ಶೀಘ್ರದಲ್ಲೇ ಬ್ರಿಯೊ ಬಿಡುಗಡೆ; ಶೋ ರೂಂ ತಲುಪಿದ ನೂತನ ಕಾರು

By Nagaraja

ಕಳೆದ ಕೆಲವು ಸಮಯಗಳಿಂದ ಸುದ್ದಿಯಲ್ಲಿರುವ ಪರಿಷ್ಕೃತ ಹೋಂಡಾ ಬ್ರಿಯೊ ಸಣ್ಣ ಕಾರಿನ ಬಿಡುಗಡೆಗೆ ಕಾಲ ಸನ್ನಿಹಿತವಾಗಿದೆ. ಇದಕ್ಕೆ ಪೂರಕವೆಂಬಂತೆ ಜಪಾನ್ ಮೂಲದ ಹೋಂಡಾ ಸಂಸ್ಥೆಯಿಂದ ನಿರ್ಮಿತ ನೂತನ ಹೋಂಡಾ ಬ್ರಿಯೊ ಶೋ ರೂಂಗಳಲ್ಲಿ ಪ್ರತ್ಯಕ್ಷಗೊಂಡಿದೆ.

ಪ್ರಮುಖವಾಗಿಯೂ ಕಾರಿನ ಅಂದತೆಯಲ್ಲಿ ಬದಲಾವಣೆಗಳು ಕಂಡುಬಂದಿದೆ. ಇದೇ ಹಬ್ಬದ ಆವೃತ್ತಿಯಲ್ಲಿ ಹೋಂಡಾ ಬ್ರಿಯೊ ಬಿಡುಗಡೆಗೊಳ್ಳಲಿದ್ದು, ಸಣ್ಣ ಕಾರು ಮಾರುಕಟ್ಟೆಯಲ್ಲಿ ಸಂಚಲವನ್ನು ಮೂಡಿಸುವ ನಿರೀಕ್ಷೆಯನ್ನಿಟ್ಟುಕೊಂಡಿದೆ.

ಶೀಘ್ರದಲ್ಲೇ ಬ್ರಿಯೊ ಬಿಡುಗಡೆ; ಶೋ ರೂಂ ತಲುಪಿದ ನೂತನ ಕಾರು

ಅಮೇಜ್ ನಲ್ಲಿ ಕ್ರೋಮ್ ಸ್ಪರ್ಶದ ಗ್ರಿಲ್ ಕಂಡುಬಂದಲ್ಲಿ ನೂತನ ಬ್ರಿಯೊದಲ್ಲಿ ಕಪ್ಪು ಪಟ್ಟಿಯ ಫ್ರಂಟ್ ಗ್ರಿಲ್ ಕೊಡಲಾಗಿದೆ. ಇದು ಕಾರಿಗೆ ಮುಂಭಾಗದಲ್ಲಿ ಕ್ರೀಡಾತ್ಮಕ ನೋಟವನ್ನು ನೀಡಲಿದೆ.

ಶೀಘ್ರದಲ್ಲೇ ಬ್ರಿಯೊ ಬಿಡುಗಡೆ; ಶೋ ರೂಂ ತಲುಪಿದ ನೂತನ ಕಾರು

ಹೊಸತಾದ ಫ್ರಂಟ್ ಬಂಪರ್, ದೊಡ್ಡದಾದ ರೇಡಿಯೇಟರ್ ಗ್ರಿಲ್ ಹಾಗೂ ನೂತನ ಹೆಡ್ ಲ್ಯಾಂಪ್ ಸೌಲಭ್ಯಗಳಿರಲಿದೆ. ಹಾಗಿದ್ದರೂ ಹಿಂಭಾಗದಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ.

ಶೀಘ್ರದಲ್ಲೇ ಬ್ರಿಯೊ ಬಿಡುಗಡೆ; ಶೋ ರೂಂ ತಲುಪಿದ ನೂತನ ಕಾರು

ಕಾರಿನೊಳಗೆ ಹೊಸತಾದ ಡ್ಯಾಶ್ ಬೋರ್ಡ್ ವಿನ್ಯಾಸವನ್ನು ಪ್ರತಿಪಾದಿಸಲಾಗಿದೆ. ಇಲ್ಲೂ ಕಪ್ಪು ಥೀಮ್ ಕಂಡುಬರಲಿದ್ದು, ಕ್ರೀಡಾತ್ಮಕತೆಯನ್ನು ಕಾಯ್ದುಕೊಳ್ಳಲಿದೆ.

ಶೀಘ್ರದಲ್ಲೇ ಬ್ರಿಯೊ ಬಿಡುಗಡೆ; ಶೋ ರೂಂ ತಲುಪಿದ ನೂತನ ಕಾರು

ವೈಶಿಷ್ಟ್ಯಗಳ ಬಗ್ಗೆ ಮೆಲುಕು ಹಾಕುವುದಾದ್ದಲ್ಲಿ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹೋಂಡಾ ಕನೆಕ್ಟ್ ಮೊಬೈಲ್ ಸೇವೆ, ಸ್ಟೀರಿಂಗ್ ವೀಲ್ ನಲ್ಲೇ ಆಡಿಯೋ ನಿಯಂತ್ರಣ, 2 ಡಿನ್ ಆಡಿಯೋ ಸಿಸ್ಟಂ ಮತ್ತು ಬ್ಲೂಟೂತ್ ಪ್ರಮುಖ ಆಕರ್ಷಣೆಯಾಗಲಿದೆ.

ಶೀಘ್ರದಲ್ಲೇ ಬ್ರಿಯೊ ಬಿಡುಗಡೆ; ಶೋ ರೂಂ ತಲುಪಿದ ನೂತನ ಕಾರು

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆಗಳಿಲ್ಲ. ಇದರ 1.2 ಲೀಟರ್ ಪೆಟ್ರೋಲ್ ಐ-ವಿಟೆಕ್ ಎಂಜಿನ್ 109 ಎನ್ ಎಂ ತಿರುಗುಬಲದಲ್ಲಿ 65 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ಸಿವಿಟಿ ಗೇರ್ ಬಾಕ್ಸ್ ಪಡೆಯಲಿದೆ.

Article Published On: Tuesday, September 27, 2016, 18:00 [IST]
English summary
Brio Facelift To Be Launched Soon; Vehicles Reach Dealerships
Read more on ಹೋಂಡಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+