟಿ ಜೊತೆಗೆ ಬೇಕಾದಷ್ಟು ಸ್ಥಳಾವಕಾಶವನ್ನು ಕಾಯ್ದುಕೊಂಡಿರುವ ಮಾರುತಿ ಸೆಲೆರಿಯೊ ವಿದ್ಯಾರ್ಥಿಯನಿರಿಗೆ ಹೆಚ್ಚು ಸೂಕ್ತವೆನಿಸಲಿದೆ. ಇದರ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳು ಪ್ರತಿ ಲೀಟರ್ ಗೆ 23.1 ಕೀ.ಮೀ. ಮೈಲೇಜ್ ಕಾಪಾಡಿಕೊಳ್ಳುತ್ತದೆ.

ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

ಮಾರುತಿ ಸೆಲೆರಿಯೊ ಸಹ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದರ 1.0 ಲೀಟರ್ ಕೆ10 ಪೆಟ್ರೋಲ್ ಎಂಜಿನ್ 90 ಎನ್ ಎಂ ತಿರುಗುಬಲದಲ್ಲಿ 67 ಅಶ್ವಶಕ್ತಿಯನ್ನು ಮತ್ತು 793 ಸಿಸಿ ಡಿಡಿಐಎಸ್ ಡೀಸೆಲ್ ಎಂಜಿನ್ 125 ಎನ್ ಎಂ ತಿರುಗುಬಲದಲ್ಲಿ 47 ಅಶ್ವಶಕ್ತಿಯನ್ನು ನೀಡಲಿದೆ.

ಬೆಲೆ ಮಾಹಿತಿ: 4.03 ಲಕ್ಷ ರು.ಗಳಿಂದ 5.90 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ದಟ್ಸನ್ ರೆಡಿ ಗೊ

ದಟ್ಸನ್ ರೆಡಿ ಗೊ

ಭಾರತಕ್ಕೆ ಮಾರುಕಟ್ಟೆಗೆ ಎಂಟ್ರಿ ಅತಿ ನೂತನ ಸಣ್ಣ ಕಾರುಗಳಲ್ಲಿ ದಟ್ಸನ್ ರೆಡಿ ಗೊ ಒಂದಾಗಿದೆ. ಇದು ನಿಮ್ಮ ಬಜೆಟ್ ಗೆ ಸೂಕ್ತವಾದ ಕಾರೆನಿಸಿಕೊಳ್ಳಲಿದೆ. ಕ್ರಾಸೋವರ್ ಶೈಲಿಯ ದಟ್ಸನ್ ರೆಡಿ ಗೊ ನಗರ ಪ್ರದೇಶದ ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತ ಆಯ್ಕೆಯಾಗಿರಲಿದೆ.

ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

ರೆನೊ ಕ್ವಿಡ್ ತಳಹದಿಯಲ್ಲಿ ನಿರ್ಮಾಣವಾಗಿರುವ ದಟ್ಸನ್ ರೆಡಿ ಗೊ ಪರಿಣಾಮಕಾರಿ ವಿನ್ಯಾಸ ಮೈಗೂಡಿಸಿಕೊಂಡಿದೆ. ಇದರಲ್ಲೂ ಕ್ವಿಡ್ ಗೆ ಸಮಾನವಾದ 800 ಸಿಸಿ ಎಂಜಿನ್ ಲಗತ್ತಿಸಲಾಗಿದ್ದು, 72 ಎನ್ ಎಂ ತಿರುಗುಬಲದಲ್ಲಿ 53 ಅಶ್ವಶಕ್ತಿಯನ್ನು ನೀಡಲಿದೆ. ಹಾಗೆಯೇ ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿದೆ.

ಬೆಲೆ ಮಾಹಿತಿ: 2.39 ಲಕ್ಷ ರು.ಗಳಿಂದ 3.55 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಫೋಕ್ಸ್ ವ್ಯಾಗನ್ ಪೊಲೊ

ಫೋಕ್ಸ್ ವ್ಯಾಗನ್ ಪೊಲೊ

ಕಾಲೇಜು ಜೀವನದಲ್ಲಿ ತುಂಟಾಟ ಜಾಸ್ತಿಯಿರುತ್ತದೆ. ಅದರಲ್ಲೂ ವಿಶೇಷವಾಗಿ ಯುವಕರು ತಮ್ಮ ಸ್ನೇಹಿತರ ಜೊತೆಗೂಡಿ ಮೋಜಿ ಮಸ್ತಿ ಮಾಡಲು ಬಯಸುತ್ತಾರೆ. ಅಂಥವರಿಗೆ ಫೋಕ್ಸ್ ವ್ಯಾಗನ್ ಪೊಲೊ ನಿರ್ವಹಣಾ ಕಾರು ಹೆಚ್ಚು ಸೂಕ್ತವೆನಿಸಲಿದೆ.

ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

ಡ್ಯುಯಲ್ ಬೀಮ್ ಹೆಡ್ ಲ್ಯಾಂಪ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಬದಿಯ ಗಾಜು, ಕ್ರೂಸ್ ಕಂಟ್ರೋಲ್, ಆಟೋ ರೈನ್ ಸೆನ್ಸಿಂಗ್ ವೈಪರ್, ಡ್ಯುಯಲ್ ಏರ್ ಬ್ಯಾಗ್ ಮತ್ತು ಎಬಿಎಸ್ ಗಳಂತಹ ವೈಶಿಷ್ಟ್ಯಗಳನ್ನು ಇದು ಪಡೆದಿದೆ.

ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

ಫೋಕ್ಸ್ ವ್ಯಾಗನ್ ಪೊಲೊದಲ್ಲಿರುವ 1.2 ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ 110 ಎನ್ ಎಂ ತಿರುಗುಬಲದಲ್ಲಿ 74 ಅಶ್ವಶಕ್ತಿಯನ್ನು ಮತ್ತು 1.5 ಲೀಟರ್ ಟಿಡಿಐ ಡೀಸೆಲ್ ಎಂಜಿನ್ 230 ಎನ್ ಎಂ ತಿರುಗುಬಲದಲ್ಲಿ 86 ಅಶ್ವಶಕ್ತಿಯನ್ನು ನೀಡಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಬೆಲೆ ಮಾಹಿತಿ: 5.46 ಲಕ್ಷ ರು.ಗಳಿಂದ 8.79 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಮಾರುತಿ ಸುಜುಕಿ ಬಲೆನೊ

ಮಾರುತಿ ಸುಜುಕಿ ಬಲೆನೊ

ಪ್ರೀಮಿಯಂ ಹ್ಯಾಚ್ ಬ್ಯಾಕ್ ಖರೀದಿಸುವಷ್ಟು ಆರ್ಥಿಕ ಸ್ಥಿತಿ ನಿಮ್ಮಲ್ಲಿದ್ದರೆ ಕಣ್ಣು ಮುಚ್ಚಿಕೊಂಡು ಮಾರುತಿ ಬಲೆನೊ ಕೊಂಡುಕೊಳ್ಳಬಹುದಾಗಿದೆ. ಈಗಾಗಲೇ ಬೆಲೆ, ವೈಶಿಷ್ಟ್ಯಗಳಲ್ಲಿ ಭಾರತೀಯ ಖರೀದಿಗಾರರಲ್ಲಿ ಪ್ರಭಾವ ಬೀರಿರುವ ಬಲೆನೊ ಅತಿ ಹೆಚ್ಚು ಬೇಡಿಕೆಯನ್ನು ಕಾಪಾಡಿಕೊಂಡಿದೆ.

ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

ಡ್ಯುಯಲ್ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಜೊತೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ನೇವಿಗೇಷನ್ ಸೌಲಭ್ಯಗಳನ್ನು ನೂತನ ಬಲೆನೊ ಹೊಂದಿದೆ.

ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

ಮಾರುತಿ ಬಲೆನೊದಲ್ಲಿರುವ 1.2 ಲೀಟರ್ ವಿವಿಟಿ ಎಂಜಿನ್ 115 ಎನ್ ಎಂ ತಿರುಗುಬಲದಲ್ಲಿ 83 ಅಶ್ವಶಕ್ತಿಯನ್ನು ಮತ್ತು 1.3 ಲೀಟರ್ ಡಿಡಿಐಎಸ್ ಎಂಜಿನ್ 190 ಎನ್ ಎಂ ತಿರುಗುಬಲದಲ್ಲಿ 74 ಅಶ್ವಶಕ್ತಿಯನ್ನು ನೀಡುತ್ತದೆ. ಈ ಪೈಕಿ ಪೆಟ್ರೋಲ್ ಆವೃತ್ತಿಯು ಐದು ಸ್ಪೀಡ್ ಮ್ಯಾನುವಲ್ ಹೊರತಾಗಿ ಸಿಟಿವಿ ಆಟೋ ಮ್ಯಾಟಿಕ್ ಗೇರ್ ಬಾಕ್ಸ್ ಸಹ ಹೊಂದಿದೆ.

