ಹೊಚ್ಚ ಹೊಸ ಹೋಂಡಾ ಸಿಆರ್-ವಿ ಎಸ್‌ಯುವಿ ಅನಾವರಣ

By Nagaraja

ಅಮೆರಿಕದಲ್ಲಿ ಹೊಚ್ಚ ಹೊಸ ಹೋಂಡಾ ಸಿಆರ್-ವಿ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನವು ಭರ್ಜರಿ ಅನಾವರಣಗೊಂಡಿದೆ. ಐದನೇ ತಲೆಮಾರಿನ ಹೋಂಡಾ ಸಿಆರ್-ವಿ ಕಾರನ್ನು ಹೋಂಡಾ ಯುಎಸ್ ಎ ಡೆಟ್ರಾಯ್ಟ್ ನಲ್ಲಿ ಪ್ರದರ್ಶನಗೊಳಿಸಿದೆ. ಇದು ಹಿಂದಿನ ಮಾದರಿಗಿಂತಲೂ ಹೆಚ್ಚು ಉದ್ದಗಲತೆ ಹಾಗೂ ಎತ್ತರವನ್ನು ಪಡೆದಿದೆ.

ಹೊಚ್ಚ ಹೊಸ ಹೋಂಡಾ ಸಿಆರ್-ವಿ ಎಸ್‌ಯುವಿ ಅನಾವರಣ

ಸರಿ ಸುಮಾರು 20 ವರ್ಷಗಳಷ್ಟು ಹಿಂದೆ ಅಂದರೆ 1997ನೇ ಇಸವಿಯಲ್ಲಿ ಮೊದಲ ಬಾರಿಗೆ ಅಮೆರಿಕ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಹೋಂಡಾ ಸಿಆರ್-ವಿ ಇದುವರೆಗೆ ನಾಲ್ಕು ದಶಲಕ್ಷಕ್ಕೂ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಂಡಿದೆ.

ಹೊಚ್ಚ ಹೊಸ ಹೋಂಡಾ ಸಿಆರ್-ವಿ ಎಸ್‌ಯುವಿ ಅನಾವರಣ

2017 ಹೋಂಡಾ ಸಿಆರ್-ವಿ ಇಎಕ್ಸ್ ವೆರಿಯಂಟ್ ನಲ್ಲಿರುವ 1.5 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ 288 ಎನ್ ಎಂ ತಿರುಗುಬಲದಲ್ಲಿ 190 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಟಾಪ್ ಎಂಡ್ ಎಲ್ ಎಕ್ಸ್ ಆವೃತ್ತಿಯು 2.4 ಲೀಟರ್ ಫೋರ್ಡ್ ಸಿಲಿಂಡರ್ ಎಂಜಿನ್ ಪಡೆಯಲಿದ್ದು, 244 ಎನ್ ಎಂ ತಿರುಗುಬಲದಲ್ಲಿ 184 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇವೆರಡು ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆದಿದೆ.

ಹೊಚ್ಚ ಹೊಸ ಹೋಂಡಾ ಸಿಆರ್-ವಿ ಎಸ್‌ಯುವಿ ಅನಾವರಣ

ಐದನೇ ತಲೆಮಾರಿನ ಹೋಂಡಾ ಸಿಆರ್ ವಿ ಕಾರಿನಲ್ಲಿ ಹೊಸ ಚಾಸೀ ಜೋಡಣೆ ಮಾಡಲಾಗಿದ್ದು, ಇದರಿಂದಾಗಿ ಹಿಂದಿನ ಮಾದರಿಗಿಂತಲೂ 30 ಎಂಎಂ ಹೆಚ್ಚು ಉದ್ದ, 35 ಎಂಎಂ ಹೆಚ್ಚು ಅಗಲವನ್ನು ಪಡೆದಿದೆ. ಇದರಿಂದಾಗಿ ಕಾರಿನೊಳಗೆ ಅತ್ಯುತ್ತಮ ಸ್ಥಳಾವಕಾಶ ಸಿಗಲಿದೆ.

ಹೊಚ್ಚ ಹೊಸ ಹೋಂಡಾ ಸಿಆರ್-ವಿ ಎಸ್‌ಯುವಿ ಅನಾವರಣ

ಮುಂಭಾಗದಲ್ಲಿರುವ ಎ ಪಿಲ್ಲರ್ ತೆಳುವಾಗಿದ್ದು ಚಾಲನೆ ವೇಳೆ ಹೆಚ್ಚಿನ ಗೋಚರತೆ ಪ್ರದಾನ ಮಾಡಲಿದೆ.

