2020ರ ವೇಳೆಗೆ ಹೋಂಡಾ ಪ್ಲಗ್ ಇನ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರು

2020ರ ವೇಳೆಯಾಗುವಾಗ ಎಲೆಕ್ಟ್ರಿಕ್ ಮತ್ತು ಪ್ಲಗ್ ಇನ್ ಹೈಬ್ರಿಡ್ ಕಾರುಗಳನ್ನು ಬಿಡುಗಡೆ ಮಾಡಲು ಹೋಂಡಾ ಯೋಜನೆ ಹಾಕಿಕೊಂಡಿದೆ.

By Nagaraja

ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆಯಾಗಿರುವ ಹೋಂಡಾ, 2020ರ ವೇಳೆಯಾಗುವಾಗುವ ಪ್ಲಗ್ ಇನ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿದೆ. ಈ ತಂತ್ರಗಾರಿಕೆ ಹೋಂಡಾ ಸಣ್ಣ ಕಾರುಗಳಿಗೂ ವರ್ಗಾವಣೆಯಾಗಲಿದೆ ಎಂಬುದು ಇಲ್ಲಿನ ಗಮನಾರ್ಹ ವಿಷಯ.

2020ರ ವೇಳೆಗೆ ಹೋಂಡಾ ಪ್ಲಗ್ ಇನ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರು

ಪರಿಸರ ಸ್ನೇಹಿ ವಾಹನಗಳ ನಿರ್ಮಾಣದಲ್ಲಿ ಕಾರ್ಯ ಮಗ್ನವಾಗಿರುವ ಹೋಂಡಾ, ಮಾಲಿನ್ಯ ಮಟ್ಟವನ್ನು ಕಡಿತ ಮಾಡುವಲ್ಲಿ ತನ್ನ ಪಾತ್ರವನ್ನು ನಿಭಾಯಿಸಲಿದೆ.

2020ರ ವೇಳೆಗೆ ಹೋಂಡಾ ಪ್ಲಗ್ ಇನ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರು

ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳು ಭವಿಷ್ಯದ ವಾಹಕವಾಗಿ ಪರಿಗಣಿಸಲಾಗುತ್ತಿದೆ. ಈ ಕಾರುಗಳನ್ನು ಮೊದಲು ಯುರೋಪ್ ಮಾರುಕಟ್ಟೆಗೆ ಪರಿಚಯಿಸಲಾಗುವುದು.

2020ರ ವೇಳೆಗೆ ಹೋಂಡಾ ಪ್ಲಗ್ ಇನ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರು

ಅದೇ ಹೊತ್ತಿಗೆ ಹೊಸ ಸಿವಿಕ್ ಹ್ಯಾಚ್ ಬ್ಯಾಕ್ ಕಾರಿನಲ್ಲಿ 1.0 ಲೀಟರ್ ಸಣ್ಣ ಪೆಟ್ರೋಲ್ ಎಂಜಿನ್ ಗೆ ಆದ್ಯತೆ ಕೊಡಲಾಗುತ್ತಿದೆ ಎಂಬುದನ್ನು ಹೋಂಡಾ ಬಹಿರಂಗಪಡಿಸಿದೆ.

2020ರ ವೇಳೆಗೆ ಹೋಂಡಾ ಪ್ಲಗ್ ಇನ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರು

10ನೇ ತಲೆಮಾರಿನ ಸಿವಿಕ್ ಕಾರು ಹೈಬ್ರಿಡ್ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಗಿಟ್ಟಿಸಿಕೊಳ್ಳಲಿದೆ. ತನ್ಮೂಲಕ ವಾಹನ ಮಾರುಕಟ್ಟೆ ಬದಲಾವಣೆಯತ್ತ ಹಾದಿ ಹಿಡಿಯಲಿದೆ.

2020ರ ವೇಳೆಗೆ ಹೋಂಡಾ ಪ್ಲಗ್ ಇನ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರು

ಅದೇ ಹೊತ್ತಿಗೆ ಜನಪ್ರಿಯ ಜಾಝ್ ಕಾರಿನಲ್ಲಿ ಎಲೆಕ್ಟ್ರಿಕ್ ಮೋಟಾರು ಪಡೆಯಲಿದೆ. ಇಲ್ಲಿ ಸಣ್ಣ ಕಾರುಗಳತ್ತವೂ ಹೋಂಡಾ ತನ್ನ ಚಿತ್ತ ಹಾಯಿಸಿದೆ.

2020ರ ವೇಳೆಗೆ ಹೋಂಡಾ ಪ್ಲಗ್ ಇನ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರು

ವಾಹನೋದ್ಯಮದ ವರದಿಗಳ ಪ್ರಕಾರ 2030ರ ವೇಳೆಯಾಗುವಾಗ ಒಟ್ಟು ಕಾರು ಮಾರಾಟದ ಮೂರರಲ್ಲಿ ಎರಡು ಪಾಲು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳು ಆಕ್ರಮಿಸಿಕೊಂಡಿರಲಿದೆ.

2020ರ ವೇಳೆಗೆ ಹೋಂಡಾ ಪ್ಲಗ್ ಇನ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರು

ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ಕೆಳಗಡೆ ಕೊಟ್ಟಿರುವ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಿರಿ.

Most Read Articles

Kannada
Read more on ಹೋಂಡಾ
English summary
Honda To Launch Plug-In Hybrid And Electric Models By 2020
Story first published: Thursday, December 15, 2016, 10:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X