ಡ್ರೈವಿಂಗ್ ವೇಳೆ ಚಾಲಕ ಮೊಬೈಲ್ ಬಳಕೆಗೆ ಕಡಿವಾಣ

ಕ್ಯಾಲಿಫೋರ್ನಿಯಾದಲ್ಲಿ ಚಾಲನೆ ವೇಳೆ ಚಾಲಕ ಮೊಬೈಲ್ ಫೋನ್ ಬಳಕೆ ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ.

By Nagaraja

ಕಾರು ಚಾಲನೆ ವೇಳೆ ಚಾಲಕ ಮೊಬೈಲ್ ಫೋನ್ ಬಳಕೆ ಮಾಡುವುದು ಅತ್ಯಂತ ಅಪಾಯಕಾರಿಯಾಗಿದ್ದು, ದೊಡ್ಡ ಅನಾಹುತವೇ ಘಟಿಸುವ ಭೀತಿಯಿರುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕ್ಯಾಲಿಫೋರ್ನಿಯಾ ಡ್ರೈವಿಂಗ್ ವೇಳೆ ಚಾಲಕ ಮೊಬೈಲ್ ಫೋನ್ ಬಳಕೆ ಮಾಡುವುದಕ್ಕೆ ಕಡಿವಾಣ ಹಾಕಿದೆ.

ಡ್ರೈವಿಂಗ್ ವೇಳೆ ಚಾಲಕ ಮೊಬೈಲ್ ಬಳಕೆಗೆ ಕಡಿವಾಣ

ಸಾಮಾನ್ಯವಾಗಿ ಒಂದು ಕೈಯಲ್ಲಿ ಸ್ಟೀರಿಂಗ್ ವೀಲ್ ಹಿಡಿಯುವ ಚಾಲಕ ಮಗದೊಂದು ಕೈಯಲ್ಲಿ ಮೊಬೈಲ್ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುತ್ತಾನೆ.

ಡ್ರೈವಿಂಗ್ ವೇಳೆ ಚಾಲಕ ಮೊಬೈಲ್ ಬಳಕೆಗೆ ಕಡಿವಾಣ

ಇದರಿಂದ ಚಾಲನೆ ವೇಳೆ ಚಾಲಕನ ಏಕಾಗ್ರತೆಗೆ ಭಂಗವನ್ನುಂಟು ಮಾಡಲಿದ್ದು, ಅನೇಕ ಬಾರಿ ಅಪಘಾತಗಳು ಘಟಿಸಿ ಹೋಗಿವೆ.

ಡ್ರೈವಿಂಗ್ ವೇಳೆ ಚಾಲಕ ಮೊಬೈಲ್ ಬಳಕೆಗೆ ಕಡಿವಾಣ

ಇವೆಲ್ಲದಕ್ಕೂ ಕಡಿವಾಣ ಹಾಕಲು ಹೊರಟಿರುವ ಕ್ಯಾಲಿಫೋರ್ನಿಯಾ, ಚಾಲಕ ಸೀಟಿನಲ್ಲಿ ಕುಳಿತುಕೊಂಡು ಗಾಡಿ ಚಾಲನೆ ಮಾಡುವ ಚಾಲಕ ಮೊಬೈಲ್ ಫೋನ್ ಬಳಕೆ ಮಾಡುವುದು ಕಾನೂನು ವಿರುದ್ಧವಾಗಿರುತ್ತದೆ ಎಂದಿದೆ.

ಡ್ರೈವಿಂಗ್ ವೇಳೆ ಚಾಲಕ ಮೊಬೈಲ್ ಬಳಕೆಗೆ ಕಡಿವಾಣ

ಈ ನೂತನ ಮಸೂದೆಗೆ ಕ್ಯಾಲಿಫೋರ್ನಿಯಾ ಗವರ್ನರ್ ಜೆರ್ರಿ ಬ್ರೌನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಡ್ರೈವಿಂಗ್ ವೇಳೆ ಚಾಲಕ ಮೊಬೈಲ್ ಬಳಕೆಗೆ ಕಡಿವಾಣ

ಇನ್ನು ಕ್ಯಾಲಿಫೋರ್ನಿಯಾದಲ್ಲಿ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡುವ ಏಕೈಕ ಮಾರ್ಗವೆಂದರೆ ಬ್ಲೂಟೂತ್ ಹೆಡ್ ಸೆಟ್ ಅಥವಾ ಬ್ಲೂಟೂತ್ ಸಂಪರ್ಕಿತ ಇನ್ಪೋಟೈನ್ಮೆಂಟ್ ಸಿಸ್ಟಂ ಬಳಕೆ ಮಾಡಬೇಕಿದೆ.

