2017ರಲ್ಲಿ ಬೆಲೆ ಏರಿಕೆಯ ಜೊತೆಗೆ ನೂತನ ಕಾರು ಬಿಡುಗಡೆ ಮಾಡಲಿರುವ ಷೆವರ್ಲೆ

2017ನೇ ಸಾಲಿನಿಂದ ಷೆವರ್ಲೆ ಕಾರುಗಳು ಮತ್ತಷ್ಟು ದುಬಾರಿಯೆನಿಸಲಿದೆ.

By Nagaraja

ದೇಶದಲ್ಲಿರುವ ತನ್ನೆಲ್ಲ ಶ್ರೇಣಿಯ ಕಾರುಗಳಿಗೆ ಬೆಲೆ ಏರಿಕೆಗೊಳಿಸಲು ಅಮೆರಿಕ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಜನರಲ್ ಮೋಟಾರ್ಸ್ ಭಾಗವಾಗಿರುವ ಷೆವರ್ಲೆ ನಿರ್ಧರಿಸಿದೆ.

2017ರಲ್ಲಿ ಬೆಲೆ ಏರಿಕೆಯ ಜೊತೆಗೆ ನೂತನ ಕಾರು ಬಿಡುಗಡೆ ಮಾಡಲಿರುವ ಷೆವರ್ಲೆ

ಭಾರತದಲ್ಲಿರುವ ಷೆವರ್ಲೆ ಶ್ರೇಣಿಯ ಕಾರುಗಳಿಗೆ ಅಂದಾಜು 30,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಲಾಗುವುದು.

2017ರಲ್ಲಿ ಬೆಲೆ ಏರಿಕೆಯ ಜೊತೆಗೆ ನೂತನ ಕಾರು ಬಿಡುಗಡೆ ಮಾಡಲಿರುವ ಷೆವರ್ಲೆ

ಮಾದರಿಗೆ ಅನ್ವಯವಾಗಿ ಶೇಕಡಾ 1ರಿಂದ 3ರಷ್ಟು ಬೆಲೆ ಏರಿಕೆಗೊಳಿಸಲು ಷೆವರ್ಲೆ ನಿರ್ಧರಿಸಿದೆ. ನೂತನ ಬೆಲೆಯು 2017 ಜನವರಿ ತಿಂಗಳಿಂದ ಜಾರಿಗೆ ಬರಲಿದೆ.

2017ರಲ್ಲಿ ಬೆಲೆ ಏರಿಕೆಯ ಜೊತೆಗೆ ನೂತನ ಕಾರು ಬಿಡುಗಡೆ ಮಾಡಲಿರುವ ಷೆವರ್ಲೆ

ಸದ್ಯ ಈ ವರ್ಷಾಂತ್ಯದ ಡಿಸೆಂಬರ್ ವೇಳೆಯಲ್ಲಿ ಷೆವರ್ಲೆ ತನ್ನೆಲ್ಲ ಮಾದರಿಗಳಿಗೆ ವಿಶೇಷ ಆಫರುಗಳನ್ನು ನೀಡುತ್ತಿದೆ. ತನ್ಮೂಲಕ ಗರಿಷ್ಠ ಮಾರಾಟವನ್ನು ಗುರಿಯಿರಿಸಿಕೊಂಡಿದೆ.

2017ರಲ್ಲಿ ಬೆಲೆ ಏರಿಕೆಯ ಜೊತೆಗೆ ನೂತನ ಕಾರು ಬಿಡುಗಡೆ ಮಾಡಲಿರುವ ಷೆವರ್ಲೆ

ವಿದೇಶಿ ವಿನಿಮಯ ದರ ಹೆಚ್ಚಳ, ಗರಿಷ್ಠ ಹಣದುಬ್ಬರ ವೆಚ್ಚ, ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬೆಲೆ ಏರಿಕೆ ಅನಿವಾರ್ಯವೆನಿಸಿದೆ ಎಂದು ಷೆವರ್ಲೆ ತಿಳಿಸಿದೆ.

