ಫಿಯೆಟ್ ಕಾರುಗಳಿಗೆ 85,000 ರು.ಗಳ ಬೊಂಬಾಟ್ ಆಫರ್

By Nagaraja

ಇಟಲಿಯ ಐಕಾನಿಕ್ ಫಿಯೆಟ್ ಕಾರು ಖರೀದಿ ಮಾಡುವ ಯೋಚನೆ ನಿಮ್ಮಲ್ಲಿದೆಯೇ ? ಇದೇ ಸದಾವಕಾಶವಾಗಿದ್ದು, ನಿಮ್ಮ ನೆಚ್ಚಿನ ಫಿಯೆಟ್ ಕಾರುಗಳನ್ನು ಈ ಕೂಡಲೇ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಫಿಯೆಟ್ ಕಾರುಗಳಿಗೆ ಭಾರಿ ಆಫರ್ ನೀಡಲಾಗುತ್ತಿದ್ದು, 85,000 ರು.ಗಳ ವರೆಗಿನ ಪ್ರಯೋಜನ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಭಾರತದಲ್ಲಿ ಮಾರಾಟದಲ್ಲಿರುವ ಜನಪ್ರಿಯ ಫಿಯೆಟ್ ಮಾದರಿಗಳಿಗೆ ಆಫರುಗಳನ್ನು ನೀಡಲಾಗುತ್ತಿದೆ. ಯಾವೆಲ್ಲ ಮಾದರಿಗಳಿಗೆ ಎಷ್ಟೆಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ ಎಂಬುದನ್ನು ತಿಳಿಯಲು ಸಂಪೂರ್ಣ ಲೇಖನವನ್ನು ಓದಲು ಮರೆಯದಿರಿ...

ಪುಂಟೊ ಇವೊ ಹ್ಯಾಚ್ ಬ್ಯಾಕ್

ಪುಂಟೊ ಇವೊ ಹ್ಯಾಚ್ ಬ್ಯಾಕ್

ಪುಂಟೊ ಇವೊ ಹ್ಯಾಚ್ ಬ್ಯಾಕ್ ಕಾರನ್ನು ಆಕರ್ಷಕ 5.86 ಲಕ್ಷ ರುಪಾಯಿಗಳಲ್ಲಿ (ದೆಹಲಿ ಎಕ್ಸ್ ಶೋ ರೂಂ) ನೀಡಲಾಗುತ್ತಿದೆ. ತನ್ಮೂಲಕ 70,000 ರು.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ. ಗ್ರಾಹಕರು ಆಕ್ಸೆಸರಿ ಹಾಗೂ ಎಕ್ಸ್ ಚೇಂಜ್ ಪ್ರಯೋಜನಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.

ಅವೆಂಚ್ಯುರಾ ಕ್ರಾಸೋವರ್

ಅವೆಂಚ್ಯುರಾ ಕ್ರಾಸೋವರ್

ಇದೀಗ ಫಿಯೆಟ್ ಅವೆಂಚ್ಯುರಾ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 7.87 ಲಕ್ಷ ರುಪಾಯಿಗಳಿಗೆ ಲಭ್ಯವಾಗಲಿದೆ. ಈ ಮನಮೋಹಕ ಕ್ರಾಸೋವರ್ ಖರೀದಿ ವೇಳೆಯಲ್ಲೂ ಗ್ರಾಹಕರು 70,000 ರು.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ. ಇದರಲ್ಲಿ ಎಕ್ಸ್ ಚೇಂಚ್, ಲಾಯಲ್ಟಿ ಆಫರುಗಳು ಸೇರಿರಲಿದೆ.

ಲಿನಿಯಾ ಸೆಡಾನ್

ಲಿನಿಯಾ ಸೆಡಾನ್

ಅತ್ತ ಲಿನಿಯಾ ಸೆಡಾನ್ ಕಾರು ಖರೀದಿ ವೇಳೆಯಲ್ಲಿ ಗರಿಷ್ಠ 85,000 ರುಪಾಯಿಗಳ ವರೆಗೂ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ. ಫಿಯೆಟ್ ಲಿನಿಯಾ ಸೆಡಾನ್ ಕಾರೀಗ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 7.82 ಲಕ್ಷ ರು.ಗಳಿಗೆ ಗ್ರಾಹಕರನ್ನು ತಲುಪಲಿದೆ.

ಲಿನಿಯಾ ಕ್ಲಾಸಿಕ್

ಲಿನಿಯಾ ಕ್ಲಾಸಿಕ್

ಫಿಯೆಟ್ ಸಾಲಿನ ನಾಲ್ಕನೇ ಮಾದರಿಯಾಗಿರುವ ಲಿನಿಯಾ ಕ್ಲಾಸಿಕ್ ಖರೀದಿಯಲ್ಲೂ ಗ್ರಾಹಕರು ಗರಿಷ್ಠ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದು ದೆಹಲಿ ಎಕ್ಸ್ ಶೋ ರೂಂ ಬೆಲೆ 6.46 ಲಕ್ಷ ರು.ಗಳಲ್ಲಿ ಮಾರಾಟವಾಗಲಿದೆ.

ಫಿಯೆಟ್ ಕಾರುಗಳಿಗೆ 85,000 ರು.ಗಳ ಬೊಂಬಾಟ್ ಆಫರ್

ಈ ಎಲ್ಲ ಆಫರ್ ಗಳು ಸ್ಟೋಕ್ ಮುಗಿಯವ ವರೆಗೂ ಅನ್ವಯವಾಗಲಿದೆ. ಹಾಗಾಗಿ ಕಾರು ಪ್ರೇಮಿಗಳು ಆದಷ್ಟು ಬೇಗನೇ ನಿಮ್ಮ ನಿಕಟ ಫಿಯೆಟ್ ಡೀಲರ್ ಶಿಪ್ ಗಳಿಗೆ ಭೇಟಿ ನೀಡಿರಿ.

Article Published On: Saturday, September 10, 2016, 17:07 [IST]
English summary
Fiat Offering Benefits Up To Rs. 85,000 Across India During September
Read more on ಫಿಯೆಟ್ fiat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+