ಪೆಟ್ರೋಲ್-ಡೀಸೆಲ್ ಬದಲಿಯಾಗಿ ಎಲೆಕ್ಟ್ರಿಕ್ ಕಾರುಗಳನ್ನು ಏಕೆ ಖರೀದಿಸಬೇಕು?

By Nagaraja

ಸುಸ್ಥಿರ ಭವಿಷ್ಯದ ನಿಟ್ಟಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಚಾಲಿತ ವಾಹನಗಳ ಬದಲಿಯಾಗಿ ಪರ್ಯಾಯ ವಾಹಕವನ್ನು ಹುಡುಕಿಕೊಳ್ಳುವುದು ಅನಿವಾರ್ಯವೆನಿಸಿಕೊಂಡಿದೆ. ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ಕಾರುಗಳು ಹೆಚ್ಚು ಜನಪ್ರಿಯತೆಗೆ ಪಾತ್ರವಾಗುತ್ತಿದೆ.

ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಕಾರುಗಳ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ಸಾಕಷ್ಟು ಸವಾಲುಗಳು ಇದ್ದರೂ ಜಗತ್ತಿನ ಮುಂಚೂಣಿಯ ಸಂಸ್ಧೆಗಳು ಇದಕ್ಕೆ ಒಗ್ಗಿಕೊಳ್ಳುತ್ತಿರುವುದು ಶುಭ ಸಂದೇಶವಾಗಿದೆ. ಇದರೊಂದಿಗೆ ಪರಿಸರ ಸ್ನೇಹಿ ಕಾರುಗಳ ಭವಿಷ್ಯ ಉಜ್ವಲವಾಗಿ ಗೋಚರಿಸುತ್ತಿದೆ.

01. ಮಾಲಿನ್ಯ ರಹಿತ ಕಾರು

01. ಮಾಲಿನ್ಯ ರಹಿತ ಕಾರು

ಎಲೆಕ್ಟ್ರಿಕ್ ಕಾರುಗಳಿಂದ ಆಗಮನದೊಂದಿಗೆ ಪರಿಸರ ಮಾಲಿನ್ಯದ ತೊಂದರೆ ತಪ್ಪಲಿದೆ. ವಾಹನಗಳಿಂದ ಹೊರ ಸೂಸುವ ವಿಷಕಾರಿ ಕಾರ್ಬನ್ ಡೈ ಓಕ್ಸೆಡ್ ಹೊಗೆ ಓಝೋನ್ ವಲಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದ ಜಾಗತಿಕ ತಾಪಮಾನ ಮಟ್ಟದಲ್ಲಿ ವಿಪರೀತ ಬದಲಾವಣೆಯಾಗುತ್ತಿದೆ. ಇವೆಲ್ಲವೂ ಹಮಾಮಾನದ ಮೇಲೆ ನೇರ ಪರಿಣಾಮವನ್ನುಂಟು ಮಾಡುತ್ತಿದೆ.

02. ಕಡಿಮೆ ನಿರ್ವಹಣಾ ವೆಚ್ಚ

02. ಕಡಿಮೆ ನಿರ್ವಹಣಾ ವೆಚ್ಚ

ಇಂಧನ ಚಾಲಿತ ಕಾರುಗಳ ಹಾಗೆಯೇ ಯಾವುದೇ ರೀತಿ ತೈಲ, ಸ್ಪಾರ್ಕ್ ಪ್ಲಗ್ ಬದಲಾವಣೆ ಅಥವಾ ಸರ್ವೀಸ್ ಕಿರಿಕಿರಿ ವಿದ್ಯುತ್ ಕಾರುಗಳಿಗೆ ಇರುವುದಿಲ್ಲ. ಎಲೆಕ್ಟ್ರಿಕ್ ವಾಹನಗಳು ರಿಜನರೇಟಿವ್ ಬ್ರೇಕಿಂಗ್ ವ್ಯವಸ್ಥೆಯವನ್ನು ಹೊಂದಿದೆ. ಇದರಿಂದಾಗಿ ಸಂಚರಿಸುವ ವೇಳೆ ಉಂಟಾಗುವ ಶಕ್ತಿಯ ಸಂಪೂರ್ಣ ಮರು ಬಳಕೆ ಮಾಡಲಾಗುತ್ತದೆ.

