ಹೊಸ ವರ್ಷದಿಂದ ಹೋಂಡಾ ಕಾರುಗಳು ದುಬಾರಿ

ಭಾರತದಲ್ಲಿರುವ ತನ್ನೆಲ್ಲ ಶ್ರೇಣಿಯ ಕಾರುಗಳಿಗೆ ಬೆಲೆ ಏರಿಕೆ ನೀತಿಯನ್ನು ಹೋಂಡಾ ಪ್ರಕಟಿಸಿದೆ.

Written By:

ದೇಶದ ಮುಂಚೂಣಿಯ ವಾಹನ ಸಂಸ್ಥೆಗಳ ಸಾಲಿಗೆ ಸೇರಿಕೊಂಡಿರುವ ಜಪಾನ್ ಮೂಲದ ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಸಹ ಹೊಸ ವರ್ಷದಿಂದ ಜಾರಿಗೆ ಬರುವಂತೆಯೇ ಬೆಲೆ ಏರಿಕೆ ನೀತಿಯನ್ನು ಪ್ರಕಟಿಸಿದೆ.

ದೇಶದಲ್ಲಿರುವ ತನ್ನೆಲ್ಲ ಕಾರುಗಳಿಗೆ ಶೇಕಡಾ 3ರಷ್ಟು ಬೆಲೆ ಏರಿಕೆಗೊಳಿಸಲು ಹೋಂಡಾ ನಿರ್ಧರಿಸಿದ್ದು, ಹೊಸ ದರ 2017 ಜನವರಿ ತಿಂಗಳಲ್ಲಿ ಜಾರಿಗೆ ಬರಲಿದೆ.

ಈ ವರ್ಷಾಂತ್ಯದ ವೇಳೆಯಲ್ಲಿ ದೇಶದ ಜನಪ್ರಿಯ ಸಂಸ್ಥೆಗಳೆಲ್ಲ ಆಕರ್ಷಕ ಆಫರುಗಳನ್ನು ಪ್ರಕಟಿಸಿದೆ. ಆದರೆ ಹೊಸ ವರ್ಷದಿಂದ ಬೆಲೆ ಏರಿಕೆ ಅನ್ವಯವಾಗಲಿದೆ. ಇದು ಗ್ರಾಹಕರಲ್ಲಿ ಸಿಹಿ ಕಹಿ ಅನುಭವನ್ನುಂಟು ಮಾಡಿದೆ.

ಭಾರತ ವಾಹನ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಜಾರಿಗೊಳಿಸುತ್ತಿರುವ ಏಳನೇ ಸಂಸ್ಥೆ ಹೋಂಡಾ ಆಗಿದೆ. ಇದಕ್ಕೂ ಮೊದಲು ಟಾಟಾ ಮೋಟಾರ್ಸ್, ನಿಸ್ಸಾನ್, ಟೊಯೊಟಾ, ಫೋಕ್ಸ್ ವ್ಯಾಗನ್, ಹ್ಯುಂಡೈ, ಮರ್ಸಿಡಿಸ್ ಬೆಂಝ್ ಸಂಸ್ಥೆಗಳು ಹೊಸ ವರ್ಷದಿಂದ ಬೆಲೆ ಏರಿಕೆ ಘೋಷಿಸಿದ್ದವು.

ನಿರ್ಮಾಣ ವೆಚ್ಚ ಹೆಚ್ಚಿರುವುದು, ಎಕ್ಸ್ ಚೇಂಜ್ ದರಗಳ ಏರಿಳಿತಗಳಿಂದಾಗಿ ಬೆಲೆ ಏರಿಕೆ ಅನಿವಾರ್ಯವಾಗಿ ಪರಿಣಮಿಸಿದೆ ಎಂದು ಹೋಂಡಾ ಪ್ರಕಟಣೆಯಲ್ಲಿ ತಿಳಿಸಿದೆ.

ಆದರೆ ಹೋಂಡಾದ ಯಾವೆಲ್ಲ ಮಾದರಿಗಳಿಗೆ ಎಷ್ಟೆಷ್ಟು ಬೆಲೆ ಏರಿಕೆಯಾಗಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಅಂದ ಹಾಗೆ 2016ನೇ ಸಾಲಿನಲ್ಲಿ ಹೋಂಡಾ ಎರಡು ಕಾರುಗಳನ್ನು ಬಿಡುಗಡೆಗೊಳಿಸಿತ್ತು. ಇವುಗಳಲ್ಲಿ ಹೋಂಡಾ ಬಿಆರ್-ವಿ ಕ್ರಾಸೋವರ್ ಮತ್ತು ಮುಂದಿನ ಜನಾಂಗದ ಹೈಬ್ರಿಡ್ ಸೆಡಾನ್ ಕಾರು ಸೇರಿಕೊಂಡಿದ್ದವು.

ಇದರ ಜೊತೆಗೆ ಅಮೇಜ್ ಕಾಂಪಾಕ್ಟ್ ಸೆಡಾನ್ ಮತ್ತು ಬ್ರಿಯೊ ಹ್ಯಾಚ್ ಬ್ಯಾಕ್ ಕಾರುಗಳ ಪರಿಷ್ಕೃತ ಮಾದರಿಯನ್ನು ಹೋಂಡಾ ಪರಿಚಯಿಸಿತ್ತು.

ದೇಶದಲ್ಲಿ ಮಾರಾಟದಲ್ಲಿರುವ ಹೋಂಡಾ ಕಾರುಗಳು:

ಬ್ರಿಯೊ ಹ್ಯಾಚ್ ಬ್ಯಾಕ್,
ಜಾಝ್ ಪ್ರೀಮಿಯಂ ಹ್ಯಾಚ್ ಬ್ಯಾಕ್,
ಅಮೇಜ್ ಕಾಂಪಾಕ್ಟ್ ಸೆಡಾನ್,
ಸಿಟಿ ಸೆಡಾನ್,
ಮೊಬಿಲಿಯೊ ಎಂಪಿವಿ,
ಬಿಆರ್-ವಿ ಕ್ರಾಸೋವರ್ ಎಸ್ ಯುವಿ,
ಹೋಂಡಾ ಸಿಆರ್-ವಿ,
ಅಕಾರ್ಡ್ ಹೈಬ್ರಿಡ್.

Click to compare, buy, and renew Car Insurance online

Buy InsuranceBuy Now

English summary
Honda Cars India To Increase Prices; Effective January 2017
Please Wait while comments are loading...

Latest Photos