ಡ್ರೈವಿಂಗ್ ವೇಳೆ ಚಾಲಕ ಮೊಬೈಲ್ ಬಳಕೆಗೆ ಕಡಿವಾಣ

ಅಷ್ಟೇ ಯಾಕೆ ಮೊಬೈಲ್ ಸಂಭಾಷಣೆಯ ಹೊರತಾಗಿ ಮೊಬೈಲ್ ಫೋನ್ ನಲ್ಲಿ ಸಂಗೀತ ಆಲಿಸುವುದು ಅಥವಾ ಜಿಪಿಎಸ್ ನೇವಿಗೇಷನ್ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ.

ಡ್ರೈವಿಂಗ್ ವೇಳೆ ಚಾಲಕ ಮೊಬೈಲ್ ಬಳಕೆಗೆ ಕಡಿವಾಣ

ಇಲ್ಲಿ ಗಮನಾರ್ಹ ಅಂಶವೆಂದರೆ ಆಧುನಿಕ ಕಾರುಗಳೆಲ್ಲ ಮೊಬೈಲ್ ಸಂಪರ್ಕಿತ ಇನ್ಪೋಟೈನ್ಮೆಂಟ್ ಸಿಸ್ಟಂ ಸೇವೆಯನ್ನು ನೀಡುತ್ತದೆ.

ಡ್ರೈವಿಂಗ್ ವೇಳೆ ಚಾಲಕ ಮೊಬೈಲ್ ಬಳಕೆಗೆ ಕಡಿವಾಣ

ಹಾಗಿದ್ದರೂ ಮೊಬೈಲ್ ಹೋಲ್ಡರ್ ಗಳಲ್ಲಿ ಮೊಬೈಲ್ ಗಳನ್ನಿಡುವ ಮೂಲಕ ಈ ನಿಯಮದಿಂದ ವಿನಾಯಿತಿ ಗಿಟ್ಟಿಸಿಕೊಳ್ಳಬಹುದಾಗಿದೆ. ಆದರೆ ವಿಡಿಯೋ ಪ್ಲೇ ಮಾಡುವುದು ಅಥವಾ ಚಿತ್ರ ಸೆರೆ ಹಿಡಿಯುವುದು ಕಾನೂನು ಬಾಹಿರವಾಗಿರುತ್ತದೆ.

ಡ್ರೈವಿಂಗ್ ವೇಳೆ ಚಾಲಕ ಮೊಬೈಲ್ ಬಳಕೆಗೆ ಕಡಿವಾಣ

ನೂತನ ನಿಯಮವು ಕ್ಯಾಲಿಫೋರ್ನಿಯಾದಲ್ಲಿ 2017 ಜನವರಿ 01ರಂದು ಜಾರಿಗೆ ಬರಲಿದ್ದು, ಮತ್ತಷ್ಟು ಪರಿಷ್ಕರಣೆಯನ್ನು ತರುವ ಉದ್ದೇಶವನ್ನಿಟ್ಟುಕೊಳ್ಳಲಾಗಿದೆ.

ಡ್ರೈವಿಂಗ್ ವೇಳೆ ಚಾಲಕ ಮೊಬೈಲ್ ಬಳಕೆಗೆ ಕಡಿವಾಣ

ಭಾರತದಲ್ಲೂ ಇಂತಹದೊಂದು ನಿಯಮ ಜಾರಿಗೆ ಬರಬೇಕೇ? ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಕೆಳಗಡೆ ಕೊಟ್ಟಿರುವ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಮುಕ್ತವಾಗಿ ಚರ್ಚಿಸಿರಿ.

Most Read Articles

Kannada
Read more on ಅಪಘಾತ accident
English summary
California Bans Use Of Cellphone While Driving; To Be Effective From January 2017
Story first published: Tuesday, December 20, 2016, 10:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X