03. ಶಬ್ದ ಮಾಲಿನ್ಯವಿಲ್ಲ

03. ಶಬ್ದ ಮಾಲಿನ್ಯವಿಲ್ಲ

ವಿದ್ಯುತ್ ಕಾರುಗಳನ್ನು ನಿಶಬ್ದ ಕಾರುಗಳೆಂದು ವಿಶ್ಲೇಷಿಸಲಾಗುತ್ತದೆ. ತಾರತಮ್ಯ ಮಾಡಿದಾಗ ವಿದ್ಯುತ್ ಕಾರುಗಳು ಸ್ವಲ್ಪ ಕಡಿಮೆ ಶಕ್ತಿಶಾಲಿ ಎನಿಸಿಕೊಂಡರೂ ಶಬ್ದ ಮಾಲಿನ್ಯವನ್ನು ತಡೆಯುವುದರಲ್ಲಿ ದೊಡ್ಡ ಹೆಜ್ಜೆಯನ್ನೇ ಇಟ್ಟಿದೆ.

04. ಸರಕಾರದಿಂದ ಸಬ್ಸಿಡಿ

04. ಸರಕಾರದಿಂದ ಸಬ್ಸಿಡಿ

ವಿದ್ಯುತ್ ಕಾರುಗಳ ನಿರ್ಮಾಣ ದುಬಾರಿಯಾಗಿರುವುದರಿಂದ ಸರಕಾರ ಸಬ್ಸಿಡಿ ನೀಡುತ್ತಿದೆ. ಇದು ವಾಹನ ಸಂಸ್ಥೆಗಳಿಗೆ ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡಲು ಸಹಕಾರಿಯಾಗಿದೆ. ಕೇಂದ್ರ ಸರಕಾರವು ಹೈಬ್ರಿಡ್ ಮತ್ತು ಎಳೆಕ್ಟ್ರಿಕ್ ವಾಹನಗಳಿಗೆ ವೇಗವಾಗಿ ಒಗ್ಗಿಕೊಳ್ಳುವ ಹಾಗೂ ನಿರ್ಮಿಸುವ ನಿಟ್ಟಿನಲ್ಲಿ ಫೇಮ್ ಯೋಜನೆಯಡಿಯಲ್ಲಿ ನೆರವನ್ನು ನೀಡುತ್ತದೆ.

05. ವಿದೇಶಿ ಕರೆನ್ಸಿ ವಿನಿಮಯ ಬಾಧಕವಲ್ಲ

05. ವಿದೇಶಿ ಕರೆನ್ಸಿ ವಿನಿಮಯ ಬಾಧಕವಲ್ಲ

ಇಂಧನಗಳಲ್ಲಿ ಉಂಟಾಗುವ ಬೆಲೆ ವ್ಯತ್ಯಾಸವು ನೇರವಾಗಿ ವಿದೇಶಿ ಕರೆನ್ಸಿ ವಿನಿಮಯದ ಬೆಲೆ ಪರಿಣಾಮ ಬೀರುತ್ತದೆ. ಇದರಿಂದ ವಾಹನಗಳ ಬೆಲೆಗಳಲ್ಲಿ ಏರಿಳಿತವುಂಟಾಗುತ್ತದೆ. ಆದರೆ ವಿದ್ಯುತ್ ಚಾಲಿತ ಕಾರುಗಳ ಆಯ್ಕೆಯೊಂದಿಗೆ ಇಂತಹ ಯಾವುದೇ ತರಹದೇ ತೊಂದರೆಯು ಕಾಡುವ ಭಯ ಇರುವುದಿಲ್ಲ.

ಅವಲೋಕನ

ಅವಲೋಕನ

ವಿಶ್ವದೆಲ್ಲೆಡೆ ಪೆಟ್ರೋಲ್ ಹಾಗೂ ಡೀಸೆಲ್ ಇಂಧನ ಚಾಲಿತ ವಾಹನಗಳಿಗೆ ಪರ್ಯಾಯ ಶಕ್ತಿಮೂಲಗಳ ಹುಡುಕಾಟದಲ್ಲಿ ವಿದ್ಯುತ್ ಚಾಲಿತ ವಾಹನಗಳು ಮುಂಚೂಣಿಯಲ್ಲಿದೆ. ಮುಂದಿನ ತಲೆಮಾರಿನ ಸುಸ್ಥಿರ ಭವಿಷ್ಯದ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಗಾಗಿ ಮೂಲ ಸೌಕರ್ಯಗಳ ಅಭಿವೃದ್ಧಿ ಅತ್ಯಗತ್ಯವಾಗಿದೆ. ಉದಾಹರಣೆಗೆ ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್ ಗಳನ್ನು ಲಗತ್ತಿಸುವುದು ಹೀಗೆ ಎಲ್ಲ ಎಲ್ಲ ಹಂತದಲ್ಲೂ ಸರಕಾರ ಯೋಜಿತ ಕಾರ್ಯ ಯೋಜನೆ ಅನುಷ್ಠಾನಗೊಳಿಸಬೇಕಿದೆ.

Article Published On: Friday, September 30, 2016, 12:21 [IST]
English summary
Interested In An Electric Car? Here Are 5 Advantages Over Petrol & Diesel Cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+