ಹೊಚ್ಚ ಹೊಸ ಹೋಂಡಾ ಸಿಆರ್-ವಿ ಎಸ್‌ಯುವಿ ಅನಾವರಣ

ವಾಯುಬಲ ಸೆಳೆತವನ್ನು ಕಡಿಮೆ ಮಾಡಲು ಆಟೋಮ್ಯಾಟಿಕ್ ಶಟ್ಟರ್ ಗ್ರಿಲ್ ವ್ಯವಸ್ಥೆಯನ್ನು ಕೊಡಲಾಗಿದೆ. ಎಲ್ ಇಡಿ ಡೈನಾಮಿಕ್ ಲೈಟ್ಸ್ ಮತ್ತು ಐಚ್ಛಿಕ ಎಲ್ ಇಡಿ ಹೆಡ್ ಲೈಟ್ ಇದರಲ್ಲಿದೆ.

ಹೊಚ್ಚ ಹೊಸ ಹೋಂಡಾ ಸಿಆರ್-ವಿ ಎಸ್‌ಯುವಿ ಅನಾವರಣ

ಹ್ಯಾಂಡ್ಸ್ ಫ್ರಿ ಟೈಲ್ ಗೇಟ್, ಏಳು ಇಂಚುಗಳ ಟಚ್ ಸ್ಕ್ರೀನ್, ಕಲರ್ ಫುಲ್ ಚಾಲಕ ಕೋಣೆ, ಗಾರ್ಮಿನ್ ನೇಗಿಗೇಷನ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ವಾಯ್ಸ್ ಆಕ್ಟಿವೇಟಡ್ ವೈಶಿಷ್ಟ್ಯಗಳಿರಲಿದೆ.

ಹೊಚ್ಚ ಹೊಸ ಹೋಂಡಾ ಸಿಆರ್-ವಿ ಎಸ್‌ಯುವಿ ಅನಾವರಣ

ಇವೆಲ್ಲದರ ಜೊತೆಗೆ ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ರಿಮೋಟ್ ಸ್ಟ್ಯಾರ್ಟ್ ಮತ್ತು ರಿಯರ್ ಚಾರ್ಜಿಂಗ್ ಸಾಕೆಟ್ ಇದರಲ್ಲಿರಲಿದೆ.

ಹೊಚ್ಚ ಹೊಸ ಹೋಂಡಾ ಸಿಆರ್-ವಿ ಎಸ್‌ಯುವಿ ಅನಾವರಣ

ಸುರಕ್ಷತೆ ಬಗ್ಗೆ ಗಮನ ಹಾಯಿಸಿದರೆ ಘರ್ಷಣೆ ತಗ್ಗಿಸಲು ಬ್ರೇಕಿಂಗ್ ವ್ಯವಸ್ಥೆ, ರಸ್ತೆ ನಿರ್ಗಮನ ತಗ್ಗಿಸುವಿಕೆ, ಅಡಾಪ್ಟಿಕ್ ಕ್ರೂಸ್ ಕಂಟ್ರೋಲ್, ಲೇನ್ ಕೀಪಿಂಗ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಪತ್ತೆ ಹಚ್ಚುವಿಕೆ, ರಿಯರ್ ಕ್ರಾಸ್ ಟ್ರಾಫಿಕ್ ಮಾನಿಟರ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಆಟೋಮ್ಯಾಟಿಕ್ ಹೈ ಬೀಮ್ ಹೆಡ್ ಲೈಟ್ ವ್ಯವಸ್ಥೆಯಿರಲಿದೆ.

ಹೊಚ್ಚ ಹೊಸ ಹೋಂಡಾ ಸಿಆರ್-ವಿ ಎಸ್‌ಯುವಿ ಅನಾವರಣ

ಅಂದ ಹಾಗೆ ನೂತನ 2017 ಹೋಂಡಾ ಸಿಆರ್ ವಿ ನಿಕಟ ಭವಿಷ್ಯದಲ್ಲೇ ಭಾರತಕ್ಕೂ ಕಾಲಿಡಲಿದೆ. ಇದು ಪ್ರೀಮಿಯಂ ಎಸ್ ಯುವಿ ವಿಭಾಗದಲ್ಲಿ ಮತ್ತಷ್ಟು ಸ್ಪರ್ಧೆಗೆ ಕಾರಣವಾಗಲಿದೆ.

Most Read Articles

Kannada
Read more on ಹೋಂಡಾ
English summary
Honda Showcases The Fifth Iteration Of Its CR-V Premium SUV
Story first published: Saturday, October 15, 2016, 16:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X