ಬೆಲೆ ಮಾಹಿತಿ: 5.25 ಲಕ್ಷ ರು. ಗಳಿಂದ 8.36 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಸಬ್ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಇಕೊಸ್ಪೋರ್ಟ್ ಹೊಸ ಕ್ರಾಂತಿಯ ಅಲೆಯೆಬ್ಬಿಸಿತ್ತು. ಹೊಸತನವನ್ನು ಬಯಸುವ ಕಾಲೇಜು ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಗಾರಿಕೆಗಳನ್ನು ಒಳಗೊಂಡಿರುವ ಇಕೊಸ್ಪೋರ್ಟ್ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

ಹಿಲ್ ಲಾಂಚ್ ಅಸಿಸ್ಟ್, ಎಮರ್ಜನ್ಸಿ ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂಗಳಿಂದ ಕೂಡಿರುವ ಫೋರ್ಡ್ ಇಕೊಸ್ಪೋರ್ಟ್ ತಂತ್ರಜ್ಞಾನಗಳೊಂದಿಗೆ ಸಂಪನ್ನವಾಗಿದೆ.

ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

ಇನ್ನು ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, ರೈನ್ ಸೆನ್ಸಿಂಗ್ ವೈಪರ್, ಫೋರ್ಡ್ ಸಿಂಕ್ ಇತ್ಯಾದಿ ಸೌಲಭ್ಯಗಳನ್ನು ಪಡೆಯಲಿದೆ. ಇವೆಲ್ಲದರ ಜೊತೆಗೆ ಪ್ರಶಸ್ತಿ ವಿಜೇತ ಫೋರ್ಡ್ 1.0 ಲೀಟರ್ ಇಕೊಬೂಸ್ಟ್ ಎಂಜಿನ್ ಸಹ ಜೊತೆಗಿರಲಿದೆ.

ಕಾಲೇಜು ಲೈಫ್ ಎಂಜಾಯ್ ಮಾಡಲು ಈ ಕಾರುಗಳನ್ನು ಆಯ್ಕೆ ಮಾಡಿರಿ!

ಫೋರ್ಡ್ ಇಕೊಸ್ಪೋರ್ಟ್ 1.0 ಹಾಗೂ 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಗಳನ್ನು ಗಿಟ್ಟಿಸಿಕೊಳ್ಳಲಿದೆ. ಇದರ 1.0 ಲೀಟರ್ ಇಕೊಬೂಸ್ಟ್ ಎಂಜಿನ್ 170 ಎನ್ ಎಂ ತಿರುಗುಬಲದಲ್ಲಿ 123.3 ಅಶ್ವಶಕ್ತಿಯನ್ನು, 1.5 ಲೀಟರ್ ಪೆಟ್ರೋಲ್ ಎಂಜಿನ್ 140 ಎನ್ ಎಂ ತಿರುಗುಬಲದಲ್ಲಿ 110 ಅಶ್ವಕ್ತಿಯನ್ನು ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ 205 ಎನ್ ಎಂ ತಿರುಗುಬಲದಲ್ಲಿ 99 ಅಶ್ವಶಕ್ತಿಯನ್ನು ನೀಡಲಿದೆ.

ಬೆಲೆ ಮಾಹಿತಿ: 6.93 ಲಕ್ಷ ರು. ಗಳಿಂದ ಪ್ರಾರಂಭ (ಎಕ್ಸ್ ಶೋ ರೂಂ ದೆಹಲಿ)

ಅಂತಿಮ ತೀರ್ಪು

ಅಂತಿಮ ತೀರ್ಪು

ಪ್ರಸ್ತುತ ಪಟ್ಟಿಯಲ್ಲಿ ಬಜೆಟ್ ಕಾರುಗಳಿಂದ ಹಿಡಿದು ಕೈಗೆಟುಕುವ ಬೆಲೆಗಳಲ್ಲಿ ಅತ್ಯುತ್ತಮ ಕಾರುಗಳನ್ನು ಸೂಚಿಸಲಾಗಿದೆ. ಇಲ್ಲಿ ವೈಶಿಷ್ಟ್ಯಗಳಿಂದ ಹಿಡಿದು ನಿರ್ವಹಣೆ, ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಕಾಲೇಜ್ ನಲ್ಲಿ ಓದುವ ತಮ್ಮ ಮಕ್ಕಳಿಗೆ ಉಡುಗೊರೆ ನೀಡಲು ಬಯಸುವ ಅಪ್ಪಂದಿರು ಇಲ್ಲಿ ಕೊಟ್ಟಿರುವ ಅತ್ಯುತ್ತಮ ಕಾರುಗಳನ್ನು ಆಯ್ಕೆ ಮಾಡಬಹುದಾಗಿದೆ.

Most Read Articles

Kannada
Read more on ಕಾರು car
English summary
Best Four-Wheelers For College Students In India
Story first published: Tuesday, November 29, 2016, 14:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X