2017ರಲ್ಲಿ ಬೆಲೆ ಏರಿಕೆಯ ಜೊತೆಗೆ ನೂತನ ಕಾರು ಬಿಡುಗಡೆ ಮಾಡಲಿರುವ ಷೆವರ್ಲೆ

2016ನೇ ಸಾಲಿನಲ್ಲಿ ಷೆವರ್ಲೆ ದೇಶದಲ್ಲಿ ಕಾರನ್ನು ಬಿಡುಗಡೆಗೊಳಿಸಿಲ್ಲ. 2015ನೇ ಸಾಲಿನಲ್ಲಿ ಕೊನೆಯದಾಗಿ ಟ್ರೈಲ್ ಬ್ಲೇಜರ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆಗೊಳಿಸಿತ್ತು.

2017ರಲ್ಲಿ ಬೆಲೆ ಏರಿಕೆಯ ಜೊತೆಗೆ ನೂತನ ಕಾರು ಬಿಡುಗಡೆ ಮಾಡಲಿರುವ ಷೆವರ್ಲೆ

ಪ್ರಸ್ತುತ ಟ್ರೈಲ್ ಬ್ಲೇಜರ್ ಫೇಸ್ ಲಿಫ್ಟ್ ಬಿಡುಗಡೆ ಮಾಡುವ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಇದು 2017ನೇ ಸಾಲಿನಲ್ಲಿ ದೇಶವನ್ನು ಪ್ರವೇಶಿಸಲಿದೆ.

2017ರಲ್ಲಿ ಬೆಲೆ ಏರಿಕೆಯ ಜೊತೆಗೆ ನೂತನ ಕಾರು ಬಿಡುಗಡೆ ಮಾಡಲಿರುವ ಷೆವರ್ಲೆ

ಅದೇ ಹೊತ್ತಿಗೆ ಸ್ಪಿನ್ ಬಹು ಬಳಕೆಯ ವಾಹನವನ್ನು 2017ನೇ ಸಾಲಿನಲ್ಲೇ ಜನರಲ್ ಮೋಟಾರ್ಸ್ ಬಿಡುಗಡೆ ಮಾಡಲಿದೆ. ಇದು ಷೆವರ್ಲೆ ಎಂಜಾಯ್ ಸ್ಥಾನವನ್ನು ತುಂಬಲಿದೆ.

2017ರಲ್ಲಿ ಬೆಲೆ ಏರಿಕೆಯ ಜೊತೆಗೆ ನೂತನ ಕಾರು ಬಿಡುಗಡೆ ಮಾಡಲಿರುವ ಷೆವರ್ಲೆ

ಏತನ್ಮಧ್ಯೆ ಬೀಟ್ ಆಕ್ಟಿವ್ ಕಾನ್ಸೆಪ್ಟ್ ಕಾರಿನ ತಳಹದಿಯಲ್ಲಿ ನೂತನ ಆಫ್ ರೋಡರ್ ಕಾರನ್ನು ಬಿಡುಗಡೆ ಮಾಡುವ ಯೋಜನೆಯನ್ನು ಷೆವರ್ಲೆ ಹೊಂದಿದೆ. ಇದು 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದು.

2017ರಲ್ಲಿ ಬೆಲೆ ಏರಿಕೆಯ ಜೊತೆಗೆ ನೂತನ ಕಾರು ಬಿಡುಗಡೆ ಮಾಡಲಿರುವ ಷೆವರ್ಲೆ

ಮುಂದಿನ ತಲೆಮಾರಿನ ಬೀಟ್ ಆಕ್ಟಿವ್ ಕಾನ್ಸೆಪ್ಟ್ ಕಾರಿನಿಂದ ಸ್ಪೂರ್ತಿ ಪಡೆಯಲಿರುವ ಹೊಸ ಷೆವರ್ಲೆ ಬೀಟ್, ಈಗಾಗಲೇ ಭಾರತೀಯ ರಸ್ತೆಯಲ್ಲಿ ಟೆಸ್ಟಿಂಗ್ ಹಮ್ಮಿಕೊಂಡಿದ್ದು, ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
Chevrolet To Hike Prices Across Range From January 2017
Story first published: Wednesday, December 21, 2016, 18:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X