ಹೋಂಡಾ ಅಕಾರ್ಡ್ ಹೈಬ್ರಿಡ್ ಕಾರು ಭಾರತಕ್ಕೆ

By Nagaraja

ಜಪಾನ್ ಮೂಲದ ಮುಂಚೂಣಿಯ ವಾಹನ ಸಂಸ್ಥೆ ಹೋಂಡಾ, ಅತಿ ಶೀಘ್ರದಲ್ಲೇ ತನ್ನ ಜನಪ್ರಿಯ ಅಕಾರ್ಡ್ ಹೈಬ್ರಿಡ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಭಾರತದಲ್ಲಿ ಹೈಬ್ರಿಡ್ ಕಾರುಗಳು ನಿಧಾನವಾಗಿ ಜನಪ್ರಿಯತೆ ಸಾಧಿಸುತ್ತಿರುವುದರಿಂದ ನೂತನ ಅಕಾರ್ಡ್ ಗರಿಷ್ಠ ಮಾರಾಟವನ್ನು ಗುರಿ ಮಾಡಲಿದೆ.

ದೇಶದೆಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡುತ್ತಿರುವಂತೆಯೇ ನೂತನ ಹೋಂಡಾ ಅಕಾರ್ಡ್ ಪ್ರವೇಶವು ವಾಹನ ಪ್ರೇಮಿಗಳ ಕುತೂಹಲವು ಇಮ್ಮಡಿಗೊಂಡಿದೆ.

ಹೋಂಡಾ ಅಕಾರ್ಡ್ ಹೈಬ್ರಿಡ್


ಪ್ರೀಮಿಯಂ ಸೌಲಭ್ಯಗಳುಳ್ಳ ಸಂಪೂರ್ಣ ಕಾರ್ಯನಿರ್ವಾಹಕ ಸೆಡಾನ್ ಕಾರಾಗಿರುವ ಅಕಾರ್ಡ್ ಹೈಬ್ರಿಡ್ ಕಾರಿಗೆ ಭಾರತ ಸರಕಾರದ ವೇಗವಾಗಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ನಿರ್ಮಾಣಕ್ಕೆ ಒಗ್ಗಿಕೊಳ್ಳುವ ಯೋಜನೆ ಮುಖಾಂತರ ಸಬ್ಸಿಡಿ ದೊರಕುವ ನಿರೀಕ್ಷೆಯಿದ್ದು, ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ.

ದೀಪಾವಳಿ ವೇಳೆಯಲ್ಲಿ ಅಂದರೆ ಅಕ್ಟೋಬರ್ ತಿಂಗಳಲ್ಲಿ ಹೋಂಡಾ ಅಕಾರ್ಡ್ ಬಿಡುಗಡೆಯಾಗಲಿದೆ. ಇದರಂತೆ ಡೀಲರುಗಳ ಬಳಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಇದಕ್ಕಾಗಿ ಮುಂಗಡವಾಗಿ 51,000 ರುಪಾಯಿಗಳನ್ನು ಪಾವತಿಸಬೇಕಿದೆ.

ಹೋಂಡಾ ಅಕಾರ್ಡ್ ಕಾರಿನಡಿಯಲ್ಲಿ 2.0 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟಾರು ಜೋಡಣೆಯಾಗಲಿದೆ. ಇವೆರಡು ಸಂಯುಕ್ತವಾಗಿ 215 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದರ ಫಲವಾಗಿ ಪ್ರತಿ ಲೀಟರ್ ಗೆ 20 ಕೀ.ಮೀ. ಮೈಲೇಜ್ ಕಾಪಾಡಿಕೊಳ್ಳಲಿದೆ.

ಈ ವಿಭಾಗದಲ್ಲಿ ಟೊಯೊಟಾ ಕ್ಯಾಮ್ರಿ ಮತ್ತು ಸ್ಕೋಡಾ ಸೂಪರ್ಬ್ ಮಾದರಿಗಳಿಂದ ನಿಕಟ ಪೈಪೋಟಿ ಎದುರಾಗಲಿರುವುದರಿಂದ ಹೋಂಡಾ ಅಕಾರ್ಡ್ ಪಾಲಿಗೆ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವುದು ಅನಿವಾರ್ಯವೆನಿಸುತ್ತದೆ.

ಅಂದ ಹಾಗೆ ನೂತನ ಹೋಂಡಾ ಅಕಾರ್ಡ್ ಭಾರತ ಮಾರುಕಟ್ಟೆಯಲ್ಲಿ 25ರಿಂದ 30 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ. ಇದು ದೇಶದಲ್ಲಿ ಪೆಟ್ರೋಲ್ ಹೈಬ್ರಿಡ್ ಅವತಾರದಲ್ಲಿ ಮಾತ್ರ ಲಭ್ಯವಾಗಲಿದೆ.

Article Published On: Saturday, September 24, 2016, 13:18 [IST]
English summary
Honda To Launch New Accord Next Month In India
Read more on ಹೋಂಡಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+